ಅಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಬೆಂಗಾವಲು ಪಡೆಯನ್ನು ತಡೆದ ಮೋದಿ

Public TV
1 Min Read

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬೆಂಗಾವಲು ಪಡೆಯನ್ನು ತಡೆದು ಅಂಬುಲೆನ್ಸ್‌ಗೆ (Ambulance) ಹೋಗಲು ದಾರಿ ಮಾಡಿಕೊಟ್ಟಿದ್ದಾರೆ.

ವಿಧಾನಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ (Himachal Pradesh) ಕಾಂಗ್ರಾಕ್ಕೆ ಹೊರಟಿದ್ದರು. ಈ ವೇಳೆ ದಾರಿಯಲ್ಲಿ ಅಂಬುಲೆನ್ಸ್ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಬೆಂಗಾವಲು ಪಡೆ ಅಂಬುಲೆನ್ಸ್‌ಗೆ ದಾರಿ ಬಿಟ್ಟಿದೆ. ಅಂಬುಲೆನ್ಸ್ ಹೋದ ನಂತರ ಮೋದಿ ಬೆಂಗಾವಲು ಪಡೆ ಚುನಾವಣಾ ಪ್ರಚಾರಕ್ಕೆ ತೆರಳಿದೆ.

ಈ ಹಿಂದೆ ಗುಜರಾತ್ ಭೇಟಿಯ ವೇಳೆ ಅಂಬುಲೆನ್ಸ್‌ಗೆ ಅವಕಾಶ ಮಾಡಿಕೊಡಲು ಪ್ರಧಾನಿ ಮೋದಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದ್ದರು. ಆ ಸಂದರ್ಭದಲ್ಲಿ ಪ್ರಧಾನಿ ಅವರು ಅಹಮದಾಬಾದ್‍ನಿಂದ ಗಾಂಧಿನಗರಕ್ಕೆ ಪ್ರಯಾಣಿಸುತ್ತಿದ್ದರು.

ಭಾನುವಾರ ನಡೆಯಲಿರುವ ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರದ ನಿಮಿತ್ತ ಮೋದಿ ಕಾಂಗ್ರಾದ ಚಂಬಿಯಲ್ಲಿ ರ‍್ಯಾಲಿ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹಿಮಾಚಲ ಪ್ರದೇಶಕ್ಕೆ ಡಬಲ್ ಇಂಜಿನ್‍ನ ಸ್ಥಿತಿ ಹಾಗೂ ಬಲವಾದ ಸರ್ಕಾರ ಅಗತ್ಯವಿದೆ. ಅಸ್ಥಿರತೆ, ಭ್ರಷ್ಟಾಚಾರ ಮತ್ತು ಹಗರಣದಿಂದ ಮುಕ್ತಗೊಳಿಸಲು ಪುನಃ ಬಿಜೆಪಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *