ಕರ್ನಾಟಕದ ಜನರಿಗೆ ಪವರ್ ಸ್ಟ್ರೋಕ್ – ನವರಾತ್ರಿ ಹಬ್ಬಕ್ಕೆ ಕರೆಂಟ್ ಶಾಕ್ ಗಿಫ್ಟ್

Public TV
2 Min Read

ಬೆಂಗಳೂರು: ನವರಾತ್ರಿ ಹಬ್ಬಕ್ಕೆ ಸರ್ಕಾರ ಕರೆಂಟ್ ಶಾಕ್ ಗಿಫ್ಟ್ ನೀಡಿದೆ. ಕಲ್ಲಿದ್ದಲು(Coal) ದರ ಹೆಚ್ಚಳದ ನೆಪ, ನಷ್ಟದ ನೆಪವೊಡ್ಡಿ ದರ ಏರಿಸಲು(Power Tariff) ಇಂಧನ ಇಲಾಖೆ(Energy Department) ಮುಂದಾಗಿದೆ.

ಬೆಸ್ಕಾಂ ಸೇರಿ 5 ಎಸ್ಕಾಂಗಳ ದರವನ್ನು ಏರಿಕೆ ಮಾಡಲಾಗಿದೆ. ಇಂದಿನಿಂದ ಅನ್ವಯವಾಗುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC) ಇಂಧನ ಹೊಂದಾಣಿಕೆ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶಿಸಿದೆ. ಈ ವರ್ಷದಲ್ಲಿ ಮೂರು ಬಾರಿ ವಿದ್ಯುತ್ ದರ ಹೆಚ್ಚಳವಾಗಿದೆ.

2013ರ ನಿಯಮದ ಪ್ರಕಾರ ನಿರ್ಧಿಷ್ಟಪಡಿಸಿದ ಸ್ಥಾವರಗಳಿಂದ ವಿದ್ಯುತ್ ಖರೀದಿ ಮಾಡುವಾಗ ಕಲ್ಲಿದ್ದಲು ವೆಚ್ಚ ಹೆಚ್ಚಳ ಅಥವಾ ಇಳಿಕೆ ಕಾಣುವಾಗ ಮೂರು ತಿಂಗಳಿಗೊಮ್ಮೆ ಎಸ್ಕಾಂಗಳ ಬೇಡಿಕೆಯಂತೆ ದರ ಏರಿಕೆ-ಇಳಿಕೆ ಮಾಡಬಹುದು. ಆದರೆ ಬಾರಿ ಆಗಿರುವ ದರ ಏರಿಕೆ ತೀರಾ ಹೆಚ್ಚು ಅನ್ನುವ ಅಭಿಪ್ರಾಯ ಕೇಳಿಬಂದಿದೆ. ಅಲ್ಲದೇ ಎಸ್ಕಾಂಗಳು ಖರೀದಿ ಹೆಚ್ಚಳ ನೆಪ, ನಷ್ಟದ ನೆಪವನ್ನು ಒಡ್ಡುತ್ತಿದೆ. ಅಸಲಿಗೆ ಬೇರೆ ಮಾರ್ಗದಿಂದ ನಷ್ಟವನ್ನು ಸರಿತೂಗಿಸಬಹುದು. ಆದರೆ ಅದರ ಹತ್ತಿರ ಗಮನ ಹರಿಸದೇ ಕೇವಲ ದರ ಏರಿಕೆ ಮಾತ್ರ ಮಾಡಲಾಗುತ್ತಿದೆ ಎಂಬ ಟೀಕೆ ಬಂದಿದೆ.

ಪ್ರತಿ ಯೂನಿಟ್‌ಗೆ ಎಲ್ಲಿ ಎಷ್ಟು ಹೆಚ್ಚಳ?
* ಬೆಸ್ಕಾಂ – 43 ಪೈಸೆ
* ಸೆಸ್ಕಾಂ – 35 ಪೈಸೆ
* ಹೆಸ್ಕಾಂ – 35 ಪೈಸೆ
* ಜೆಸ್ಕಾಂ – 35 ಪೈಸೆ
* ಮೆಸ್ಕಾಂ – 24 ಪೈಸೆ

ಎಷ್ಟು ಏರಿಕೆ?
ಬೆಸ್ಕಾಂ ವ್ಯಾಪ್ತಿ ಒಂದು ಮನೆಗೆ 500 ರೂ. ಬರುತ್ತಿದ್ದರೆ 40 ರೂ. ಹೆಚ್ಚಳವಾಗಲಿದೆ. 1 ಸಾವಿರ ರೂ. ವಿದ್ಯುತ್ ಬಿಲ್ ಬರುತ್ತಿದ್ದರೆ ಇಂದಿನಿಂದ 1,080ರೂ. ಆಗಲಿದೆ. ಇದನ್ನೂ ಓದಿ: ಭಾರೀ ಸಾಲದ ಸುಳಿಯಲ್ಲಿ KPTCL, ವಿದ್ಯುತ್‌ ಕಂಪನಿಗಳು: ಯಾವ ಕಂಪನಿಯದ್ದು ಎಷ್ಟು ಸಾಲ?

ಎಷ್ಟು ಹೆಚ್ಚಳ?
2022 – ಏಪ್ರಿಲ್‌ನಲ್ಲಿ ಪ್ರತಿ ಯೂನಿಟ್‍ಗೆ 33 ಪೈಸೆ ಹೆಚ್ಚಳ ಮಾಡಲಾಗಿತ್ತು. ವಾರ್ಷಿಕವಾಗಿ ವಿದ್ಯುತ್ ದರ ಹೆಚ್ಚಳ ಕಾರಣ ನೀಡಲಾಗಿತ್ತು.

2022 – ಜೂನ್‌ನಲ್ಲಿ ಪ್ರತಿ ಯೂನಿಟ್‍ಗೆ 31 ಪೈಸೆ ಏರಿಕೆ ಮಾಡಲಾಗಿತ್ತು. ಇಂಧನ ಹೊಂದಾಣಿಕೆ ಶುಲ್ಕ ಎಂದು ಕಾರಣವನ್ನು ನೀಡಿತ್ತು.

ಈಗ ಇಂಧನ ಇಲಾಖೆ ನೀಡುತ್ತಿರುವ ಕಾರಣ ಏನು?
ಕಲ್ಲಿದ್ದಲು ಖರೀದಿ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ಇಂಧನ ಹೊಂದಾಣಿಕೆ ಶುಲ್ಕ ಪರಿಷ್ಕರಣೆ ಮಾಡಬೇಕು. ಆದರೆ ಗ್ರಾಹಕರಿಗೆ ಹೊರೆ ಬೀಳಬಾರದು ಎಂಬ ಕಾರಣಕ್ಕೆ 6 ತಿಂಗಳಿಗೊಮ್ಮೆ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. 2022 ಏ-ಜೂ.ವರೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 643 ಕೋಟಿ ವಿದ್ಯುತ್ ಖರೀದಿ ಹೆಚ್ಚಳವಾಗಿದೆ.

ನಷ್ಟ ತಗ್ಗಿಸಲು ಏನು ಮಾಡಬಹುದು?
– ವಿದ್ಯುತ್ ಸೋರಿಕೆ ತಡೆಗಟ್ಟಬೇಕು. ಜಲವಿದ್ಯುತ್, ಸೌರಶಕ್ತಿ ವಿದ್ಯುತ್, ಪವನ ಶಕ್ತಿ ಬಳಕೆ ಹೆಚ್ಚಿಸಬೇಕು.
– ಥರ್ಮಲ್ ಪವರ್ ಪ್ಲ್ಯಾಂಟ್‍ಗೆ ಮಾತ್ರ ಇಂಧನ ಇಲಾಖೆ ಅವಲಂಬಿತವಾಗಿದ್ದು ದೀರ್ಘಕಾಲಿಕವಾಗಿ ವಿದ್ಯುತ್ ಖರೀದಿ ಒಪ್ಪಂದ ಕೈಬಿಡಬೇಕು.
– ರಾಜ್ಯ ಸರ್ಕಾರದ ಇಲಾಖೆ, ಕೇಂದ್ರದ ಇಲಾಖೆಗಳಿಂದ 6,670 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು ಆ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು.
– ಗುಣಮಟ್ಟದಲ್ಲಿ ವಿದ್ಯುತ್ ಸರಬರಾಜು, ಹೊಸ ಹೊಸ ತಂತ್ರಜ್ಞಾನ ಬಳಕೆ ಮಾಡಬೇಕು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *