ಕೊಹ್ಲಿಯನ್ನು ಆರಂಭಿಕನನ್ನಾಗಿ ಆಡಿಸಿ ತಲೆ ಇಲ್ಲದ ಕೆಲಸ ಮಾಡ್ಬೇಡಿ- ಗಂಭೀರ್ ಗರಂ

By
2 Min Read

ಮುಂಬೈ: ಉತ್ತಮ ಲಯ ಕಂಡುಕೊಂಡಿರುವ ವಿರಾಟ್ ಕೊಹ್ಲಿ (Virat Kohli) ಅವರನ್ನ ಆರಂಭಿಕನನ್ನಾಗಿ ಆಡಿಸಿ ತಲೆ ಇಲ್ಲದ ಕೆಲಸ ಮಾಡಬೇಡಿ. ಕೆ.ಎಲ್ ರಾಹುಲ್ (KL Rahul) ಹಾಗೂ ರೋಹಿತ್ ಶರ್ಮಾ (Rohit Sharma) ಅವರ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಏಷ್ಯಾಕಪ್ 2022 (Aisa Cup 2022) ಟೂರ್ನಿಯಲ್ಲಿ ಭರ್ಜರಿ ಶತಕ ಹಾಗೂ ಅರ್ಧ ಶತಕಗಳೊಂದಿಗೆ ಒಟ್ಟು 276 ರನ್ ಸಿಡಿಸಿದ್ದಾರೆ. ಆ ಮೂಲಕ 1,021 ದಿನಗಳ ಬಳಿಕ ಮೊದಲ ಶತಕ ಸಿಡಿಸಿದ್ದಾರೆ. ಮೂರು ವರ್ಷಗಳ ಬಳಿಕ ಅತ್ಯುತ್ತಮ ಲಯ ಕಂಡುಕೊಂಡಿರುವ ಕೊಹ್ಲಿ ವಿಶ್ವಕಪ್‌ನಲ್ಲೂ (T20 WorldCup) ಉತ್ತಮ ಆಟವಾಡುವ ಭರವಸೆ ಮೂಡಿಸಿದ್ದಾರೆ. ಇದನ್ನೂ ಓದಿ: ಈಗ ಗ್ರೌಂಡ್ ಹೊರಗಡೆಯೂ ದಾಖಲೆ ಬರೆದ ಕೊಹ್ಲಿ

ಈ ನಡುವೆ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತನಾಡಿರುವ ಗೌತಮ್ ಗಂಭೀರ್ (Gautam Gambhir), ಭಾರತ ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಅವರೇ ಇನ್ನಿಂಗ್ಸ್ ಆರಂಭಿಸಬೇಕೆಂದೂ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕಿಸ್ತಾನ ಪಂದ್ಯದ ವೇಳೆ ನನ್ನ ಮಗಳು ಭಾರತದ ಧ್ವಜವನ್ನೇ ಹಿಡಿದಿದ್ದಳು – ಶಾಹಿದ್ ಅಫ್ರಿದಿ

ವಿರಾಟ್ ಕೊಹ್ಲಿಯನ್ನು ಆರಂಭಿಕನನ್ನಾಗಿ ಆಡಿಸಿ ತಲೆ ಇಲ್ಲದಿರುವ ಕೆಲಸ ಮಾಡಬೇಡಿ. ರಾಹುಲ್ ಹಾಗೂ ಶರ್ಮಾ ಅವರ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಲು ಸಾಧ್ಯವಿಲ್ಲ. ಈ ಹಿಂದೆಯೂ ಕೂಡ ನಾನು ಈ ವಿಷಯ ಹೇಳಿದ್ದೆ. ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡುವುದು ತುಂಬಾ ಆರಾಮದಾಯಕವಾಗಿರುತ್ತದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳು 10 ಓವರ್‌ಗಳವರೆಗೂ ಬ್ಯಾಟ್ ಮಾಡಿದರೆ, 3ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಆಡಿಸಬೇಕೆಂದು ಬಯಸುತ್ತೇನೆ. ಒಂದು ವೇಳೆ ಆರಂಭಿಕರು ಬೇಗ ವಿಕೆಟ್ ಒಪ್ಪಿಸಿದರೆ, ಆಗ ಮಾತ್ರ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಬೇಕು ಎಂದು ಗಂಭೀರ್ ಗೇಮ್ ಪ್ಲ್ಯಾನ್‌ನಲ್ಲಿ ಹೇಳಿದ್ದಾರೆ.

ಇದಕ್ಕೆ ದನಿ ಗೂಡಿಸಿರುವ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್, ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಬೇಕೆಂದು ನಾನೂ ಬಯಸುತ್ತೇನೆ. ಅವರು ಸ್ಟ್ರೈಕ್ ರೇಟ್ ಅನ್ನು ಕುಶಲತೆಯಿಂದ ನಿರ್ವಹಿಸಬಹುದು, ಅವರ ಓಟ ಕೂಡ ಅಸಾಧಾರಣವಾಗಿದೆ. ಸ್ಪಿನ್ನರ್‌ಗಳ ಪಾಲಿಗೆ ಅವರು ಸವಾಲುದಾಯಕವಾಗಬಹುದು ಎಂದು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *