ಶಾಲೆಯಲ್ಲಿ ಬ್ರೆಡ್‌ ಮಾರಾಟ ಮಾಡಿ iPhone-14 ಖರೀದಿಸಿದ 12ರ ಬಾಲಕಿ

Public TV
2 Min Read

ದುಬೈ: ಸಾಧಿಸುವ ಛಲವಿದ್ದರೆ ಸಾಕು ಏನುಬೇಕಾದರೂ ಮಾಡಬಹುದು ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳಿವೆ. ಅದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಬಾಲಕಿಯೊಬ್ಬಳು ತನ್ನ ಸ್ವಂತ ದುಡಿಮೆಯಿಂದ 12ನೇ ವಯಸ್ಸಿಗೇ ಐಫೋನ್‌ (iPhone) ಖರೀದಿಸಿ ಸುದ್ದಿಯಾಗಿದ್ದಾಳೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ (Dubai City) ನಗರದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಬಿಯಾಂಕಾ ಜೇಮಿ ವರಿಯಾವಾ ಅವರ ಪುತ್ರಿ ಬಿಯಾಂಕಾ ತಾನೇ ತಯಾರಿಸಿದ ಬ್ರೆಡ್‌ ಮಾರಾಟ ಮಾಡಿ 6 ವಾರಗಳಲ್ಲಿ 3 ಸಾವಿರ ದಿರ್ಹಮ್ (67,362ರೂ.) ಗಳಿಸಿ ಐಫೋನ್‌-14 (iPhone 14) ಖರೀದಿಸಿದ್ದಾಳೆ. ಈ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾಳೆ. ಇದನ್ನೂ ಓದಿ: ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

ಐಫೋನ್‌-14 ಹಿಂದಿನ ಕಥೆಯೇ ರೋಚಕ?
ದುಬೈ ನಗರದಲ್ಲಿ 7ನೇ ತರಗತಿ ಓದುತ್ತಿದ್ದ ಬಿಯಾಂಕಾ ಜೇಮಿ ವರಿಯಾವಾ ಐಫೋನ್‌ ತೆಗೆದುಕೊಳ್ಳಲೇಬೇಕೆಂದು ಬಯಸಿದ್ದಳು. ಆದರೆ ಮಗಳಿಗೆ ಐಫೋನ್‌ ಕೊಡಿಸುವಷ್ಟು ಹಣ ಪೋಷಕರ ಬಳಿ ಇರಲಿಲ್ಲ. ಇದನ್ನೂ ಓದಿ: ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

ಒಂದು ದಿನ ಬಿಯಾಂಕಾಳ ತಾಯಿ ಮಧ್ಯಾಹ್ನದ ಊಟಕ್ಕಾಗಿ ತಾನೇ ತಯಾರಿಸಿದ ಬ್ರೇಡ್‌ ಅನ್ನು ಪ್ಯಾಕ್‌ ಮಾಡಿಕೊಟ್ಟಿದ್ದರು. ಶಾಲೆಗೆ ಹೋದಾಗ ಬಿಯಾಂಕಾ ಅದನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ತಿಂದಿದ್ದಳು. ಬಿಯಾಂಕಾ ತಂದಿದ್ದ ಬ್ರೆಡ್‌ ತನ್ನ ಸ್ನೇಹಿತರಿಗೆಲ್ಲಾ ತುಂಬಾನೆ ಇಷ್ಟವಾಯಿತು. ಮರುದಿನ ಅಂತಹದ್ದೇ ಏನಾದರೂ ತರುವಂತೆ ಕೇಳಿಕೊಂಡರು. ಇದರಿಂದ ಆಕೆಗೆ ತಾನೇ ಬ್ರೆಡ್‌ ತಯಾರಿಸಿ ಏಕೆ ಮಾರಾಟ ಮಾಡಬಾರದು ಎಂಬ ಆಲೋಚನೆ ಬಂದಿತು.

ಬಿಯಾಂಕಾಳ ಪೋಷಕರು ಈ ಹಿಂದೆ ದುಬೈನ ಪಂಚತಾರಾ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದರು. ಅಲ್ಲಿಯೇ ಬ್ರೆಡ್‌ ಮಾಡುವುದನ್ನೂ ಕಲಿತುಕೊಂಡಿದ್ದರು. ಬಿಯಾಂಕ ಸಹ ತನ್ನ ಪೋಷಕರಿಗೆ ಆಗಾಗ್ಗೆ ಸಹಾಯ ಮಾಡುತ್ತಾ ಬ್ರೆಡ್‌ ಮಾಡೋದನ್ನ ಕಲಿತುಕೊಂಡಿದ್ದಳು. ಇದರಿಂದ ತಾನೇ ಬ್ರೆಡ್‌ ತಯಾರಿಸಿ ಮಾರಾಟ ಮಾಡಲು ಮುಂದಾದಳು. ಶಾಲೆಯಲ್ಲಿ ಬ್ರೆಡ್‌ ಮಾರಾಟ ಮಾಡಲು ಹೋದಾಗ ಅನೇಕ ಸ್ನೇಹಿತರು ಗೇಲಿ ಮಾಡಿದರು. ಅದಕ್ಕೆಲ್ಲ ಹಿಂದೆ ಸರಿಯದ ಬಿಯಾಂಕಾ ತನ್ನ ಗುರಿಯತ್ತ ಮುನ್ನುಗ್ಗಿದಳು. ಬ್ರೆಡ್‌ ಮಾರಾಟ ಮಾಡಿ 6 ವಾರಗಳಲ್ಲಿ 3 ಸಾವಿರ ದಿರ್ಹಮ್ (67,362ರೂ.) ಗಳಿಸಿ ಐಫೋನ್‌ ಖರೀದಿಸಿದಳು. ಅಲ್ಲದೇ ತಂದೆ ಜೆಮಿ ವರಿಯಾವ ಅವರಿಗೆ 100 ದಿರ್ಹಮ್ (2 ಸಾವಿರದ 245 ರೂಪಾಯಿ) ನೀಡಿ ಹಣದಿಂದ ವೃತ್ತಿ ಆರಂಭಿಸುವಂತೆ ಕೇಳಿಕೊಂಡಳು. ಮಗಳ ಈ ವಿಚಾರ ತಿಳಿದು ಪೋಷಕರು ಸಂತಸಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *