ವಿಜಯ್ ದೇವರಕೊಂಡ ಜೊತೆ ಲಿಪ್‌ಲಾಕ್ ಕಾರಣಕ್ಕಾಗಿ ಟ್ರೋಲ್ ಆದ ಬಗ್ಗೆ ರಶ್ಮಿಕಾ ಮಾತು

By
1 Min Read

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ(Rashmika Mandanna) ಸದ್ಯ ಬಾಲಿವುಡ್‌ನಲ್ಲಿ ಮಿಂಚ್ತಿದ್ದಾರೆ. ಬಹುಭಾಷಾ ನಟಿಯಾಗಿ ಸಾಲು ಸಾಲು ಸಿನಿಮಾ ಅವಕಾಶಗಳನ್ನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ನಟಿಯಾಗಿ ಶೈನ್ ಆಗುತ್ತಿರುವ ರಶ್ಮಿಕಾ ಮಂದಣ್ಣ ಈ ಹಿಂದೆ ಸಖತ್ ಟ್ರೋಲ್ ಆಗಿದ್ದರು. ಅದರಲ್ಲೂ ವಿಜಯ್ ದೇವರಕೊಂಡ (Vijay Devarakonda)  ಜೊತೆಗಿನ ಟ್ರೋಲ್ ಬಗ್ಗೆ ರಶ್ಮಿಕಾ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

ಕನ್ನಡದ `ಕಿರಿಕ್ ಪಾರ್ಟಿ’ (Kirik Party) ಚಿತ್ರದ ಸಿನಿ ಜರ್ನಿ ಶುರು ಮಾಡಿದ್ದ ನಟಿಗೆ ತೆಲುಗಿನ `ಗೀತಾ ಗೋವಿಂದಂ’ ಮತ್ತು `ಡಿಯರ್ ಕಾಮ್ರೇಡ್’ ಚಿತ್ರದ ಮೂಲಕ ರಶ್ಮಿಕಾ ಮತ್ತು ವಿಜಯ್ ಹೈಪ್ ಕ್ರಿಯೇಟ್ ಮಾಡಿದ್ದರು. ಡಿಯರ್ ಕಾಮ್ರೇಡ್ ಚಿತ್ರದಲ್ಲಿ ವಿಜಯ್ ಜೊತೆ ಲಿಪ್‌ಲಾಕ್(Lip Lock) ಮಾಡಿದ್ದ ರಶ್ಮಿಕಾ ಮಂದಣ್ಣ ಅಂದು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ: ಗೊಬ್ಬರಗಾಲಗೆ ಕಾವ್ಯಶ್ರೀ ವಾರ್ನಿಂಗ್

ಅದು ಒಂದು ಸೆಕೆಂಡ್‌ನಲ್ಲಿ ನಡೆದಿತ್ತು. ಆದರೆ ಆ ದೃಶ್ಯ ಇಟ್ಟುಕೊಂಡು ತಿಂಗಳುಗಟ್ಟಲೇ ಟ್ರೋಲ್ ಮಾಡಲಾಗಿತ್ತು. ಅಂದು ಎಲ್ಲರೂ ಬಿಟ್ಟು ಹೋದಂತೆ, ನಾನು ಒಂಟಿ ಆದಂತೆ ಕನಸು ಬೀಳುತ್ತಿತ್ತು ಎಂದು ರೂಮ್‌ನಲ್ಲಿ ಒಬ್ಬಳೇ ಅಳುತ್ತಿದ್ದೆ ಎಂದು ರಶ್ಮಿಕಾ ಈ ವೇಳೆ ತಮಗಾದ ಕಹಿ ಅನುಭವವನ್ನ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಈ ಎಲ್ಲಾ ಸಂಕಷ್ಟವನ್ನು ತನ್ನ ಮನೆಯವರಿಗೂ ತಿಳಿಸದೆ, ತಾವು ಒಬ್ಬರೇ ಎದುರಿಸಿದ ಕಹಿ ಘಟನೆಯನ್ನು ಇದೀಗ ಬಿಚ್ಚಿಟ್ಟಿದ್ದಾರೆ. ಇದೀಗ ಯಾವುದೇ ಕೆಟ್ಟ ಟ್ರೋಲ್‌ಗಳಿಗೆ ತಲೆಕೆಡಿಸಿಕೊಳ್ಳದೇ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿ ಮಿಂಚುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *