ಅಲಿ, ರಶೀದ್ ಸಂಭ್ರಮಾಚರಣೆಯಿಂದ ಹೊರ ಹೋಗಿ ಎಂದ ಬಟ್ಲರ್ – ಆದ್ರು ಹೃದಯ ಗೆದ್ದ ಕ್ಯಾಪ್ಟನ್

Public TV
2 Min Read

ಮೆಲ್ಬರ್ನ್‌: ಪಾಕಿಸ್ತಾನವನ್ನು (Pakistan) ಬಗ್ಗುಬಡಿದು 2022ರ ಟಿ20 ವಿಶ್ವಕಪ್ (T20 World Cup) ಮುಡಿಗೇರಿಸಿಕೊಂಡಿರುವ ಇಂಗ್ಲೆಂಡ್ (England) ತಂಡ ಸಂಭ್ರಮಾಚರಣೆ ವೇಳೆ ಆಲ್‍ರೌಂಡರ್‌ಗಳಾದ ಮೊಯಿನ್ ಅಲಿ (Moeen Ali) ಮತ್ತು ಆದಿಲ್‌ ರಶೀದ್ (Adil Rashid) ಅವರನ್ನು ನಾಯಕ ಜೋಸ್ ಬಟ್ಲರ್ (Jos Buttler) ಹೊರ ಹೋಗುವಂತೆ ಹೇಳಿದ ಪ್ರಸಂಗವೊಂದು ನಡೆದಿದೆ.

ಪಾಕ್ ವಿರುದ್ಧ ಫೈನಲ್ ಪಂದ್ಯದಲ್ಲಿ 5 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಇಂಗ್ಲೆಂಡ್ 2ನೇ ಬಾರಿ ಟಿ20 ವಿಶ್ವಕಪ್‍ಗೆ ಮುತ್ತಿಕ್ಕಿತು. ಅಲ್ಲದೇ 12 ವರ್ಷಗಳ ಬಳಿಕ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿತು. ಈ ಗೆಲುವಿಗಾಗಿ ಇಂಗ್ಲೆಂಡ್ ತಂಡ ಬಹಳಷ್ಟು ಶ್ರಮಪಟ್ಟಿದೆ. ಆ ಶ್ರಮದ ಫಲವಾಗಿ ಗೆಲುವು ಇಂಗ್ಲೆಂಡ್ ತಂಡದ ಪಾಲಾಗಿದೆ. ಪ್ರತಿಯೊಬ್ಬ ಆಟಗಾರರು ಕೂಡ ಇಂಗ್ಲೆಂಡ್ ಗೆಲುವಿಗಾಗಿ ಪೂರ್ಣ ಪ್ರಮಾಣದಲ್ಲಿ ಶ್ರಮಿಸಿದ್ದರು. ಇದು ಅವರ ಸಂಭ್ರಮಾಚರಣೆ ವೇಳೆ ಕಾಣಸಿಕ್ಕಿತು. ಇದನ್ನೂ ಓದಿ: Sorry Brother ಇದೇ ಕರ್ಮ – ಅಖ್ತರ್‌ಗೆ ಡೆಡ್ಲಿ ಯಾರ್ಕರ್ ಎಸೆದ ಶಮಿ

ಸೀಮಿತ ಓವರ್‌ಗಳ ನಾಯಕನಾಗಿದ್ದ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಬಳಿಕ ಇಂಗ್ಲೆಂಡ್ ಬಟ್ಲರ್‌ಗೆ ನಾಯಕತ್ವದ ಪಟ್ಟ ಕಟ್ಟಿತು. ನೂತನ ನಾಯಕನೊಂದಿಗೆ ಇಂಗ್ಲೆಂಡ್ ಟಿ20 ವಿಶ್ವಕಪ್‍ಗೆ ಆಗಮಿಸಿತ್ತು. ಬಳಿಕ ಅದ್ಭುತವಾಗಿ ಆಡಿ ವಿಶ್ವಕಪ್‍ನೊಂದಿಗೆ ತೆರಳುವಂತಾಯಿತು. ಪಾಕ್ ವಿರುದ್ಧ ಗೆದ್ದ ಬಳಿಕ ಪ್ರಶಸ್ತಿ ಹಿಡಿದು ಸಂಭ್ರಮಿಸುತ್ತಿದ್ದ ವೇಳೆ ಅಲಿ ಮತ್ತು ರಶೀದ್‍ರನ್ನು ಬಟ್ಲರ್ ಹೊರ ಹೋಗುವಂತೆ ಕಳುಹಿಸಿ ಸಂಭ್ರಮಿಸಿದರು.

ಅವರಿಬ್ಬರು ಹೊರ ಹೋಗುತ್ತಾರೆ. ಬಳಿಕ ಇಂಗ್ಲೆಂಡ್ ತಂಡ ಶಾಂಪೇನ್ ಸಂಭ್ರಮಾಚರಣೆ ಮಾಡಿತು. ಇದನ್ನು ಕಂಡ ಅಭಿಮಾನಿಗಳು ಬಟ್ಲರ್ ನಡೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಇದನ್ನೂ ಓದಿ: 2019 ಏಕದಿನ ವಿಶ್ವಕಪ್ ನೆನೆಪಿಸಿದ ಬೆನ್‍ಸ್ಟೋಕ್ಸ್ – ನಿಜವಾದ ಮ್ಯಾಚ್ ವಿನ್ನರ್ ಎಂದ ಫ್ಯಾನ್ಸ್

ಹೊರ ಹೋದ ಕಾರಣ:
ಅಲಿ ಮತ್ತು ರಶೀದ್ ತಮ್ಮ ಧರ್ಮದ ಪ್ರಕಾರ ಶಾಂಪೇನ್ ಸಹಿತ ಇತರ ಮದ್ಯಗಳನ್ನು ಮುಟ್ಟುವುದಿಲ್ಲ. ಸಂಭ್ರಮಾಚರಣೆ ವೇಳೆ ಶಾಂಪೇನ್ ಚೆಲ್ಲುವ ಕಾರಣ ಬಟ್ಲರ್ ಅವರಿಬ್ಬರೊಂದಿಗೆ ಹೊರ ಹೋಗುವಂತೆ ಮನವಿಮಾಡಿಕೊಂಡಿದ್ದರು. ಬಳಿಕ ಅವರು ತಂಡದೊಂದಿಗೆ ಸೇರಿಕೊಂಡರು.

2019ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಇಂಗ್ಲೆಂಡ್ ನಾಯಕರಾಗಿದ್ದ ಇಯಾನ್ ಮಾರ್ಗನ್ ಕೂಡ ಇದೇ ರೀತಿ ನಡೆದುಕೊಂಡಿದ್ದರು. ಇದೀಗ ಬಟ್ಲರ್ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *