ಕೆಲಸದಲ್ಲಿ ಅಸಡ್ಡೆ – ಜ್ಯೂನಿಯರ್ಸ್‍ನ ಲಾಕಪ್‍ಗೆ ಹಾಕಿದ ಪೊಲೀಸ್ ಅಧಿಕಾರಿ

Public TV
1 Min Read

ಪಾಟ್ನಾ: ತಮ್ಮ ಐವರು ಕಿರಿಯ ಉದ್ಯೋಗಿಗಳು (Juniors) ಕೆಲಸದಲ್ಲಿ ಅಸಡ್ಡೆ ತೋರಿದ್ದರಿಂದ ಅಸಮಾಧಾನಗೊಂಡ ಪೊಲೀಸ್ ಅಧಿಕಾರಿಯೊಬ್ಬರು (Police Officer) ಎಲ್ಲರನ್ನು ಲಾಕಪ್ (Lockup) ಒಳಗೆ ಕೂಡಿ ಹಾಕಿರುವ ಘಟನೆ ಬಿಹಾರದ ನವಾಡ ಪಟ್ಟಣದಲ್ಲಿ ನಡೆದಿದೆ.

ಸೆಪ್ಟೆಂಬರ್ 8 ರಂದು ನಡೆದ ಈ ಘಟನೆ ಕುರಿತಂತೆ ಪೊಲೀಸ್ ಅಧೀಕ್ಷಕ ಗೌರವ್ ಮಂಗ್ಲಾ (Gaurav Mangla) ವಿರುದ್ಧ ತನಿಖೆ ನಡೆಸುವಂತೆ ಬಿಹಾರ(Bihar )ಪೊಲೀಸ್ ಅಸೋಸಿಯೇಷನ್ ಜಿಲ್ಲಾ ಘಟಕಗಳ ಸಿಬ್ಬಂದಿ ಸಂಘ ಒತ್ತಾಯಿಸಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ, ರಾಯಚೂರಲ್ಲಿ ಟ್ರ್ಯಾಕ್ಟರ್ ಹೆಸರಲ್ಲಿ ರೈತರಿಗೆ ಮೋಸ

ಠಾಣೆಯ ಒಳಗಿದ್ದ ಕ್ಯಾಮೆರಾದಲ್ಲಿ ಈ ಘಟನೆಯ ದೃಶ್ಯ ಸೆರೆಯಾಗಿದ್ದು, ಸಬ್ ಇನ್ಸ್‌ಪೆಕ್ಟರ್ ಶತ್ರುಘ್ನ ಪಾಸ್ವಾನ್ ಮತ್ತು ರಾಮರೇಖಾ ಸಿಂಗ್, ಎಎಸ್‍ಐ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ ಉರಾನ್ ಅವರನ್ನು ನಾವಡ ನಗರ ಪೊಲೀಸ್ ಠಾಣೆಯ(Navada Nagar police station) ಲಾಕಪ್ ಒಳಗೆ ಕೂಡಿಹಾಕಲಾಗಿತ್ತು. ಸುಮಾರು ಎರಡು ಗಂಟೆಗಳ ಬಳಿಕ ಮಧ್ಯರಾತ್ರಿ ಎಲ್ಲರನ್ನು ಹೊರಗೆ ಬಿಡಲಾಯಿತು.

ಈ ಕುರಿತಂತೆ ಪ್ರತಿಕ್ರಿಯಿಸಿದ ಎಸ್‍ಪಿ ಗೌರವ್ ಮಂಗ್ಲಾ ಅವರು ಅಂತಹದ್ದೇನೂ ನಡೆದಿಲ್ಲ ಎಂದು ಹೇಳಿದ್ದಾರೆ. ಠಾಣೆಯ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ಸಿಂಗ್(Inspector Vijay Kumar Singh) ಅವರು ಕೂಡ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಆದರೆ ಮೂಲಗಳ ಪ್ರಕಾರ ಗೌರವ್ ಮಂಗ್ಲಾ ಅವರು ಪ್ರಕರಣಗಳನ್ನು ಪರಿಶೀಲಿಸಲು ಸೆಪ್ಟೆಂಬರ್ 8 ರಂದು ರಾತ್ರಿ 9 ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆ ಬಂದಿದ್ದರು. ಕೆಲ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ರೊಚ್ಚಿಗೆದ್ದ ಅವರು, ಎಲ್ಲರನ್ನು ಲಾಕಪ್‍ಗೆ ಹಾಕುವಂತೆ ಆದೇಶಿಸಿದರು. ಆದರೆ ಏನು ನಿರ್ಲಕ್ಷ್ಯ ಮಾಡಿದರು ಎಂಬುವುದನ್ನು ಎಲ್ಲೂ ಕೂಡ ಬಹಿರಂಗ ಪಡಿಸಿಲ್ಲ.

ಇದೀಗ ಕಿರಿಯ ಉದ್ಯೋಗಿಗಳನ್ನು ಪೊಲೀಸ್ ಅಧಿಕಾರಿ ಲಾಕಪ್‍ಗೆ ಹಾಕಿಸಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ತಾಲಿಬಾನ್ ತರಬೇತಿ ವೇಳೆ ಹೆಲಿಕಾಪ್ಟರ್ ಪತನ – ಮೂವರು ಸಾವು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *