ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ- ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಸ್ಥಳ ಮಹಜರು

Public TV
1 Min Read

ಶಿವಮೊಗ್ಗ: ಜಿಲ್ಲೆಯಲ್ಲಿ ಐಸಿಸ್ ಜೊತೆ ನಂಟು ಹೊಂದಿದ್ದ ಇಬ್ಬರು ಶಂಕಿತ ಉಗ್ರರನ್ನು (Terrorist) ಪೊಲೀಸರು (Police) ಬಂಧಿಸಿ, (Arrest) ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಸ್ಥಳಕ್ಕೆ ಶಂಕಿತ ಉಗ್ರರನ್ನು ಕರೆತಂದು ಮಹಜರು ನಡೆಸಿದ್ದಾರೆ.

ಮಂಗಳೂರು ಮೂಲದ ಮಾಜ್ ಮುನೀರ್ ಅಹಮ್ಮದ್, ಶಿವಮೊಗ್ಗ ಸಿದ್ದೇಶ್ವರ ನಗರದ ನಿವಾಸಿ ಸೈಯದ್ ಯಾಸಿನ್‌ನ್ನು ಪೊಲೀಸರು ಬಂಧಿಸಿದ್ದಾರೆ. ತೀರ್ಥಹಳ್ಳಿ ಮೂಲದ ಶಾರೀಕ್‌ಗೆ ಬಲೆ ಬೀಸಲಾಗಿದೆ. ಈ ಮೂವರೂ ಶಿವಮೊಗ್ಗದಲ್ಲಿ ಪಿಯುಸಿ ಒಟ್ಟಿಗೆ ಮುಗಿಸಿದ್ದರು. ಬಳಿಕ ಎಂಜಿನಿಯರಿಂಗ್‌ಗೆ ಸೇರಿಕೊಳ್ಳುತ್ತಾರೆ. ಆದರೆ, ವ್ಯಾಸಂಗದ ಜೊತೆ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದರು ಎಂಬ ಆರೋಪ ಇದೀಗ ಕೇಳಿ ಬರುತ್ತಿದೆ.

ಯಾಸಿನ್ ಕಳೆದ 2 ತಿಂಗಳ ಹಿಂದಷ್ಟೇ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದ. ಪೋಷಕರ ಬಳಿ ಒಳ್ಳೆಯ ಕೆಲಸಕ್ಕಾಗಿ ಹುಡುಕುತ್ತಿದ್ದೇನೆ ಎಂದಿದ್ದ. ಆದರೆ ಈ ಎಂಜಿನಿಯರಿಂಗ್ ಪದವಿ ವ್ಯಾಸಂಗದ ಜೊತೆಗೆ ಬಾಂಬ್ ತಯಾರಿಕೆಯನ್ನು ಕಲಿಯುತ್ತಿದ್ದ ಎಂಬುದು ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ. ಇದನ್ನೂ ಓದಿ: ವಿಧಾನಸಭೆಯಲ್ಲಿ PSI ಹಗರಣದ ಗದ್ದಲ- ರಾಜಕಾರಣಿಗಳ ಬಂಧನಕ್ಕೆ ಒತ್ತಾಯಿಸಿದ ಸಿದ್ದರಾಮಯ್ಯ

ಇನ್ನು ಯಾಸಿನ್‌ನನ್ನು ರಾತ್ರಿಯೇ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಂಡ ಸಿದ್ದೇಶ್ವರ ನಗರದ ಆತನ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದರು. ಜೊತೆಗೆ ಶಿವಮೊಗ್ಗದ (Shivamogga) ಪುರಲೆ ಸಮೀಪದ ತುಂಗಾನದಿ ದಡದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಎಂಬ ಮಾಹಿತಿ ತಿಳಿದು, ಆ ಸ್ಥಳಕ್ಕೂ ಬಂಧಿತ ಯಾಸಿನ್‌ನನ್ನ ಕರೆದೊಯ್ದು ಪಂಚನಾಮೆ ನಡೆಸಿದ್ದಾರೆ. ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾಗಿ ಕಾಲು ಮುಟ್ಟಿ ನಮಸ್ಕರಿಸಿದ ಬಿಎಸ್‌ವೈ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *