ಭಾರತ-ಪಾಕಿಸ್ತಾನ ಪಂದ್ಯದ ವೇಳೆ ನನ್ನ ಮಗಳು ಭಾರತದ ಧ್ವಜವನ್ನೇ ಹಿಡಿದಿದ್ದಳು – ಶಾಹಿದ್ ಅಫ್ರಿದಿ

Public TV
1 Min Read

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ (Cricket) ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ಭಾರತೀಯ ಕ್ರಿಕೆಟ್ ತಂಡದೊಂದಿಗೆ ವಿವಾದಗಳ ಸುದೀರ್ಘ ಇತಿಹಾಸ ಹೊಂದಿದ್ದಾರೆ. ಗೌತಮ್ ಗಂಭೀರ್ ಮತ್ತು ಇತರ ಭಾರತೀಯ ಕ್ರಿಕೆಟಿಗರೊಂದಿಗೆ ಅನೇಕ ಬಾರಿ ಮುಖಾಮುಖಿಯಾಗಿದ್ದಾರೆ. ಆದರೆ ಅವರು ಮಾಧ್ಯಮದಲ್ಲಿ ನೀಡಿದ ಹೇಳಿಕೆಯೊಂದು ಭಾರತೀಯ ಕ್ರಿಕೆಟಿಗರಿಗೆ (Team India) ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಏಷ್ಯಾಕಪ್ ಟಿ20 (Aisa Cup T20) ಟೂರ್ನಿಯ ಕುರಿತು ಮಾತನಾಡಿರುವ ಅಫ್ರಿದಿ, ಭಾರತ ಮತ್ತು ಪಾಕಿಸ್ತಾನ (India Pakistan) ನಡುವಿನ ಏಷ್ಯಾ ಕಪ್ 2022ರ ಪಂದ್ಯದ ವೇಳೆ ನನ್ನ ಮಗಳು ಪಾಕಿಸ್ತಾನ ಧ್ವಜಕ್ಕಿಂತ ಭಾರತ ಧ್ವಜವನ್ನೇ ಹಿಡಿದು ಬೀಸುತ್ತಿದ್ದಳು ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪಾಕ್ ಕೈ ಹಿಡಿದ ರಿಜ್ವಾನ್ – ರೋಚಕ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನಕ್ಕೆ ಜಯ

ಸ್ಟೇಡಿಯಂನಲ್ಲಿ ಕೇವಲ ಪಾಕಿಸ್ತಾನಿ ಅಭಿಮಾನಿಗಳು ಶೇ.10 ರಷ್ಟು ಇದ್ದರೆ, ಶೇ.90 ರಷ್ಟು ಭಾರತದ ಅಭಿಮಾನಿಗಳೇ ತುಂಬಿದ್ದರು. ಭಾರತೀಯ ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ವಿಷಯವನ್ನು ನನ್ನ ಹೆಂಡತಿ ನನಗೆ ಹೇಳಿದಳು ಎಂದು ಹೇಳಿಕೊಂಡಿದ್ದಾರೆ.

ಪಾಕಿಸ್ತಾನದ ಧ್ವಜಗಳು ಅಲ್ಲಿ ಲಭ್ಯವಿರಲಿಲ್ಲ. ಆದ್ದರಿಂದ ನನ್ನ ಕಿರಿಯ ಮಗಳು ಭಾರತದ ಧ್ವಜವನ್ನು ಹಿಡಿದು ಬೀಸುತ್ತಿದ್ದಳು. ನಾನು ವೀಡಿಯೊವನ್ನು ಸ್ವೀಕರಿಸಿದ್ದೇನೆ. ಆದರೆ ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳಲು ಆಗಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರನ ಶವವನ್ನು ಹೊರತೆಗೆದು ಅಂತ್ಯಸಂಸ್ಕಾರಕ್ಕೆ ಅವಕಾಶ ಕೋರಿದ್ದ ಅರ್ಜಿ ವಜಾ

ಮೊದಲ ಪಂದ್ಯದಲ್ಲಿ 147 ರನ್‌ಗಳಿಸಿ ಭಾರತದ ಎದುರು ಸೋತ ಪಾಕಿಸ್ತಾನ, ಸೂಪರ್ ಫೋರ್ ಲೀಗ್‌ನಲ್ಲಿ 182 ರನ್‌ಗಳಿಸಿ ಭಾರತದ ವಿರುದ್ಧ ಗೆಲುವು ದಾಖಲಿಸಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *