PSI ಅಕ್ರಮದಲ್ಲಿ ಸಚಿವರು, ಶಾಸಕರ ಕೈವಾಡ ಬಯಲಾಗಿರುವುದನ್ನು ‘ಜನವೇದನ’ ಸಮಾವೇಶದಲ್ಲಿ ಹೇಳಿಕೊಳ್ಳುವಿರಾ: ಕಾಂಗ್ರೆಸ್ ಪ್ರಶ್ನೆ

Public TV
3 Min Read

ಬೆಂಗಳೂರು: ಬಿಜೆಪಿ (BJP) ಆಡಳಿತದಲ್ಲಿ ಹೊರಬಂದ ಪಿಎಸ್‍ಐ (PSI) ಹಗರಣವೇ ನಿಮ್ಮ ಸಾಧನೆಯೇ ಬಿಜೆಪಿ? ಸಿಎಂ ಬೊಮ್ಮಾಯಿ (Basavarj Bommai) ಅವರೇ, ಪಿಎಸ್‍ಐ ಅಕ್ರಮದಲ್ಲಿ ನಿಮ್ಮ ಸಂಪುಟ ಸಚಿವರು, ಶಾಸಕರ ಕೈವಾಡ ಬಯಲಾದರೂ ಕಣ್ಮುಚ್ಚಿ ಕುಳಿತಿರುವುದನ್ನು, 54,000 ಯುವಕರಿಗೆ ಮೋಸ ಮಾಡಿದ್ದನ್ನು ಸಾಧನೆ ಎಂದು ‘ಜನವೇದನ’ ಸಮಾವೇಶದಲ್ಲಿ ಹೇಳಿಕೊಳ್ಳುವಿರಾ ಎಂದು ಕಾಂಗ್ರೆಸ್ (Congress) ಸರಣಿ ಟ್ವೀಟ್ ಮೂಲಕ ಬಿಜೆಪಿಗೆ ಚಾಟಿ ಬೀಸಿದೆ.

ಟ್ವೀಟ್‍ನಲ್ಲಿ ಏನಿದೆ?:
ಬಿಜೆಪಿ ಆಡಳಿತದಲ್ಲಿ ಹೊರಬಂದ ಪಿಎಸ್‍ಐ ಹಗರಣವೇ ನಿಮ್ಮ ಸಾಧನೆಯೇ ಬಿಜೆಪಿ? ಸಿಎಂ ಬೊಮ್ಮಾಯಿ ಅವರೇ, ಪಿಎಸ್‍ಐ ಅಕ್ರಮದಲ್ಲಿ ನಿಮ್ಮ ಸಂಪುಟ ಸಚಿವರು, ಶಾಸಕರ ಕೈವಾಡ ಬಯಲಾದರೂ ಕಣ್ಮುಚ್ಚಿ ಕುಳಿತಿರುವುದನ್ನು, 54,000 ಯುವಕರಿಗೆ ಮೋಸ ಮಾಡಿದ್ದನ್ನು ಸಾಧನೆ ಎಂದು ‘ಜನವೇದನ’ ಸಮಾವೇಶದಲ್ಲಿ ಹೇಳಿಕೊಳ್ಳುವಿರಾ? ಬಿಜೆಪಿ ಭ್ರಷ್ಟೋತ್ಸವ. ರಾಜ್ಯದ 54 ಸಾವಿರ ಪಿಎಸ್‍ಐ ಅಭ್ಯರ್ಥಿಗಳಿಗೆ ವಂಚಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರದ್ದು ಯಾವ ಸಾಧನೆ? ತಮ್ಮ ಕಛೇರಿಯೇ ಅಕ್ರಮದ ಅಡ್ಡೆಯಾಗಿದ್ದರೂ ಸದನದಲ್ಲಿ ಸುಳ್ಳು ಹೇಳಿ ನಾಡಿನ ದಿಕ್ಕು ತಪ್ಪಿಸಲು ಯತ್ನಿಸಿದ ಗೃಹಸಚಿವರದ್ದು ‘ಜನಸ್ಪಂದನೆ’ಯ ಸಾಧನೆಯೇ? ಈ ವಂಚನೆಯನ್ನು ಸಮಾವೇಶದಲ್ಲಿ ಹೇಳುವಿರಾ? ಇದನ್ನೂ ಓದಿ: ಹಿಮಾಂತ ಬಿಸ್ವಾ ಶರ್ಮಾ ರ‍್ಯಾಲಿಯಲ್ಲಿ ಮೈಕ್ ಕಿತ್ತುಕೊಂಡ ಅಪರಿಚಿತ ವ್ಯಕ್ತಿ – ವೀಡಿಯೋ ವೈರಲ್

ಒಂದೆಡೆ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ನಮ್ಮದು ಪಾರದರ್ಶಕ ತನಿಖೆ ಎನ್ನುತ್ತಾರೆ ಸಿಎಂ. ಇನ್ನೊಂದೆಡೆ ಪಿಎಸ್‍ಐ ಅಕ್ರಮದಲ್ಲಿ ಸಚಿವ ಅಶ್ವಥ್‍ನಾರಾಯಣ ತಮ್ಮ ಸಹೋದರರೊಂದಿಗೆ ಸೇರಿ ಅಕ್ರಮ ನಡೆಸಿದ ಸಂಗತಿ ಬೆಳಕಿಗೆ ಬಂದರೂ ಸಚಿವರ ತನಿಖೆ ಇಲ್ಲ. ಪ್ರಕರಣ ಮುಚ್ಚಿಹಾಕಲು ಯತ್ನಿಸುವುದೇ ನಿಮ್ಮ ಸಾಧನೆಯೇ? ರಾಜ್ಯದ ಇತಿಹಾಸದಲ್ಲೇ ಎಡಿಜಿಪಿಯೊಬ್ಬರು ಅಕ್ರಮದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದು ಇದೇ ಮೊದಲು. ಉನ್ನತ ಮಟ್ಟದ ಅಧಿಕಾರಿಗಳು ಸರ್ಕಾರ ಹಾಗೂ ಮಂತ್ರಿಗಳು ಸಹಕಾರವಿಲ್ಲದೆ ಅಕ್ರಮವನ್ನು ನಡೆಸಲು ಸಾಧ್ಯವೇ ಇಲ್ಲ.

ಮಂತ್ರಿಗಳ ವಿಚಾರಣೆ ನಡೆಸದೆ ಭ್ರಷ್ಟರನ್ನು ರಕ್ಷಿಸಿರುವುದೇ ಬಿಜೆಪಿ ಸರ್ಕಾರದ ಸಾಧನೆ. ಪಿಎಸ್‍ಐ ಹಗರಣದಲ್ಲೂ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಮುಂದುವರಿದಿದೆ. ಸ್ವತಃ ಬಿಜೆಪಿ ಶಾಸಕ ಯತ್ನಾಳ್ ಪರೋಕ್ಷವಾಗಿ ಈ ಸಂಗತಿಯನ್ನು ಬಹಿರಂಗಪಡಿಸಿದರೂ ತನಿಖೆಯಾಗುವುದಿಲ್ಲ. ಅವರಿಗೆ ತಮ್ಮ ತಂದೆಯ ಆಡಳಿತದಲ್ಲಿ ಸಿಕ್ಕ “ಸೂಪರ್ ಸಿಎಂ” ಹುದ್ದೆ ನಿಮ್ಮ ಅವಧಿಯಲ್ಲೂ ಮುಂದುವರಿದಿದೆಯೇ ಬೊಮ್ಮಾಯಿ ಅವರೇ? ರಾಜ್ಯದ ಜನತೆಗೆ ಯಾವ ಸಾಧನೆ, ಯೋಜನೆ, ಸ್ಪಂದನೆ ಮಾದಿದ್ದರೆಂದು ಸರ್ಕಾರ ಸಮಾವೇಶ ಮಾಡುತ್ತಿದೆ? ಸರ್ಕಾರ ಕರ್ನಾಟಕದ ಜನತೆಗೆ, ಕನ್ನಡ ನಾಡುನುಡಿಗೆ ಮಾಡಿದ್ದು ಬಿಟ್ಟರೆ ಬೇರೇನು ಮಾಡಿದೆ? ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ನಾಡಿನ ಸಾಹಿತಿಗಳಿಗೆ ಅವಮಾನಿಸಿದ್ದೇ ನಿಮ್ಮ ಸಾಧನೆಯೇ ಬೊಮ್ಮಾಯಿ ಅವರೇ? ಬಿಜೆಪಿ ಅವರ ಒಂದು ವರ್ಷದ ವಾರ್ಷಿಕೋತ್ಸವಕ್ಕೆ ಸಜ್ಜಾಗಿರುವ ಸರ್ಕಾರ ತಮ್ಮ ಸಾಧನೆ ಏನು ಎಂದು ನಾಡಿನ ಜನತೆಗೆ ಉತ್ತರಿಸಬೇಕು. ಇದನ್ನೂ ಓದಿ: ಗಣಿಗಾರಿಕೆಯಿಂದ ಭಾರತದ GDPಗೆ ಶೇ.2.5 ರಷ್ಟು ಕೊಡುಗೆ: ಪ್ರಲ್ಹಾದ್ ಜೋಶಿ

ಪಠ್ಯಪುಸ್ತಕಗಳಲ್ಲಿ ಅವಾಂತರ ಸೃಷ್ಟಿಸಿದ ಸರ್ಕಾರ ಇನ್ನೂ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಲಿಲ್ಲ. ದೇಶದ್ರೋಹಿಗಳನ್ನು ದೇಶಭಕ್ತರನ್ನಾಗಿ ಬಿಂಬಿಸಿದ್ದೇ ಸಾಧನೆಯೇ? ಸಾಹಿತ್ಯವನ್ನೇ ಅರಿಯದ, ಸುಳ್ಳು ಹೇಳುವುದನ್ನು, ಇತಿಹಾಸ ತಿರುಚುವುದನ್ನು ಕಾಯಕ ಮಾಡಿಕೊಂಡಿರುವ ಬಿಜೆಪಿಯ ಬಾಡಿಗೆ ಭಾಷಣಕಾರನೂ ಮಕ್ಕಳ ಭವಿಷ್ಯ ರೂಪಿಸುವ ಪಠ್ಯದಲ್ಲಿ ಜಾಗ ಪಡೆದದ್ದಕ್ಕಿಂತ ದುರಂತ ಬೇರೊಂದಿಲ್ಲ. ಪಠ್ಯ ಪುಸ್ತಕ ರಚನೆಗೆ ಅಪ್ರಬುದ್ಧರನ್ನು ಕೂರಿಸಿ ಅವಾಂತರ ಎಬ್ಬಿಸಿದ್ದು ಸರ್ಕಾರದ ಮಹಾ ಸಾಧನೆಗಳಲ್ಲೊಂದು! ಮಹಿಳೆಯರಿಗೆ, ಶೋಷಿತರಿಗೆ ಅಕ್ಷರದ ದಾಸೋಹ ನಡೆಸಿದ, “ಅಕ್ಷರದವ್ವ” ಎಂದೇ ಖ್ಯಾತರಾದ ಸಾವಿತ್ರಿ ಬಾ ಪುಲೆ ಅವರ ಪಠ್ಯವನ್ನು ಕೈಬಿಟ್ಟ ಸರ್ಕಾರ ಪಠ್ಯಪುಸ್ತಕಗಳಲ್ಲಿ ಬುಲ್ ಬುಲ್ ಹಕ್ಕಿ ಹಾರಿಸುತ್ತಿದೆ! ಶಿಕ್ಷಣ ವಿರೋಧಿಯಾಗಿ ವರ್ತಿಸಿದ್ದು, ಮಹನೀಯರಿಗೆ ಅವಮಾನಿಸಿದ್ದು ನಿಮ್ಮ ಒಂದು ವರ್ಷದ ಸಾಧನೆಯೇ ಬೊಮ್ಮಾಯಿ ಅವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *