25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್

Public TV
2 Min Read

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ತಮಿಳುನಾಡು ಕ್ರಿಕೆಟಿಗ ಘಟಾನುಘಟಿಗಳ ದಾಖಲೆಗಳನ್ನ ಉಡೀಸ್ ಮಾಡಿ ಹೊಸ ವಿಶ್ವದಾಖಲೆ ಬರೆದಿದ್ದಾರೆ.

ವಿಜಯ್ ಹಜಾರೆ ಟ್ರೋಫಿ 2022ರಲ್ಲಿ ತಮಿಳುನಾಡು ಬ್ಯಾಟ್ಸ್‌ಮ್ಯಾನ್‌ 26 ವರ್ಷದ ನಾರಾಯಣ್ ಜಗದೀಶನ್ 141 ಎಸೆತಗಳಲ್ಲಿ ಭರ್ಜರಿ 277 ರನ್ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದನ್ನೂ ಓದಿ: 3ನೇ T20 ಪಂದ್ಯದಿಂದ ವಿಲಿಯಮ್ಸನ್ ಔಟ್ – ಕಳೆದ ಪಂದ್ಯದ ಹ್ಯಾಟ್ರಿಕ್ ವೀರನಿಗೆ ನಾಯಕತ್ವದ ಪಟ್ಟ

ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳ ಪರ ಟಾಸ್ ಸೋತು ಬ್ಯಾಟಿಂಗ್ ಮಾಡಿದ ತಮಿಳುನಾಡು 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 506 ರನ್ ಕಲೆಹಾಕಿತು. ಈ ಪಂದ್ಯದಲ್ಲಿ ಆರಂಭಿಕನಾಗಿದ್ದ ಸಾಯಿ ಸುದರ್ಶನ್ 102 ಎಸೆತಗಳಲ್ಲಿ 154 ರನ್ ಸಿಡಿಸಿ ಮಿಂಚಿದರು. ಮತ್ತೊಬ್ಬ ಆರಂಭಿಕನಾಗಿ ಕಣಕ್ಕಿಳಿದಿದ್ದ ವಿಕೆಟ್ ಕೀಪರ್ ಎನ್. ಜಗದೀಶನ್ ತನ್ನ ಅಮೋಘ ಫಾರ್ಮ್ ಮುಂದುವರಿಸಿ 141 ಎಸೆತಗಳಲ್ಲಿ 277 ರನ್ ಚಚ್ಚಿದರು. ಇದನ್ನೂ ಓದಿ: ಶತಕ ಸಿಡಿಸಿ ಮೆರೆದ ಸೂರ್ಯ – ಕೀವಿಸ್ ಕಿವಿ ಹಿಂಡಿದ ಭಾರತ

196.45 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಜಗದೀಶನ್ ಇನ್ನಿಂಗ್ಸ್‌ನಲ್ಲಿ 25 ಬೌಂಡರಿ ಮತ್ತು 15 ಸಿಕ್ಸರ್ ಪೇರಿಸಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಸಾಯಿ ಸುದರ್ಶನ್ 154 ರನ್ ಗಳಿಸಿದರು. ವಿಜಯ್ ಹಜಾರೆ ಟ್ರೋಫಿ 2022ರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್‌ಮ್ಯಾನ್‌ಗಳ ಲಿಸ್ಟ್‌ನಲ್ಲಿ ಜಗದೀಶನ್ ಮೊದಲ ಸ್ಥಾನದಲ್ಲಿದ್ದಾರೆ. 5 ಇನ್ನಿಂಗ್ಸ್‌ಗಳಲ್ಲಿ 522 ರನ್ ಕಲೆಹಾಕಿರುವ ಜಗದೀಶನ್ ಒಟ್ಟಾರೆ 41 ಪಂದ್ಯಗಳಲ್ಲಿ 1,700ರನ್ ಕಲೆಹಾಕಿದ್ದಾರೆ. ಇದರಲ್ಲಿ 7 ಶತಕ ಹಾಗೂ ಅನೇಕ ಅರ್ಧಶತಕಗಳು ಒಳಗೊಂಡಿವೆ. ಇದನ್ನೂ ಓದಿ: ಸಿಕ್ಸರ್‌ ವೀರ ಸೂರ್ಯ Vs ಎಬಿಡಿ – ಇಬ್ಬರಲ್ಲಿ ಯಾರು ಬೆಸ್ಟ್‌? – ಟ್ವಿಟ್ಟರ್‌ನಲ್ಲಿ ಟ್ರೆಂಡ್‌

ಇದುವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಸಿಡಿಸಿದ್ದ ತಂಡಗಳ ಪೈಕಿ ಇಂಗ್ಲೆಂಡ್ 498 ರನ್ ಗಳಿಸಿ ಅಗ್ರಸ್ಥಾನದಲ್ಲಿತ್ತು. ನೆದರ್‌ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 498 ರನ್ ಗಳಿಸಿತ್ತು. ಈ ದಾಖಲೆಯನ್ನು ಉಡೀಸ್ ಮಾಡಿರುವ ತಮಿಳುನಾಡು ತಂಡ 506 ರನ್‌ಗಳನ್ನು ಗಳಿಸುವ ಮೂಲಕ ಇಂಗ್ಲೆಂಡ್ ದಾಖಲೆಯನ್ನು ಮುರಿದಿದೆ. ಇದೀಗ ತಮಿಳುನಾಡು ಮೊದಲ ಸ್ಥಾನದಲ್ಲಿದ್ದರೆ, 498 ರನ್ ಗಳಿಸಿದ ಇಂಗ್ಲೆಂಡ್ 2 ಮತ್ತು 4ನೇ ಸ್ಥಾನವನ್ನು ಹಂಚಿಕೊಂಡಿದೆ. ಸರ್ರೆ 3ನೇ ಸ್ಥಾನ (496) ಹಾಗೂ 5ನೇ ಸ್ಥಾನದಲ್ಲಿ ಭಾರತ-ಎ ತಂಡ (458) ಇದೆ.

ಅಗ್ರಸ್ಥಾನಕ್ಕೇರಿದ ನಾರಾಯಣ್: 277 ರನ್ ಬಾರಿಸಿ ಹೊಸ ದಾಖಲೆ ಬರೆದಿರುವ ನಾರಾಯಣ್ ಜಗದೀಶನ್ ಏಕದಿನ ಕ್ರಿಕೆಟ್ ನಲ್ಲೂ ಅತಿಹೆಚ್ಚು ರನ್‌ಗಳಿಸಿದವರ ಪೈಕಿ ಮೊದಲಿಗರಾಗಿದ್ದಾರೆ. 268 ರನ್ ಗಳಿಸಿದ ಅಲಿಸ್ಟೇರ್ ಬ್ರೌನ್ ಹಾಗೂ 264 ರನ್ ಚಚ್ಚಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕ್ರಮವಾಗಿ ಎರಡು ಮೂರನೇ ಸ್ಥಾನದಲ್ಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *