ಬಿಗ್ ಬಾಸ್ ನಂತರ ಮದುವೆನಾ- ಸಿನಿಮಾನಾ: ಸಾನ್ಯ ಅಯ್ಯರ್ ಹೇಳಿದ್ದೇನು?

Public TV
1 Min Read

ಷ್ಟು ದಿನ ಪುಟ್ಟಗೌರಿಯಾಗಿ (Puttagowri) ಮನೆಮಾತಾಗಿದ್ದ ನಟಿ ಸಾನ್ಯ ಅಯ್ಯರ್(Sanya Iyer) ಬಿಗ್ ಬಾಸ್ ಸ್ಪರ್ಧಿ ಆಗಿ ಹೈಲೈಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಸಾನ್ಯ ಔಟ್ ಆದ್ಮೇಲೆ ಏನ್ಮಾಡ್ತಿದ್ದಾರೆ ಎಂಬುದು ಹಲವರ ಪ್ರಶ್ನೆಯಾಗಿದೆ. ಸಾನ್ಯ ಮುಂದೇನು ಮಾಡ್ತಾರೆ ಎಂಬುದು ಸಾನ್ಯ ಅಭಿಮಾನಿಗಳಿಗೆ ಪ್ರಶ್ನೆಯಾಗಿದೆ. ಅದಕ್ಕೀಗ ಉತ್ತರವು ಸಿಕ್ಕಿದೆ.

ಸಾಕಷ್ಟು ಸೀರಿಯಲ್, ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ನಟಿ ಸಾನ್ಯ ಬಿಗ್ ಬಾಸ್ (Bigg Boss Kannada) ಒಟಿಟಿಗೆ ಕಾಲಿಟ್ಟಿದ್ದರು. ಬಳಿಕ ಟಿವಿ ಬಿಗ್ ಬಾಸ್‌ನಲ್ಲೂ ಮೋಡಿ ಮಾಡಿದ್ದರು. ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ನಟಿಯ ಆಟದ ಜೊತೆ ರೂಪೇಶ್ ಶೆಟ್ಟಿ (Roopesh Shetty) ಮತ್ತು ಸಾನ್ಯ ಗೆಳೆತನವು ಹೈಲೈಟ್ ಆಗಿತ್ತು. ಸಾನ್ಯ ಎಲಿಮಿನೇಟ್ ಆದ ವೇಳೆ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇದೀಗ ಫ್ರೀ ಬರ್ಡ್ ಆಗಿ ಸಾನ್ಯ ಮುಂದೇನು ಮಾಡ್ತಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

ದೊಡ್ಮನೆಯಿಂದ ಹೊರಬಂದ ಮೇಲೆ ಸಾನ್ಯ, ಮಾಧ್ಯಮ ಕಣ್ಣಿಗೂ ಬೀಳದೇ, ಸಂದರ್ಶನಕ್ಕೂ ಯಾವುದೇ ರಿಯಾಕ್ಷನ್ ಕೊಡದೇ ಫುಲ್ ಸೈಲೆಂಟ್ ಆಗಿದ್ದಾರೆ. ಇತ್ತೀಚೆಗೆ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಬಿಗ್ ಬಾಸ್ ನಂತರ ಮುಂದೇನು ಮಾಡ್ತೀರಾ ಎಂದು ಕೇಳಿದ್ದಾರೆ. ಜೊತೆಗೆ ಮದುವೆ ಬಗ್ಗೆ ವಿಚಾರಿಸಿದ್ದಾರೆ. ಅದಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ

ದೊಡ್ಮನೆಯಿಂದ ಹೊರಬಂದ ಮೇಲೆ ಸಾಕಷ್ಟು ಕಥೆ ಕೇಳುತ್ತಿದ್ದೇನೆ. ಮುಂದೆ ನಾನು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ನನ್ನ ಮದುವೆಯ ಬಗ್ಗೆ ಸದ್ಯಕ್ಕೆ ಯಾವುದೇ ಪ್ಲ್ಯಾನ್ಸ್ ಇಲ್ಲಾ ಎಂದು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article