ನೆನಪಿರಲಿ ಪ್ರೇಮ್ ಪುತ್ರಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ: ಹೀರೋ ಯಾರು?

Public TV
2 Min Read

ಮೊನ್ನೆಯಷ್ಟೇ ನಟಿ ಮಾಲಾಶ್ರೀ ಮಗಳು ಚಿತ್ರೋದ್ಯಮಕ್ಕೆ ಪ್ರವೇಶ ಮಾಡಿದ್ದರು. ಈ ಬೆನ್ನಲ್ಲೇ ಮತ್ತೋರ್ವ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. ಇವರನ್ನು ಚಿತ್ರೋದ್ಯಮಕ್ಕೆ ಪರಿಚಯ ಮಾಡುತ್ತಿರುವುದು ಡಾಲಿ ಧನಂಜಯ್ ಎನ್ನುವುದು ವಿಶೇಷ. ಡಾಲಿ ಪಿಕ್ಚರ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾದ ಮೂಲಕ ಅಮೃತಾ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರೇಮ್, ‘ನನ್ನ ಮಗುವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ, ನಿಮ್ಮ ಆಶೀರ್ವಾದ ಪ್ರೀತಿ , ಪ್ರೋತ್ಸಾಹ ಅಭಿಮಾನವಿರಲಿ’ ಎಂದು ಬರೆದುಕೊಂಡಿದ್ದಾರೆ. ಡಾಲಿ ಧನಂಜಯ್ ನಿರ್ಮಾಣದಲ್ಲಿ  ಈ ಸಿನಿಮಾ ಮೂಡಿ ಬರುತ್ತಿರುವುದರಿಂದ, ವಿಭಿನ್ನ ಪಾತ್ರದ ಮೂಲಕವೇ ಪ್ರೇಮ್ ಪುತ್ರಿ ಸಿನಿಮಾ ರಂಗ ಪ್ರವೇಶ ಮಾಡುತ್ತಿರುವುದು ವಿಶೇಷ. ಅಂದಹಾಗೆ ಈ ಸಿನಿಮಾಗೆ ಟಗರು ಪಲ್ಯ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: `ಗಾಲ್ವಾನ್ ಹಾಯ್’ ಎಂದ ನಟಿಗೆ ಚಳಿ ಬಿಡಿಸಿದ ಸಚಿವ – ಕಾನೂನು ಕ್ರಮಕ್ಕೆ ಚಿಂತನೆ

ಗರು ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಟ ಡಾಲಿ ಧನಂಜಯ್ ಸ್ಯಾಂಡಲ್ ವುಡ್ ಅಂಗಳದ ಬಹು ಬೇಡಿಕೆಯ ನಟ. ಆದ್ರೆ ಕೇವಲ ನಟನಾಗಿ ಮಾತ್ರ ಉಳಿಯದೇ ನಿರ್ಮಾಪಕನಾಗಿಯೂ ಡಾಲಿ ಗಮನ ಸೆಳೆಯುತ್ತಿದ್ದಾರೆ. ಡಾಲಿ ಪಿಕ್ಚರ್ಸ್ ಮೂಲಕ ಸಿನಿಮಾ ನಿರ್ಮಾಣವನ್ನು ಮಾಡುತ್ತಿದ್ದು ಮೊದಲೆರಡು ಸಿನಿಮಾವಾಗಿ ‘ಬಡವ ರಾಸ್ಕಲ್’ ಹಾಗೂ ‘ಹೆಡ್ ಬುಶ್’ ನಿರ್ಮಾಣ ಮಾಡಲಾಗಿತ್ತು. ಇತ್ತೀಚೆಗೆ ಡಾಲಿ ಪಿಕ್ಚರ್ಸ್ ಮೂರನೇ ಸಿನಿಮಾ ‘ಟಗರು ಪಲ್ಯ’ ಅನೌನ್ಸ್ ಆಗಿತ್ತು. ಮೋಷನ್ ಪೋಸ್ಟರ್ ಮೂಲಕ ಸುದ್ದಿಯಾಗಿದ್ದ ‘ಟಗರು ಪಲ್ಯ’ ಇದೀಗ ಸೆಟ್ಟೇರೋಕೆ ರೆಡಿಯಾಗಿದೆ.

‘ಟಗರು ಪಲ್ಯ’ ಮೂಲಕ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆ ಮಾಡಿಕೊಟ್ಟಿದೆ. ಚಿತ್ರದಲ್ಲಿ ನಾಗಭೂಷಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಮೂಲಕ ಉಮೇಶ್ ಕೆ ಕೃಪ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯೋಗರಾಜ್ ಭಟ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ‘ಟಗರು ಪಲ್ಯ’ ಕಂಟೆಂಟ್ ಆಧಾರಿತ ಸಿನಿಮಾವಾಗಿದ್ದು, ಒಂದೊಳ್ಳೆ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಲಿದೆ. ಸಿನಿಮಾ ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದು ನಿರ್ದೇಶಕ ಉಮೇಶ್ ಕೆ ಕೃಪ ತಿಳಿಸಿದ್ದಾರೆ.

ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್. ಕೆ. ರಾವ್ ಕ್ಯಾಮೆರಾ ವರ್ಕ್, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.  ಅಮೃತಾ ಸಿನಿಮಾದ ನಾಯಕಿಯಾದರೆ, ರಂಗಾಯಣ ರಘು, ನಾಗಭೂಷಣ್, ತಾರಾ, ಶರತ್ ಲೋಹಿತಾಶ್ವ ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *