ವಿವಾದಿತ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಿದ ಸರ್ಕಾರ

Public TV
3 Min Read

ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿದ್ದ, 2022ರ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕ ಪರಿಷ್ಕರಣೆಯ ವಿವಾದಿತ ಪಠ್ಯಗಳನ್ನು ಸರ್ಕಾರ ಹೊಸದಾಗಿ ಪರಿಷ್ಕರಣೆ ಮಾಡಿದೆ. ಸರ್ಕಾರ ಆದೇಶದಂತೆ ಎಂಟು ಪಠ್ಯಗಳನ್ನು ಹೊಸದಾಗಿ ಪರಿಷ್ಕರಣೆ ಮಾಡಿ ಇಲಾಖೆ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದೆ.

text book bjp

ಕನ್ನಡ ಮತ್ತು ಇಂಗ್ಲೀಷ್ ಆವೃತ್ತಿಯ 59 ಪುಟಗಳ ಪರಿಷ್ಕೃತ ಪಠ್ಯ ಬಿಡುಗಡೆ ಮಾಡಲಾಗಿದೆ. 6,7,9ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಗಳು, 7ನೇ ತರಗತಿಯ ಕನ್ನಡ ಭಾಷೆಯ ಪದ್ಯ ಮತ್ತು 4ನೇ ತರಗತಿಯ ಪರಿಸರ ಅಧ್ಯಯನ ಒಂದು ಪಠ್ಯ ಪರಿಷ್ಕರಣೆ ಮಾಡಲಾಗಿದೆ.

ನಮ್ಮ ಸಂವಿಧಾನ, ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ, ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ, ಮೈಸೂರು ಮತ್ತು ಇತರ ಸಂಸ್ಥಾನಗಳು, ಭಾರತದ ಮತ ಪ್ರವರ್ತಕರು, ಕರ್ನಾಟಕ ರಾಜ್ಯ ಏಕೀಕರಣ ಮತ್ತು ಗಡಿ ವಿವಾದಗಳು, ಪ್ರತಿಯೊಬ್ಬರ ವಿಶಿಷ್ಟ, ಗೊಂಬೆ ಕಲಿಸುವ ನೀತಿ ಪಠ್ಯಗಳನ್ನು ಪರಿಷ್ಕರಣೆ ಮಾಡಲಾಗಿದೆ. ಶೀಘ್ರವೇ ಶಾಲೆಗಳಿಗೆ ಹೊಸ ಪರಿಷ್ಕರಣೆ ಪಠ್ಯ ರವಾನೆ ಮಾಡಲಾಗುತ್ತದೆ. ಹೊಸ ಪರಿಷ್ಕೃತ ಪಠ್ಯವನ್ನೇ ಬೋಧನೆ ಮಾಡುವಂತೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಲಾಗಿದೆ.

ಏನೇನು ಪರಿಷ್ಕರಣೆ ಆಗಿದೆ?
ನಮ್ಮ ಸಂವಿಧಾನ (9ನೇ ತರಗತಿ ಸಮಾಜ ವಿಜ್ಞಾನ)
* 2022ರ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎಂಬ ವಾಕ್ಯ ಬಿಟ್ಟು ಹೋಗಿತ್ತು. ಹೊಸ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಅನ್ನೋ ವಾಕ್ಯ ಮರು ಸೇರ್ಪಡೆ ಮಾಡಲಾಗಿದೆ.

ಭಕ್ತಿ ಪಂಥ ಹಾಗೂ ಸೂಫಿ ಪರಂಪರೆ (7ನೇ ತರಗತಿ ಸಮಾಜ ವಿಜ್ಞಾನ)
* 2022ರ ಪರಿಷ್ಕರಣೆಯಲ್ಲಿ ಈ ಪಠ್ಯ ಇರಲಿಲ್ಲ. ಹೊಸದಾಗಿ ಪರಿಷ್ಕರಣೆ ಮಾಡಿರುವ ಪಠ್ಯದಲ್ಲಿ ಹೊಸ ಪಠ್ಯ ಸೇರ್ಪಡೆ ಮಾಡಲಾಗಿದೆ.
* ಅಕ್ಕಮಹಾದೇವಿ, ಕನಕದಾಸ, ಪುರಂದರದಾಸರು ಶರೀಫರು ಸೇರಿದಂತೆ ಅನೇಕ ದಾರ್ಶನಿಕರು ವಿಚಾರಧಾರೆಗಳು ಇರುವ ಪಠ್ಯ ಸೇರ್ಪಡೆ.

ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ (6ನೇ ತರಗತಿ ಸಮಾಜ ವಿಜ್ಞಾನ)
* 2022ರ ಪರಿಷ್ಕರಣೆಯಲ್ಲಿ ಸಿದ್ದಗಂಗಾ ಮಠವೂ ಸಾವಿರಾರು ಮಕ್ಕಳಿಗೆ ಅಕ್ಷರ, ಅನ್ನ ದಾಸೋಹ ಮಾಡುತ್ತಿದೆ ಎಂಬ ವಾಕ್ಯ ಬಿಟ್ಟು ಹೋಗಿತ್ತು. ಹೊಸ ಪರಿಷ್ಕರಣೆಯಲ್ಲಿ ಆ ವಾಕ್ಯವನ್ನು ಸೇರ್ಪಡೆ ಮಾಡಲಾಗಿದೆ.

ಮೈಸೂರು ಮತ್ತು ಇತರ ಸಂಸ್ಥಾನಗಳು (7ನೇ ತರಗತಿ ಸಮಾಜ ವಿಜ್ಞಾನ)
* 2022ರ ಪರಿಷ್ಕರಣೆಯಲ್ಲಿ ಸುರಪುರದ ನಾಯಕರ ಇತಿಹಾಸ ಕೈ ಬಿಡಲಾಗಿತ್ತು. ಹೊಸ ಪರಿಷ್ಕರಣೆಯಲ್ಲಿ ಸುರಪುರ ನಾಯಕರ ಇತಿಹಾಸ ಪಠ್ಯ ಸೇರ್ಪಡೆ ಮಾಡಲಾಗಿದೆ.

ಭಾರತದ ಮತ ಪ್ರವರ್ತಕರು (9ನೇ ತರಗತಿ ಸಮಾಜ ವಿಜ್ಞಾನ)
* 2022ರ ಪರಷ್ಕರಣೆಯಲ್ಲಿ ಬಸವಣ್ಣರ ಕುರಿತಾದ ಪಠ್ಯ ಭಾರೀ ವಿರೋಧಕ್ಕೆ ಕಾರಣವಾಗಿತ್ತು.
* ಹೊಸ ಪರಿಷ್ಕರಣೆಯಲ್ಲಿ ಬಸವಣ್ಣನವರ ವಿವಾದಿತ ಪಠ್ಯ ತೆಗೆದು ಹೊಸ ಪಠ್ಯವನ್ನ ಸೇರ್ಪಡೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಏಕೀಕರಣ ಮತ್ತು ಗಡಿವಿವಾದಗಳು (7ನೇ ತರಗತಿ ಸಮಾಜ ವಿಜ್ಞಾನ)
* 2022 ರ ಪರಿಷ್ಕರಣೆಯಲ್ಲಿ ಆಲೂರು ವೆಂಕಟರಾಯರು, ರಾಷ್ಟ್ರಕವಿ ಗೋವಿಂದ ಪೈ ಭಾವ ಚಿತ್ರ ಮಾತ್ರ ನೀಡಲಾಗಿತ್ತು. ಕುವೆಂಪು ಭಾವ ಚಿತ್ರ ಕೈ ಬಿಡಲಾಗಿದೆ ಅಂತ ಆರೋಪ ಇತ್ತು.
* ಹೊಸ ಪರಿಷ್ಕರಣೆಯಲ್ಲಿ ಕುವೆಂಪು, ಹುಯಿಲಗೋಳ ನಾರಾಯಣರಾವ್‍ರ ಭಾವಚಿತ್ರ ಸೇರ್ಪಡೆ ಮಾಡಲಾಗಿದೆ.

ಪ್ರತಿಯೊಬ್ಬರು ವಿಶಿಷ್ಟ (4ನೇ ತರಗತಿ ಪರಿಸರ ಅಧ್ಯಯನ)
* ಕಾಂಗ್ರೆಸ್ ಸರ್ಕಾರದ ಪರಿಷ್ಕರಣೆಯಲ್ಲಿ ಅನೇಕರ ಪ್ರೋತ್ಸಾಹದಿಂದ ಕುವೆಂಪು ಪ್ರಖ್ಯಾತ ಕವಿ ಎನಿಸಿಕೊಂಡಿದ್ದರು ಎಂಬ ವಿವಾದಿತ ಅಂಶ ಸೇರ್ಪಡೆ ಮಾಡಲಾಗಿತ್ತು.
* ಹೊಸ ಪರಿಷ್ಕರಣೆಯಲ್ಲಿ ಈ ವಿವಾದಿತ ಅಂಶವನ್ನು ಕೈ ಬಿಡಲಾಗಿದೆ.

ಗೊಂಬೆ ಕಲಿಸುವ ನೀತಿ (7ನೇ ತರಗತಿ ಕನ್ನಡ ಭಾಷೆ)
* 2022ರ ಪರಿಷ್ಕರಣೆಯಲ್ಲಿ ಆಡಿಸಿ ನೋಡಿ ಬೀಳಿಸಿ ನೋಡು ಪದ್ಯದ ಸಾಹಿತ್ಯ ಬರೆದವರು ಆರ್.ಎನ್. ಜಯಗೋಪಾಲ್ ಅಂತ ತಪ್ಪಾಗಿ ಮುದ್ರಣ ಮಾಡಲಾಗಿತ್ತು.
* ಹೊಸ ಪರಿಷ್ಕರಣೆಯಲ್ಲಿ ಅದನ್ನು ಸರಿ ಮಾಡಿ ಸಾಹಿತಿ ಚಿ.ಉದಯ್ ಶಂಕರ್ ಅವರ ಪರಿಚಯ ಸೇರ್ಪಡೆ ಮಾಡಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *