ದೇಶದೆಲ್ಲೆಡೆ ಬೆಳಕಿನ ಹಬ್ಬದ ಸಂಭ್ರಮ- ಇಂದು ಸಂಜೆಯೇ ಕೇತುಗ್ರಸ್ತ ಸೂರ್ಯಗ್ರಹಣ

Public TV
2 Min Read

ಬೆಂಗಳೂರು: ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿ (Deepavali)ಯ ಸಂಭ್ರಮ ಕಳೆಗಟ್ಟಿದೆ. ಆದರೆ ಈ ಬಾರಿ ದೀಪಾವಳಿಯಂದೇ ಸೂರ್ಯಗ್ರಹಣ (Solar Eclipse) ಆಗ್ತಿರೋದು ವಿಶೇಷ. ಹೀಗಾಗಿ ಸಹಜವಾಗೇ ಶುಭ- ಅಶುಭದ ಲೆಕ್ಕಾಚಾರವೂ ಶುರುವಾಗಿದೆ.

ಒಂದೆಡೆ ಬರೋಬ್ಬರಿ 27 ವರ್ಷಗಳ ಬಳಿಕ ದೀಪಾವಳಿಯ ದಿನ ಗ್ರಹಣ ಬಂದಿದ್ರೆ, ಇತ್ತ 3 ವರ್ಷಗಳ ಬಳಿಕ ಕೇತುಗ್ರಸ್ತ ಗ್ರಹಣ ಇಂದು ಸಂಭವಿಸಲಿದೆ. ಇನ್ನು 15 ದಿನಗಳ ಅಂತರದಲ್ಲೇ ಚಂದ್ರಗ್ರಹಣ ಕೂಡ ಇರೋದ್ರಿಂದ ಕುತೂಹಲದ ಜೊತೆಗೆ ಜನಸಾಮಾನ್ಯರಿಗೆ ಆತಂಕವೂ ಎದುರಾಗಿದೆ. ಇದಕ್ಕೆಲ್ಲಾ ಪರಿಹಾರವೂ ಇರಲಿದ್ದು, ಗ್ರಹಣ ಕಾಲದಲ್ಲಿ ಈ ಆಚರಣೆಗಳನ್ನ ಮಾಡಿ. ಇದನ್ನ ಮಾಡ್ಬೇಡಿ ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ. ಇದೆಲ್ಲವನ್ನೂ ಹೊರತುಪಡಿಸಿದ್ರೆ ನಿಸರ್ಗದ ಸಹಜ ಪ್ರಕ್ರಿಯೆ ಗ್ರಹಣ ಕೌತುಕವನ್ನ ಕಣ್ತುಂಬಿಕೊಳ್ಳಲು ಆಸಕ್ತರು ತದಿಗಾಲಲ್ಲಿ ನಿಂತಿದ್ದಾರೆ.

ಗ್ರಹಣ ಟೈಮಿಂಗ್ಸ್: 
ಗ್ರಹಣ ಆರಂಭ- ಸಂಜೆ 5.12
ಗ್ರಹಣ ಮಧ್ಯಕಾಲ- ಸಂಜೆ 5.49
ಗ್ರಹಣ ಅಂತ್ಯ- ಸಂಜೆ 6.27

ಬೆಂಗಳೂರಿನಲ್ಲಿ ಇವತ್ತು ಶೇಕಡಾ 10.9ರಷ್ಟು ಗ್ರಹಣ ಗೋಚರವಾಗಲಿದೆ ಎನ್ನಲಾಗ್ತಿದೆ. ಸಂಜೆ ಸಂಜೆ 5.12ಕ್ಕೆ ಗ್ರಹಣ ಆರಂಭವಾದ್ರೆ ಸಂಜೆ 5.49ಕ್ಕೆ ಮೋಕ್ಷವಾಗಲಿದೆ. ಒಟ್ಟು 37 ನಿಮಿಷಗಳ ಕಾಲ ಗ್ರಹಣ ಇರಲಿದ್ದು, ಬಹುತೇಕ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಿದೆ. ಸಂಜೆ 7 ಗಂಟೆಯ ಬಳಿಕ ಶುದ್ಧೀಕರಣ ಕಾರ್ಯ ಕೈಗೊಂಡು 7.30ಕ್ಕೆ ಪೂಜೆ-ಪುನಸ್ಕಾರಗಳನ್ನ ನಡೆಸಲಾಗುತ್ತೆ. ಆದರೆ ದೇವಾಲಯಗಳು ಬಂದ್ ಆಗುವ ಮತ್ತು ಪೂಜೆ ಆರಂಭವಾಗುವ ಸಮಯಗಳಲ್ಲಿ ಬದಲಾವಣೆ ಇರಲಿದೆ.

ಗ್ರಹಣ ಆರಂಭ ಕಾಲ ಮತ್ತು ಅಂತ್ಯ ಕಾಲ ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿದೆ. ಹಾಗೆಯೇ ಗ್ರಹಣ ಕಾಣಿಸಿಕೊಳ್ಳೋದು ಕೂಡ ಬೇರೆ ಬೇರೆ ರೀತಿಯಲ್ಲಿ ಇರುತ್ತೆ. ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಗ್ರಹಣದ ಸಮಯವನ್ನ ಮತ್ತು ಗ್ರಹಣ ಕಾಣಿಸಿಕೊಳ್ಳೋ ಶೇಕಡಾವಾರು ಮಾಹಿತಿ ಇಲ್ಲಿದೆ. ಇದನ್ನೂ ಓದಿ: ಈ ಬಾರಿ ದೀಪಾವಳಿ ಹಬ್ಬಕ್ಕೆ ಸೂರ್ಯಗ್ರಹಣ ಕಾರ್ಮೋಡ

ರಾಜ್ಯದಲ್ಲಿ ಗ್ರಹಣದ ಸಮಯ
* ಬೆಂಗಳೂರು- 10.9%.
ಗ್ರಹಣದ ಸಮಯ- ಸಂಜೆ 5.12-5.49

* ಮೈಸೂರು- 9.5%
ಗ್ರಹಣದ ಸಮಯ- ಸಂಜೆ 5.13 -5.51

* ಧಾರವಾಡ- 16.9%.
ಗ್ರಹಣದ ಸಮಯ- ಸಂಜೆ 5.01- 5.47

* ರಾಯಚೂರು- 16.67%
ಗ್ರಹಣದ ಸಮಯ- ಸಂಜೆ 5.01-5.47

* ಬಳ್ಳಾರಿ- 14.64%
ಗ್ರಹಣದ ಸಮಯ- ಸಂಜೆ 5.04-5.48. ಇದನ್ನೂ ಓದಿ: ದೀಪಾವಳಿ ಹಬ್ಬದಂದೇ ಸೂರ್ಯಗ್ರಹಣ- ಬೆಂಗಳೂರಿನ ದೇಗುಲಗಳು ಬಂದ್

* ಬಾಗಲಕೋಟೆ- 17.33%.
ಗ್ರಹಣದ ಸಮಯ- ಸಂಜೆ 5.00-5.47

* ಮಂಗಳೂರು- 10.91%
ಗ್ರಹಣದ ಸಮಯ- ಸಂಜೆ 5.10 -5.50

* ಕಾರವಾರ- 15.15%
ಗ್ರಹಣದ ಸಮಯ-ಸಂಜೆ 5.03 -5.48

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *