ಐಪಿಎಲ್‌ಗೆ ಗುಡ್‌ಬೈ ಹೇಳಿದ್ರೂ ಮುಂಬೈ ತಂಡದಲ್ಲೇ ಇರಲಿದ್ದಾರೆ ಪೋಲಾರ್ಡ್‌

Public TV
2 Min Read

ಮುಂಬೈ: ಮುಂಬೈ ಇಂಡಿಯನ್ಸ್‌(Mumbai Indians) ತಂಡದ ಆಲ್‌ರೌಂಡರ್‌, ವಿಂಡೀಸ್‌ ಆಟಗಾರ ಕಿರನ್‌ ಪೋಲಾರ್ಡ್‌(Kieron Pollard) ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL) ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

2010 ರಿಂದ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದ ಪೋಲಾರ್ಡ್‌ ಇನ್ನು ಮುಂದೆ ಬ್ಯಾಟಿಂಗ್‌ ಕೋಚ್‌(Batting Coach) ಆಗಿ ಮುಂದುವರಿಯಲಿದ್ದಾರೆ.

ಕೊನೆಯ ಸ್ಲಾಗ್‌ ಓವರ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದ ಪೋಲಾರ್ಡ್‌ ಆಕ್ರಮಣಕಾರಿ ಆಟಕ್ಕೆ ಪ್ರಸಿದ್ದರಾಗಿದ್ದರು. ಸಿಕ್ಸರ್‌, ಬೌಂಡರಿ ಚಚ್ಚುವ ಮೂಲಕ ಮುಂಬೈ ತಂಡದ ಆಧಾರಸ್ತಂಭವಾಗಿ ಪಂದ್ಯದ ಫಲಿತಾಂಶವನ್ನೇ ಬದಲಾಯಿಸುತ್ತಿದ್ದರು. ಇದನ್ನೂ ಓದಿ: ಅಲಿ, ರಶೀದ್ ಸಂಭ್ರಮಾಚರಣೆಯಿಂದ ಹೊರ ಹೋಗಿ ಎಂದ ಬಟ್ಲರ್ – ಆದ್ರು ಹೃದಯ ಗೆದ್ದ ಕ್ಯಾಪ್ಟನ್

“ನಾನು ಇನ್ನೂ ಕೆಲವು ವರ್ಷಗಳ ಕಾಲ ಆಟವಾಡಲು ಉದ್ದೇಶಿಸಿದ್ದರಿಂದ ಇದು ಸುಲಭವಾದ ನಿರ್ಧಾರವಲ್ಲ. ಮುಂಬೈ ಇಂಡಿಯನ್ಸ್‌ ಪರ ಆಡಿದ ಬಳಿಕ ಮತ್ತೆ ಎಂಐ ವಿರುದ್ಧ ಆಡಲು ಬಯಸುವುದಿಲ್ಲ. ಒಮ್ಮೆ ಎಂಐ ಪರ ಆಡಿದ ಬಳಿಕ ಯಾವಾಗಲೂ ನಾನು ಎಂಐ ಆಗಿರುತ್ತೇನೆ. ಎಂಐಗೆ ಭಾವನಾತ್ಮಕ ವಿದಾಯ ಅಲ್ಲ. ಮುಂಬೈ ಇಂಡಿಯನ್ಸ್‌ ತಂಡದ ಜೊತೆಗಿನ ಚರ್ಚೆಯ ಬಳಿಕ ನಾನು ಐಪಿಎಲ್‌ ಬದುಕಿಗೆ ನಿವೃತ್ತಿ ಹೇಳುತ್ತಿದ್ದೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಂಡದ ಮಾಲಕಿ ನೀತಾ ಅಂಬಾನಿ(Nita. M. Ambani) ಪೊಲಾರ್ಡ್‌ ಆಟವನ್ನು ಮೆಲುಕು ಹಾಕಿ ಶುಭ ಹಾರೈಸಿದ್ದಾರೆ.

“ಐಪಿಎಲ್‌ ಮೂರನೇ ಆವೃತ್ತಿಯಿಂದ ನಾವು ಪೊಲಾರ್ಡ್‌ ಸಂತೋಷ, ಬೆವರು ಮತ್ತು ಕಣ್ಣೀರನ್ನು ಹಂಚಿಕೊಂಡಿದ್ದೇವೆ. ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ನಮ್ಮ ಚಾಂಪಿಯನ್ಸ್ ಲೀಗ್ ಟ್ರೋಫಿ ಮತ್ತು ಎಲ್ಲಾ 5 ಐಪಿಎಲ್‌ ವಿಜೇತ ತಂಡದ ಭಾಗವಾಗಿದ್ದಾರೆ. ಮೈದಾನದಲ್ಲಿ ಅವರ ಮ್ಯಾಜಿಕ್ ನೋಡುವುದನ್ನು ನಾವು ತಪ್ಪಿಸಿಕೊಳ್ಳುತ್ತೇವೆ. ಆದರೆ ಅವರು ಎಂಐ ತಂಡಕ್ಕೆ ಆಡುವುದನ್ನು ಮುಂದುವರಿಸುತ್ತಾರೆ. ಬ್ಯಾಟಿಂಗ್ ತರಬೇತುದಾರರಾಗಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಪೋಲಾರ್ಡ್‌ ಅವರ ಹೊಸ ಪ್ರಯಾಣವು ಅವರಿಗೆ ಇನ್ನೂ ಹೆಚ್ಚಿನ ವೈಭವ, ವಿಜಯ ತರಲಿ” ಎಂದು ನೀತಾ ಅಂಬಾನಿ ಶುಭ ಹಾರೈಸಿದ್ದಾರೆ.

ಐಪಿಎಲ್‌ ಸಾಧನೆ:
ಒಟ್ಟು 171 ಇನ್ನಿಂಗ್ಸ್‌ ಆಡಿರುವ ಪೋಲಾರ್ಡ್‌ 147.32 ಸ್ಟ್ರೈಕ್‌ ರೇಟ್‌ನಲ್ಲಿ 3,412 ರನ್‌ ಹೊಡೆದಿದ್ದಾರೆ. ಗರಿಷ್ಟ 87 ರನ್‌ ಹೊಡೆದಿರುವ ಇವರು 16 ಅರ್ಧಶತಕ ಬಾರಿಸಿದ್ದಾರೆ.

107 ಇನ್ನಿಂಗ್ಸ್‌ನಲ್ಲಿ 69 ವಿಕೆಟ್‌ 103 ಕ್ಯಾಚ್‌ಗಳನ್ನು ಪಡೆದಿದ್ದಾರೆ. 44 ರನ್‌ಗಳಿಗೆ 4 ವಿಕೆಟ್‌ ಪಡೆದಿದ್ದು ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *