ಆಧಾರ್ ಪಡೆದು 10 ವರ್ಷ ಆಯ್ತಾ? – ಮಾಹಿತಿ ನವೀಕರಣಕ್ಕೆ ಯುಐಡಿಎಐ ಮನವಿ

Public TV
1 Min Read

ನವದೆಹಲಿ: ನೀವು ನಿಮ್ಮ ಆಧಾರ್ ಕಾರ್ಡ್ (Aadhaar Card) ಪಡೆದು 10 ವರ್ಷ ಪೂರ್ಣವಾಗಿದೆಯಾ? ಅದರ ಬಳಿಕ ನೀವು ಎಂದೂ ತಮ್ಮ ಮಾಹಿತಿಗಳನ್ನು ನವೀಕರಿಸದೇ (Update) ಹೋಗಿದ್ದರೆ, ಇದೀಗ ನಿಮ್ಮ ವಿವರಗಳನ್ನು ಈ ಕೂಡಲೇ ನವೀಕರಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಜನರಲ್ಲಿ ಕೇಳಿಕೊಂಡಿದೆ.

ನೀವು ನಿಮ್ಮ ಆಧಾರ್ ಅನ್ನು 10 ವರ್ಷಗಳ ಹಿಂದೆ ಪಡೆದಿದ್ದು, ಬಳಿಕ ಅದನ್ನು ನವೀಕರಿಸಿಲ್ಲವಾ? ಹಾಗಿದ್ದರೆ ನೀವು ಈ ಕೂಡಲೇ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿ. ಇದು ನಿಮ್ಮ ಜೀವನವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ ಎಂದು ಯುಐಡಿಎಐ ಟ್ವೀಟ್‌ನಲ್ಲಿ ತಿಳಿಸಿದೆ. ಆದರೆ ಇದು ಕಡ್ಡಾಯ ಹೌದೋ ಅಲ್ಲವೋ ಎಂಬ ಬಗ್ಗೆ ಯುಐಡಿಎಐ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದ ಜನತೆಗೆ ಸಿಹಿ ಸುದ್ದಿ – ದೆಹಲಿಗೆ ನಿತ್ಯ ವಿಮಾನ

myaadhaar.uidai.gov.in ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಅಥವಾ ನಿಮ್ಮ ಸಮೀಪದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಫ್‌ಲೈನ್‌ನಲ್ಲಿಯೂ ನಿಮ್ಮ ವಿವರಗಳನ್ನು ಅಪ್‌ಡೇಟ್ ಮಾಡಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟ – ತಪ್ಪಿದ ಅನಾಹುತ

ಆಧಾರ್ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದ್ದು, ಇದನ್ನು ಭಾರತದ ನಾಗರಿಕರು ಸ್ವಯಂಪ್ರೇರಣೆಯಿಂದ ಪಡೆಯಬಹುದು. 2009ರ ಜನವರಿಯಲ್ಲಿ ಯುಐಡಿಎಐ ಸ್ಥಾಪನೆಯೊಂದಿಗೆ ಈ ಸೌಲಭ್ಯವನ್ನು ಪ್ರಾರಂಭಿಸಲಾಯಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *