ಹುಬ್ಬಳ್ಳಿಯಲ್ಲೀಗ `PAY MAYOR’ ಅಭಿಯಾನ

Public TV
2 Min Read

ಹುಬ್ಬಳ್ಳಿ: ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿಗಳಿಗೆ (President of India) ಪೌರ ಸನ್ಮಾನ ಮಾಡುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದ್ದ ಹುಬ್ಬಳ್ಳಿ (Hubballi) ಧಾರವಾಡ ಮಹಾನಗರ ಪಾಲಿಕೆ (City Corporation) ಮೇಲಿಗ ಗಂಭೀರ ಆರೋಪ ಕೇಳಿ ಬಂದಿದೆ.

ರಾಷ್ಟ್ರಪತಿಗಳ (President Of India) ಕಾರ್ಯಕ್ರಮಕ್ಕೆ ಹಾಕಿದ್ದ ವೇದಿಕೆ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಕೆಲ ಕಾಂಗ್ರೆಸ್ ಕಾರ್ಯಕರ್ತರು, ಪೇ ಸಿಎಂ (PayCM) ಅಭಿಯಾನದ ಮಾದರಿಯಲ್ಲಿ ಪೇ ಮೆಯರ್ (Pay Mayor) ಅಭಿಯಾನ ಆರಂಭಿಸಿದ್ದಾರೆ. ಈ ಪರಿಣಾಮ ಹುಬ್ಬಳ್ಳಿ ಪ್ರಮುಖ ವೃತ್ತಗಳಲ್ಲಿ ಪೇ ಮೇಯರ್ ಅಂತ ಈರೇಶ್ ಅಂಚಟಗೇರಿ ಅವರ ಪೋಸ್ಟರ್ ಹಾಕಲಾಗಿದೆ. ಇದನ್ನೂ ಓದಿ: ದಸರಾ ಸಂಭ್ರಮ – ಲಾರ್ಡ್ಸ್ ಪೆವಿಲಿಯನ್‌ನಲ್ಲಿ ನಿಂತು ತ್ರಿವರ್ಣ ಧ್ವಜ ಹಾರಿಸಿದ ಗಂಗೂಲಿ

ಇದೇ ಸೆಪ್ಟೆಂಬರ್ 26ರಂದು ನಡೆದ ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮಕ್ಕಾಗಿ ದೇಶಪಾಂಡೆ ನಗರದ ಜೀಮ್ ಖಾನ್ ಮೈದಾನದಲ್ಲಿ 5 ಸಾವಿರ ಜನಕ್ಕೆ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಈ ವೇದಿಕೆ ಮತ್ತು ರಾಷ್ಟ್ರಪತಿಗಳ ಪೌರಸನ್ಮಾನಕ್ಕೆ ಬರೊಬ್ಬರಿ 1.5 ಕೋಟಿ ಖರ್ಚಾಗಿದೆ. ಈ ಖರ್ಚು ಮಾಡುವುದರಲ್ಲಿ ಪಾಲಿಕೆ ನಿಯಮ ಪಾಲನೆ ಮಾಡಿಲ್ಲ ಹಾಗೂ ಪೆಂಡಾಲ್ ಹಾಕಿಸಿದ ಬಳಿಕ ಕೊಟೇಶನ್ ಆಹ್ವಾನ ಮಾಡಲಾಗಿದೆ. ಇದರಿಂದಾಗಿ ಕಾರ್ಯಕ್ರಮದ ನಿರ್ವಹಣೆ ಖರ್ಚಿನಲ್ಲಿ ಬ್ರಹ್ಮಾಂಡದ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಮೇಯರ್ ಕೈವಾಡಯಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆರೋಪವಾಗಿದೆ. ಆದ್ದರಿಂದ ಹುಬ್ಬಳ್ಳಿ ನಗರದ ಕೆಲವಡೆ ಪೇ ಮೇಯರ್ ಪೋಸ್ಟರ್ ಅಂಟಿಸಿ ಕಾಂಗ್ರೆಸ್ (Congress) ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್‌ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ

ಕಾಂಗ್ರೆಸ್ ಕಾರ್ಯಕರ್ತರ ಈ ಅಭಿಯಾನಕ್ಕೆ ಮೇಯರ್ ಈರೇಶ್ ಅಂಚಟಗೇರಿ ಕೆಂಡಾಮಂಡಲರಾಗಿದ್ದಾರೆ. ರಾಷ್ಟ್ರಪತಿಗಳ ಕಾರ್ಯಕ್ರಮದ ಖರ್ಚಿನಲ್ಲಿ ಒಂದು ರೂಪಾಯಿ ಸಹ ಭ್ರಷ್ಟಾಚಾರವಾಗಿಲ್ಲ. ಇನ್ನೂ ಕಾರ್ಯಕ್ರಮದ ನಿರ್ವಹಣೆಯಲ್ಲಿ ಮೇಯರ್ ಪಾತ್ರವೇ ಬರುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದರಿಂದ ಒಂದು ಕಡೆ ರಾಷ್ಟ್ರಪತಿಗಳಿಗೆ ಅಪಮಾನ ಮಾಡಿದಂತಾದ್ರೆ ಮತ್ತೊಂದು ಕಡೆ ಮೇಯರ್ ಸ್ಥಾನ ಘನತೆಯನ್ನು ಹಾಳು ಮಾಡುವ ಹುನ್ನಾರ ಇದಾಗಿದೆ. ಹೀಗಾಗಿ ಪೋಸ್ಟರ್ ಅನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದವರ ಮತ್ತು ಪೊಸ್ಟ್ ಅಂಟಿಸಿದವರ ವಿರುದ್ಧ ಪೊಲೀಸ್ ಕಮಿಷನರ್‌ (Police Commissioner Hubballi) ಗೆ ದೂರು ನೀಡಿರುವುದಾಗಿ ಮೇಯರ್ ಮಾಧ್ಯಮಗಳ ಮುಂದೆ ಅಸಮಾಧಾನ ಹೊರಹಾಕಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *