ಎಲ್ಲಾ ಮುಸ್ಲಿಮರನ್ನ ಕೊಂದು ಹಿಂದೂ ರಾಷ್ಟ್ರ ನಿರ್ಮಾಣ ಮಾಡಿ: ಖಾಲಿದ್ ಆಕ್ರೋಶ

By
2 Min Read

ಬೆಂಗಳೂರು: ಎಲ್ಲಾ ಮುಸ್ಲಿಮರನ್ನು ಕೊಂದು ಹಿಂದೂ ರಾಷ್ಟ್ರ ನಿರ್ಮಾಣ ಮಾಡಿ ಎಂದು ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲಿದ್ ಆಕ್ರೋಶ ವ್ಯಕ್ತಪಡಿಸಿದರು.

ಕುಕ್ಕೆ ಸುಬ್ರಹ್ಮಣ್ಯದ (Kukke Sri Subrahmanya Swami Temple) ಚಂಪಾಷಷ್ಠಿಯಲ್ಲಿ ಮುಸ್ಲಿಂ ವ್ಯಾಪಾರ ಬಹಿಷ್ಕಾರ ವಿಚಾರವಾಗಿ ಮಾತನಾಡಿದ ಅವರು, ಮುಸ್ಲಿಂ ಧರ್ಮದ ಒಬ್ಬ ವ್ಯಕ್ತಿ ತಪ್ಪು ಮಾಡಿದ್ರೆ ಯಾವೊಬ್ಬ ಮುಸ್ಲಿಮರು ಅವರ ಪರವಾಗಿ ನಿಲ್ಲುವುದಿಲ್ಲ. ಬೇರೆ ಧರ್ಮಗಳಲ್ಲಿ ತಪ್ಪು ಮಾಡಿದವರ ಪರವಾಗಿ ನಿಲ್ಲುವುದನ್ನು ನಾವು ನೋಡಿದ್ದೇವೆ. ಮುಸ್ಲಿಂ ಮಹಿಳೆ ಮೇಲೆ ರೇಪ್ ಮಾಡಿದ 12 ಜನರು ಜೈಲಿಂದ ಹೊರಗಡೆ ಬಂದಾಗ ಸ್ವಾಗತ ಮಾಡಿದ್ದಾರೆ. ಮುಸ್ಲಿಂ ಅವರನ್ನು ಕೊಂದು ಜೈಲಿಂದ ಹೊರಗಡೆ ಬಂದವರನ್ನ ರಾಜಾತಿಥ್ಯ ನೀಡಿ, ರಾಜಕೀಯ ವ್ಯಕ್ತಿಯಾಗಿ ಬೆಳೆಸಿದ್ದಾರೆ ಎಂದು ಕಿಡಿಕಾರಿದರು.

ಮುಸ್ಲಿಂ ಸಮುದಾಯದಲ್ಲಿ ಒಂದು ತಪ್ಪು ಮಾಡ್ತೇವೆ. ತಪ್ಪು ನಡೆದಾಗ ಮೌನವಾಗಿ ಇರುತ್ತೇವೆ. ಮುಸ್ಲಿಂ ವ್ಯಾಪಾರ ವಿರೋಧ ಮಾಡ್ತೀರಾ ಅಂದ್ರೆ, ಮುಸ್ಲಿಂ ರಾಷ್ಟ್ರಗಳಿಂದ ನೀವು ಯಾವುದನ್ನು ಖರೀದಿ ಮಾಡಬೇಡಿ ಎಂದ ಅವರು, ಒಂದು ಸಮಾಜ ಶಾಂತಿ ಇರಬೇಕು ಅಂದರೆ ಎಲ್ಲಾ ಜಾತಿಯರು ಚೆನ್ನಾಗಿರಬೇಕು. ಅದು ಅವಶ್ಯಕತೆ ಹಾಗೂ ಅನಿವಾರ್ಯತೆ ಕೂಡವಾಗಿದೆ. ಇಲ್ಲಾಂದ್ರೆ ಎಲ್ಲಾ ಮುಸ್ಲಿಮರನ್ನ ಕೊಂದು ಹಿಂದೂ ರಾಷ್ಟ್ರ ನಿರ್ಮಾಣ ಮಾಡಿ ಎಂದು ಕಿಡಿಕಾರಿದರು.

kukke subramanya

ಮುಸ್ಲಿಂ ವ್ಯಾಪಾರ ಬಹಿಷ್ಕಾರ : ರಾಜ್ಯದ ಕರಾವಳಿಯಲ್ಲಿ ಕಳೆದ ವರ್ಷ ಶುರುವಾಗಿದ್ದ ಧರ್ಮ ದಂಗಲ್ ಮತ್ತೆ ಸದ್ದು ಮಾಡ್ತಿದೆ. ಇಷ್ಟು ದಿನ ತಣ್ಣಗಿದ್ದ ಧರ್ಮದ ವಿಚಾರಗಳು ಇದೀಗ ಬಾಂಬ್ ಸ್ಫೋಟದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿಯ ಕುಕ್ಕೆ ಸುಬ್ರಹ್ಮಣ್ಯದ ಷಷ್ಠಿ ಮಹೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಡೆಸದಂತೆ ನಿಷೇಧ ಹೇರಬೇಕೆಂದು ಹಿಂದೂ ಜಾಗರಣ ವೇದಿಕೆಯ ಸುಬ್ರಹ್ಮಣ್ಯ ಘಟಕ ಬ್ಯಾನರ್ ಅಳವಡಿಸಿದೆ. ಇದನ್ನೂ ಓದಿ: ಮತ್ತೆ ಧರ್ಮ ದಂಗಲ್ ಶುರು- ಕುಕ್ಕೆಯಲ್ಲಿ ಷಷ್ಠಿ ವೇಳೆ ಹಿಂದೂಯೇತರರ ವ್ಯಾಪಾರಕ್ಕೆ ನಿಷೇಧ

ಕುಕ್ಕೆ ಸುಬ್ರಹ್ಮಣ್ಯದ ಜಾತ್ರಾ ಮಹೋತ್ಸವವಾದ ಚಂಪಾ ಷಷ್ಠೀಯ ಸಂದರ್ಭದಲ್ಲಿ ದೇವಸ್ಥಾನದ ವಠಾರದಲ್ಲಿ ಸಾಕಷ್ಟು ಸಂಖ್ಯೆಯ ತಾತ್ಕಾಲಿಕ ವ್ಯಾಪಾರ ಮಳಿಗೆಗಳನ್ನು ಹಾಕಲಾಗುತ್ತದೆ. ಪ್ರತಿವರ್ಷ ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲಾ ಜಾತಿ ಧರ್ಮದವರೂ ಇಲ್ಲಿ ವ್ಯಾಪಾರ ನಡೆಸುತ್ತಿದ್ದರು. ಆದರೆ ಈ ಬಾರಿ ಹಿಂದೂ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ವ್ಯಾಪಾರ ನಡೆಸದಂತೆ ತಡೆಯಲು ಪ್ರಯತ್ನಿಸಿದ್ದಾರೆ. ಇದು ಚರ್ಚೆಗೆ ವೇದಿಕೆಯಾಗಿದ್ದು ಪರ-ವಿರೋಧಗಳು ಆರಂಭಗೊಂಡಿದೆ. ಇದನ್ನೂ ಓದಿ: ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್‌ – ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *