ಪುನಾರಂಭಗೊಂಡ ವಾಟ್ಸಪ್ – ಸೋಶಿಯಲ್ ಮೀಡಿಯಾಗಳಲ್ಲಿ ತರಹೇವಾರು ಮೀಮ್ಸ್

By
2 Min Read

ನವದೆಹಲಿ: ಜನರ ಜೀವನದ ಅವಿಭಾಜ್ಯ ಅಂಗವಾಗಿರುವ ವಾಟ್ಸಪ್ ತಾಂತ್ರಿಕ ಸಮಸ್ಯೆಯಿಂದ (WhatsAppDown) ಸುಮಾರು ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ವಾಟ್ಸಪ್ ಮಾಲಿಕತ್ವ ಹೊಂದಿರುವ ಮೆಟಾ (Meta) ಈ ಸಮಸ್ಯೆಯನ್ನು ಬಗೆಹರಿಸಿದ್ದು ವಾಟ್ಸಪ್ ಆ್ಯಪ್ ಎಂದಿನಂತೆ ಕಾರ್ಯನಿರ್ವಹಿಸಲು ಆರಂಭಿಸಿದೆ.

ಕೇವಲ ಭಾರತ ಮಾತ್ರವಲ್ಲದೇ ಅಮೇರಿಕಾ, ಜರ್ಮನಿ, ದಕ್ಷಿಣ ಆಫ್ರಿಕಾ, ಬಹ್ರೇನ್, ಬಾಂಗ್ಲಾದೇಶ ಸೇರಿ ಹಲವು ದೇಶಗಳಲ್ಲಿ ವಾಟ್ಸಪ್ ಸೇವೆಗಳಲ್ಲಿ ವ್ಯತ್ಯಯವಾಗಿತ್ತು. ಬಳಕೆದಾರರು ವಾಟ್ಸಪ್ ಕರೆ ಮಾಡಲು, ಸಂದೇಶಗಳನ್ನು ರವಾನಿಸಲು ಸಾಧ್ಯವಾಗಿರಲಿಲ್ಲ. ಈ ಅಡೆತಡೆಗಳು ಕಂಡು ಬಂದ ಹಿನ್ನೆಲೆ ಹಲವು ಜನರು ಟ್ವಿಟರ್‌ನಲ್ಲಿ “whatsappdown” ಎಂಬ ಹ್ಯಾಶ್‍ಟ್ಯಾಗ್‍ನಡಿ 90,000-ಕ್ಕೂ ಹೆಚ್ಚು ಟ್ವೀಟ್‍ಗಳನ್ನು ಮಾಡಿದ್ದಾರೆ.

ಈ ಸಮಸ್ಯೆಯನ್ನು whatsapp ಒಪ್ಪಿಕೊಂಡಿದೆ. “ಕೆಲವರು ಪ್ರಸ್ತುತ ಸಂದೇಶಗಳನ್ನು ಕಳುಹಿಸುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ ಮತ್ತು ಸಾಧ್ಯವಾದಷ್ಟು ಬೇಗ ಎಲ್ಲರಿಗೂ whatsapp ಅನ್ನು ಮರುಸ್ಥಾಪಿಸಲು ನಾವು ಕೆಲಸ ಮಾಡುತ್ತಿದ್ದೇವೆ” ಎಂದು ಮೆಟಾ ವಕ್ತಾರರು ತಿಳಿಸಿದ್ದರು, ಅಂತೆಯೇ ಎರಡು ಗಂಟೆಯಲ್ಲಿ ಸೇವೆಯನ್ನು ಪುನಾರಂಭಗೊಳಿಸಿದ್ದಾರೆ.

ವಾಟ್ಸಪ್ ಸ್ಥಗಿತಗೊಂಡ ಹಿನ್ನೆಲೆ ತರಹೆವಾರು ಮೀಮ್ಸ್‌ಗಳು ಸೋಶಿಯಲ್ ಮೀಡಿಯಾಗಳಲ್ಲಿ ಗಮನ ಸೆಳೆಯುತ್ತಿವೆ. ಕೆಲವರು ಸೂರ್ಯಗ್ರಹಣದಿಂದ ಪರಿಣಾಮ ವಾಟ್ಸಪ್ ಮೇಲೆ ಬೀರಿದೆ ಎಂದರೇ, ಇನ್ನು ಕೆಲವರು ಮಾರ್ಕ್ ಬುರ್ಕರ್ ಬರ್ಗ್ ಉಲ್ಲೇಖಿಸಿ ತಮಾಷೆ ಮಾಡಿದ್ದಾರೆ. ಇದನ್ನೂ ಓದಿ: ಶಾನಿದ್ ಆಸಿಫ್ ಅಲಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ಜೋಶ್ ನಟಿ ಪೂರ್ಣಾ

2021ರ ಅಕ್ಟೋಬರ್ 5 ರಂದು ಫೇಸ್‍ಬುಕ್, ವಾಟ್ಸಪ್, ಇನ್‍ಸ್ಟಾಗ್ರಾಂ ಆ್ಯಪ್‍ಗಳು ಆರು ಗಂಟೆಗಳ ಕಾಲ ಸ್ಥಗಿತವಾಗಿದ್ದವು. ಈವರೆಗೂ ಅತಿ ಹೆಚ್ಚು ಕಾಲ ಸರ್ವರ್ ಡೌನ್ ಆದ ಉದಾಹರಣೆ ಇದಾಗಿದೆ. ಇದನ್ನೂ ಓದಿ: ರಾಯಚೂರಿನ ಸೂಗುರೇಶ್ವರ ದೇವಾಲಯಕ್ಕಿಲ್ಲ ಗ್ರಹಣ ಎಫೆಕ್ಟ್- ಮಂತ್ರಾಲಯ ಮಠದಲ್ಲಿ ಶಾಂತಿ ಹೋಮ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *