ರಮ್ಯಾ ಧರಿಸಿದ ದುಬಾರಿ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ?

Public TV
1 Min Read

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಆಗಿದ್ದಾರೆ. `ಉತ್ತರಕಾಂಡ’ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ಮಿಂಚಲಿದ್ದಾರೆ. ಸದ್ಯ ರಮ್ಯಾ ಇತ್ತೀಚೆಗೆ ಧರಿಸಿದ್ದ ದುಬಾರಿ ನೆಕ್ಲೆಸ್ ವಿಷ್ಯವಾಗಿ ಸದ್ದು ಮಾಡ್ತಿದ್ದಾರೆ.

ನಿರ್ಮಾಣದ ಮತ್ತು ನಟನೆಯ ಮೂಲಕ ಚಿತ್ರರಂಗದಲ್ಲಿ ಆಕ್ಟೀವ್ ಇರುವ ನಟಿ ರಮ್ಯಾ, `ಉತ್ತರಕಾಂಡ’ ಚಿತ್ರದಲ್ಲಿ ಡಾಲಿಗೆ ನಾಯಕಿಯಾಗಿ ರಮ್ಯಾ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಹೀಗಿರುವಾಗ `ಉತ್ತರಕಾಂಡ’ ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದ ನಟಿ, ಜೆರಿ ಸೀರೆಯುಟ್ಟು ಗ್ರ್ಯಾಂಡ್ ಆಗಿ ಬಂದಿದ್ದರು. ಈ ವೇಳೆ ಅವರು ಧರಿಸಿದ್ದ ನೆಕ್ಲೆಸ್ ಕೂಡ ಹೈಲೈಟ್ ಆಗಿದೆ. ಇದನ್ನೂ ಓದಿ:ಅವಳಿ ಮಕ್ಕಳ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಪ್ರೀತಿ ಜಿಂಟಾ

ಇನ್ನೂ ರಮ್ಯಾ ಧರಿಸಿದ್ದ ದುಬಾರಿ ಆಭರಣದ ಬೆಲೆ ಕೇಳಿದ್ರೆ ನೀವು ನಿಜಕ್ಕೂ ಅಚ್ಚರಿ ಪಡುತ್ತೀರಾ. ಈ ಚೆಂದದ ನೆಕ್ಲೆಸ್‌ಗೆ ಬರೋಬ್ಬರಿ 20 ಲಕ್ಷ ರೂ. ಎನ್ನಲಾಗಿದೆ. ರಮ್ಯಾ 20 ಲಕ್ಷದ ಅದ್ದೂರಿ ಆಭರಣ ಧರಿಸಿ ಮುಹೂರ್ತಕ್ಕೆ ಬಂದಿದ್ದರು. ಗೋಲ್ಡ್‌ ಪ್ಲೇಟೆಡ್‌ ಆಭರಣವಾಗಿದ್ದು, ಸಿಂಪಲ್‌ ಲುಕ್‌ಯಿದೆ. ಒಟ್ನಲ್ಲಿ ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *