– ಕಾಶಿಯ ಹಾರ ಮುಂದಿನ ಚುನಾವಣೆವರೆಗೂ ನಿಮ್ಮ ಕೊರಳಲ್ಲೇ ಇರಲೆಂದ ಶ್ರೀಗಳು
ಚಿಕ್ಕಮಗಳೂರು: ನಿನ್ನೆ ಕೊಡಗು ಜಿಲ್ಲೆಯಲ್ಲಿ ಮಳೆಹಾನಿ ಪ್ರದೇಶಕ್ಕೆ ಪ್ರವಾಸ ಕೈಗೊಂಡು ಸರಣಿ ಪ್ರತಿಭಟನೆ ಎದುರಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಇದೇ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಮಠಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರನ್ನು ರಂಭಾಪುರಿ ಶ್ರೀಗಳು ಮಂತ್ರ-ಘೋಷಗಳ ಮೂಲಕ ಸ್ವಾಗತಿಸಿದ್ದಾರೆ. ಅಲ್ಲದೇ ಕಾಶಿಯ ಹಾರ ನೀಡಿ ಮುಂದಿನ ಚುನಾವಣೆವರೆಗೂ ನಿಮ್ಮ ಕೊರಳಲ್ಲೇ ಇರಲಿ ಎಂದು ಆಶೀರ್ವಾದ ಮಾಡಿದ್ದಾರೆ. ಬಳಿಕ ಬರ್ತೀನಿ… ಬರ್ತೀನಿ… ಅಂದು ಈಗ ಬಂದಿದ್ದೀರಾ.. ಎಂದೂ ಪ್ರಶ್ನಿಸಿದ್ದಾರೆ.
ರಂಭಾಪುರಿ ಪೀಠದ ಶ್ರೀ ಪ್ರಸನ್ನ ವೀರ ಸೋಮೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದ ಸಿದ್ದರಾಮಯ್ಯ ಅವರು ವೀರಭದ್ರನಾಥ ಸ್ವಾಮಿ, ರೇಣುಕಾಚಾರ್ಯರ ಗದ್ದುಗೆಯ ದರ್ಶನ ಸಹ ಪಡೆದಿದ್ದಾರೆ. ಅಲ್ಲದೇ ಇಲ್ಲಿಗೆ ಬಂದದ್ದು ನನ್ನ ಪುಣ್ಯ ಎಂಬ ಮಾತುಗಳನ್ನೂ ಆಡಿದ್ದಾರೆ. ಇದನ್ನೂ ಓದಿ: ಚಂಬಲ್ ಕಣಿವೆ ದರೋಡೆಕೋರರು ವಿಧಾನಸೌಧದಲ್ಲಿದ್ದಾರೆ: ಹೆಚ್ಡಿಕೆ
ಇದೇ ವೇಳೆ ಶ್ರೀಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಧರ್ಮ ಒಡೆಯುವುದು ನನ್ನ ಉದ್ದೇಶ ಆಗಿರಲಿಲ್ಲ. ಕೆಲವರು ನನ್ನನ್ನ ದಾರಿ ತಪ್ಪಿಸಿದರು. ಇನ್ಯಾವತ್ತೂ ಧರ್ಮದ ವಿಷಯಕ್ಕೆ ಹೋಗುವುದಿಲ್ಲ. ರಾಜ್ಯ ಜನರ ಅಭಿವೃದ್ದಿಗೆ ಆದ್ಯತೆ ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ದೋಬಾರಾ ಸಿನಿಮಾ ಆಸ್ಕರ್ಗೆ ಕಳುಹಿಸಿ: ಅನುರಾಗ್ ಕಶ್ಯಪ್ಗೆ ವ್ಯಂಗ್ಯ ಮಾಡಿದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ
ಅದಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಶೃಂಗೇರಿ ಶಾರದಾಂಬೆಯ ದರ್ಶನವನ್ನೂ ಪಡೆದಿದ್ದಾರೆ.