ಭೂಮಿಯಿಂದ 30 ಕಿ.ಮೀ ಎತ್ತರದಲ್ಲಿ ಹಾರಾಡಿತು ರಾಷ್ಟ್ರಧ್ವಜ

Public TV
1 Min Read

ನವದೆಹಲಿ: ಭಾರತ ತನ್ನ ಸ್ವಾತಂತ್ರ‍್ಯದ 75 ವರ್ಷಗಳನ್ನು ಪೂರೈಸಿದ್ದು, ಎಲ್ಲೆಡೆ ರಾಷ್ಟ್ರಧ್ವಜವನ್ನು ಹಾರಿಸಿ ಸಂಭ್ರಮಿಸಲಾಗುತ್ತಿದೆ. ಈ ಕ್ಷಣಕ್ಕೆ ಇನ್ನೂ ಹೆಚ್ಚಿನ ವಿಶೇಷತೆ ನೀಡಲು ಭೂಮಿಯಿಂದ ಸುಮಾರು 30 ಕಿ.ಮೀ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಲಾಗಿದೆ.

ಸ್ಪೇಸ್ ಕಿಡ್ಜ್ ಇಂಡಿಯಾವು ಭೂಮಿಯಿಂದ ಸುಮಾರು 30 ಕಿ.ಮೀ ಎತ್ತರದಲ್ಲಿ ಭಾರತದ ಧ್ವಜವನ್ನು ಹಾರಿಸಿದೆ. ಧ್ವಜವನ್ನು ಭೂಮಿಯಿಂದ ಸುಮಾರು 1,06,000 ಅಡಿ ಎತ್ತರಕ್ಕೆ ಬಲೂನ್‌ನಲ್ಲಿ ಕಳುಹಿಸಲಾಗಿದೆ. ಇದನ್ನೂ ಓದಿ: ದೇಶ ವಿಭಜನೆ ಒಪ್ಪಿಕೊಳ್ಳದಿದ್ರೆ ಭಾರತ ಛಿದ್ರವಾಗ್ತಿತ್ತು- ಪಟೇಲ್ ಹೇಳಿಕೆ ಪುನರುಚ್ಚರಿಸಿದ ಸೋನಿಯಾ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಹಾಗೂ ಐತಿಹಾಸಿಕ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಹರ್ ಘರ್ ತಿರಂಗ ಅಭಿಯಾನದ ಭಾಗವಾಗಿ ಸ್ಪೇಸ್ ಕಿಡ್ಜ್ ಇಂಡಿಯಾ ಬಾನಿನಲ್ಲಿ ಬಾವುಟವನ್ನು ಹಾರಿಸಿದೆ.

ಸ್ಪೇಸ್ ಕಿಡ್ಜ್ ಇಂಡಿಯಾ ಸಂಸ್ಥೆಯು ದೇಶಕ್ಕಾಗಿ ಯುವ ವಿಜ್ಞಾನಿಗಳನ್ನು ಸೃಷ್ಟಿಸುತ್ತದೆ ಹಾಗೂ ಪ್ರಪಂಚದಾದ್ಯಂತ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಈ ಸಂಸ್ಥೆ ಇತ್ತೀಚೆಗೆ ಉಪಗ್ರಹವನ್ನು ಲೋ ಅರ್ಥ್ ಆರ್ಬಿಟ್‌ಗೆ ಉಡಾಯಿಸಿತು. 75ನೇ ಸ್ವಾತಂತ್ರ್ಯವನ್ನು ಗುರುತಿಸಲು ಭಾರತದಾದ್ಯಂತ 750 ವಿದ್ಯಾರ್ಥಿನಿಯರು ಸೇರಿ ಆಜಾದಿಸ್ಯಾಟ್ ಅನ್ನು ಅಭಿವೃದ್ಧಿಪಡಿಸಿದ್ದರು. ಆದರೆ ಉಪಗ್ರಹವನ್ನು ಉಡಾವಣೆ ಮಾಡಲು ಬಳಸಿದ್ದ ಎಸ್‌ಎಸ್‌ಎಲ್‌ವಿ ರಾಕೆಟ್‌ನ ಮಿಷನ್ ವಿಫಲವಾಗಿತ್ತು. ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ 5 ಹೊಸ ಯೋಜನೆಗಳನ್ನು ಘೋಷಣೆ ಮಾಡಿದ ಸಿಎಂ

Live Tv

Share This Article
Leave a Comment

Leave a Reply

Your email address will not be published. Required fields are marked *