ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ಶೋ ಅಂದ್ರೆ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ. ಇನ್ನು ಮನೆಯಲ್ಲಿನ ಸ್ಪರ್ಧಿಗಳ ಸ್ನೇಹ, ಜಗಳ ಹೀಗೆ ಸಾಕಷ್ಟು ವಿಚಾರಗಳು ಸದ್ದು ಮಾಡುತ್ತಿದೆ. ಇದೀಗ ಇತ್ತೀಚಿನ ಜಯಶ್ರೀ ಆರಾಧ್ಯ ಮತ್ತು ನಂದಿನಿ ಜಗಳ ಕೂಡ ಈಗ ಚರ್ಚೆಗೆ ಗ್ರಾಸವಾಗಿದೆ. ಇನ್ನು ʻಹೇಳಿದ್ದನ್ನೇ ಹೇಳಿ ಹೇಳಿ ಮೆಂಟಲ್ ಆಗೋಗ್ತಿಯಾʼ ಎಂದು ಜಯಶ್ರೀಗೆ ನಂದು ಎಚ್ಚರಿಕೆ ನೀಡಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಾಗಿನಿಂದಲೂ ಜಯಶ್ರೀ ಮತ್ತು ನಂದಿನಿ ನಡುವೆ ಆಗಾಗ ಮನಸ್ತಾಪ ಆಗುತ್ತಲೇ ಇದೆ. ನಂದಿನಿ, ಜಶ್ವಂತ್ ಬೋಪಣ್ಣ ಮತ್ತು ಜಯಶ್ರೀ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಅದರಲ್ಲೂ ಈ ವಾರದ ಕ್ಯಾಪ್ಟೆನ್ಸಿಯಲ್ಲಿ ತಿರುಗುವ ಕುರ್ಚಿ ಟಾಸ್ಕ್ ವೇಳೆ ನಂದಿನಿ ಕಣ್ಣಿಗೆ ಜಯಶ್ರೀ ಆರಾಧ್ಯ ಸ್ಪ್ರೇ ಮಾಡಿಬಿಟ್ಟರು. ಬೇಡ ಎಂದು, ಇತರೆ ಸ್ಪರ್ಧಿಗಳು ಹೇಳಿದ್ದರು ಕೂಡ ಪದೇ ಪದೇ ನಂದಿನಿ ಮುಖಕ್ಕೆ ಜಯಶ್ರೀ ಸ್ಪ್ರೇ ಹಾಕಿದರು. ಜಯಶ್ರೀ ಮಾನವೀಯತೆ ಇಲ್ಲ ಅಂತ ನಂದಿನಿ ಎಲ್ಲರ ಮುಂದೆಯೇ ಹೇಳಿದರು. ಇದನ್ನೂ ಓದಿ:ಸೀರೆಯಲ್ಲಿ ಸೆಕ್ಸಿ ಲುಕ್‌ನಲ್ಲಿ ಕಾಣಿಸಿಕೊಂಡ ಜಾನ್ವಿ ಕಪೂರ್
ಆಟದಲ್ಲಿ ಜಯಶ್ರೀ ಆಡಿರುವ ರೀತಿ ನೋಡಿ, ಕಳಪೆ ಹಣೆಪಟ್ಟಿಯನ್ನ ಸ್ಪರ್ಧಿಗಳು ನೀಡಿದ್ದರು. ಈ ಪರಿಣಾಮ, ಜಯಶ್ರೀ ಆರಾಧ್ಯ ಜೈಲಿಗೆ ತೆರಳಿದರು. ಜೈಲಿನಲ್ಲಿದ್ದ ಜಯಶ್ರೀ ಆರಾಧ್ಯ ಜೊತೆ ಮಾತನಾಡಲು ಬಂದ ನಂದಿನಿ, ಹೇಳಿದ್ದನ್ನೇ ಹೇಳಿ ಹೇಳಿ ಮೆಂಟಲ್ ಆಗೋಗ್ತಿಯಾ ಎಂದರು. ಇಬ್ಬರ ಕಿತ್ತಾಟವನ್ನ ನೋಡುತ್ತಿದ್ದ ಸೋನು, ಈ ಮನೆಯಲ್ಲಿ ಎಲ್ಲಾ ಇದೆ. ಒಬ್ಬರು ಲಾಯರ್ ಕೂಡ ಇರಬೇಕಿತ್ತು. ಆಗ ಇನ್ನೂ ಸಖತ್ತಾಗಿರೋದು ಎಂದರು.



