ಆರೋಗ್ಯಕರ ಮೊಳಕೆ ಬರಿಸಿದ ಹೆಸರುಕಾಳಿನ ಪಲ್ಯ

Public TV
2 Min Read

ಹೆಸರುಕಾಳು ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ಇದನ್ನು ಮೊಳಕೆ ಬರಿಸಿ, ಹಸಿಯಾಗಿಯೂ ತಿನ್ನಬಹುದು. ಇದರಿಂದ ಮಾಡಲಾಗುವ ಉಸುಲಿ, ಪಲ್ಯ ಅಥವಾ ಯಾವುದೇ ರೀತಿಯ ಅಡುಗೆ ರುಚಿಕರವಾಗಿಯೂ ಇರುತ್ತದೆ. ನಾವಿಂದು ರುಚಿಕರ ಹಾಗೂ ಆರೋಗ್ಯಕರ ಮೊಳಕೆ ಬರಿಸಿದ ಹೆಸರುಕಾಳಿನ ಪಲ್ಯ (moong sprouts curry) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಈ ರೆಸಿಪಿಯನ್ನು ಒಮ್ಮೆ ನೀವು ಕೂಡಾ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:
ಎಣ್ಣೆ – 4 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಹಿಂಗ್ – ಚಿಟಿಕೆ
ಕರಿ ಬೇವಿನ ಎಲೆಗಳು – ಕೆಲವು
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 2
ಶುಂಠಿ ಪೇಸ್ಟ್ – ಅರ್ಧ ಟೀಸ್ಪೂನ್
ಸೀಳಿದ ಮೆಣಸಿನಕಾಯಿ – 1

ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಸಣ್ಣಗೆ ಹೆಚ್ಚಿದ ಟೊಮೆಟೊ – 1
ಅರಿಶಿನ – ಕಾಲು ಟೀಸ್ಪೂನ್
ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಬೆಲ್ಲ – ಅರ್ಧ ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಹೆಸರುಕಾಳು – 1 ಕಪ್
ನೀರು – ಒಂದೂವರೆ ಕಪ್
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಮಸಾಲೆಯುಕ್ತ ಕುಶ್ಕಾ ರೈಸ್ ಮಾಡುವ ಸರಳ ವಿಧಾನ

ಮಾಡುವ ವಿಧಾನ:
* ಮೊದಲಿಗೆ ಹೆಸರುಕಾಳನ್ನು ಮೊಳಕೆ ಬರಿಸಲು, 1 ಕಪ್ ಹೆಸರುಕಾಳನ್ನು ಪಾತ್ರೆಯಲ್ಲಿ ತೆಗೆದುಕೊಂಡು, ನೀರು ಹಾಕಿ ನೆನೆಸಿಡಿ.
* ನಂತರ ಕಾಳನ್ನು ನೀರಿನಿಂದ ತೆಗೆದು, ಶುಭ್ರವಾದ ಬಟ್ಟೆಯಲ್ಲಿ ಹಾಕಿ ಕಟ್ಟಿ, ಮೊಳಕೆ ಒಡೆಯಲು 24 ಗಂಟೆ ಬಿಡಿ.
* ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಜೀರಿಗೆ, ಹಿಂಗ್ ಮತ್ತು ಕರಿ ಬೇವಿನ ಎಲೆಗಳನ್ನು ಸೇರಿಸಿ, ಸಾಸಿವೆ ಒಡೆಯಲು ಬಿಡಿ.
* ಈಗ ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಮತ್ತು ಮೆಣಸಿನಕಾಯಿ ಸೇರಿಸಿ.
* ಈರುಳ್ಳಿಯನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
* ಈಗ ಟೊಮೆಟೊ ಸೇರಿಸಿ ಮೆತ್ತಗಾಗುವ ತನಕ ಹುರಿಯಿರಿ.
* ಅರಿಶಿನ, ಕೆಂಪು ಮೆಣಸಿನ ಪುಡಿ, ಬೆಲ್ಲ ಮತ್ತು ಉಪ್ಪು ಸೇರಿಸಿ, ಮಸಾಲೆ ಪರಿಮಳ ಬರುವ ತನಕ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
* ಈಗ ಮೊಳಕೆ ಬರಿಸಿದ ಹೆಸರುಕಾಳನ್ನು ಹಾಕಿ, ಒಂದೂವರೆ ಕಪ್ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
* ನಿಮಗೆ ಹೆಚ್ಚು ಗ್ರೇವಿ ಬೇಕಿದ್ದರೆ, ಇನ್ನಷ್ಟು ನೀರು ಸೇರಿಸಬಹುದು.
* ಇದೀಗ ಬಾಣಲೆಯನ್ನು ಮುಚ್ಚಿ, 15 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.
* ಕೊನೆಯದಾಗಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
* ಇದೀಗ ಮೊಳಕೆ ಬರಿಸಿದ ಹೆಸರುಕಾಳಿನ ಪಲ್ಯ ತಯಾರಾಗಿದ್ದು, ಜೋಳದ ರೊಟ್ಟಿ ಅಥವಾ ಚಪಾತಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಹೀಗೆ ಮಾಡಿ ಆರೋಗ್ಯಕರ ಹೆಸರು ಬೇಳೆ ದೋಸೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *