ದೀಪಾವಳಿ ಎಫೆಕ್ಟ್ – ದೆಹಲಿಯಲ್ಲಿ ವಾಯು ಮಾಲಿನ್ಯ

Public TV
1 Min Read

ನವದೆಹಲಿ: ದೀಪಾವಳಿಯ (Diwali) ಬಳಿಕ ದೆಹಲಿಯಲ್ಲಿ (New Delhi) ವಾಯು ಮಾಲಿನ್ಯದ (Air Pollution) ಪ್ರಮಾಣದ ಏರಿಕೆ ಕಾಣುತ್ತಿದ್ದು, ಯಾವುದೇ ಸುಧಾರಣೆಗಳು ಕಂಡು ಬರುತ್ತಿಲ್ಲ. ಇಂದು ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’ ವಿಭಾಗದಲ್ಲಿ ಉಳಿದುಕೊಂಡಿದ್ದು, ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 329 ರಷ್ಟಿದೆ.

deepavali

ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕವನ್ನು ತೋರಿಸುವ ಸರ್ಕಾರಿ ವೆಬ್‍ಸೈಟ್‍ನಲ್ಲಿ ಪಟ್ಟಿ ಮಾಡಲಾದ ಮೇಲ್ವಿಚಾರಣಾ ಕೇಂದ್ರಗಳ ಮಾಹಿತಿಯ ಪ್ರಕಾರ, ಆನಂದ್ ವಿಹಾರ್‍ನಲ್ಲಿನ AQI 834 ರಷ್ಟಿದೆ, ಇದು ನಗರದಲ್ಲಿ ಅತ್ಯಧಿಕವಾಗಿದೆ. ರೋಹಿಣಿಯಂತಹ ಇನ್ನೂ ಕೆಲವು ಪ್ರದೇಶಗಳು AQI 357 ರಷ್ಟಿದೆ, ಜಿಲ್ಮಿಲ್ ಪ್ರದೇಶವು 418ರ AQI ಅನ್ನು ದಾಖಲಿಸಿದೆ ಮತ್ತು ಸೋನಿಯಾ ವಿಹಾರ್‍ನಲ್ಲಿ AQI 332 ರಷ್ಟಿದೆ.

SAFAR-India ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ರಾಷ್ಟ್ರೀಯ ರಾಜಧಾನಿ ಪ್ರದೇಶದ ಭಾಗವಾಗಿರುವ ನೋಯ್ಡಾವು 351ರ AQI ಅನ್ನು ದಾಖಲಿಸಿದರೆ, ಗುರುಗ್ರಾಮ್‍ನ AQI 324 ರಷ್ಟಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮಟ್ಕಾದಂದೆ, ಅಕ್ರಮ ಪಬ್‌ಗಳಿಗೆ ಪೊಲೀಸ್ ಇಲಾಖೆಯಿಂದಲೇ ಸಹಕಾರ – HDK ಕಿಡಿ

ಶೂನ್ಯ ಮತ್ತು 50 ರ ನಡುವಿನ AQI ಅನ್ನು “ಉತ್ತಮ”, 51 ಮತ್ತು 100 “ತೃಪ್ತಿಕರ”, 101 ಮತ್ತು 200 “ಮಧ್ಯಮ”, 201 ಮತ್ತು 300 “ಕಳಪೆ”, 301 ಮತ್ತು 400 “ಅತ್ಯಂತ ಕಳಪೆ” ಮತ್ತು 401 ಮತ್ತು 500 “ತೀವ್ರ” ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಕೋಲಾರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಕಾರ್ಯಕರ್ತರು ಒತ್ತಾಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *