12 ವರ್ಷದ ದಾಂಪತ್ಯದಲ್ಲಿ ಕಿರಾತಕನ ಎಂಟ್ರಿ – ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕತ್ತು ಹಿಸುಕಿ ಕೊಂದ್ಲು

Public TV
3 Min Read

ಕಲಬುರಗಿ: ಪ್ರಿಯಕರನ ಜೊತೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಹೆತ್ತ ಮಕ್ಕಳ ಕಣ್ಣೆದುರೆ ಕತ್ತು ಹಿಸುಕಿ ಪತ್ನಿಯೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ರಾಮಣ್ಣ ಎಂದು ಗುರುತಿಸಲಾಗಿದೆ. ಕುಡ್ಡಹಳ್ಳಿ ಗ್ರಾಮದ ನಿವಾಸಿಯಾಗಿರುವ ರಾಮಣ್ಣ ನಿನ್ನೆ ರಾತ್ರಿ ಮನೆಯಿಂದ ಹೊರಗಡೆ ಬಂದು ಮೂತ್ರವಿಸರ್ಜನೆ ಮಾಡಿ ಮನೆಯೊಳಗೆ ಬಂದಿದ್ದಾನೆ. ರಾಮಣ್ಣ ಮನೆಗೆ ಬರುತ್ತಿದ್ದಂತೆಯೇ ಆತನ ಹಿಂದೆಯೇ ಮಲ್ಲಪ್ಪ ಮತ್ತು ಆತನ ಇಬ್ಬರು ಸ್ನೇಹಿತರು ಕೂಡ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ತಕ್ಷಣ ರಾಮಣ್ಣನ ಜೊತೆ ಗಲಾಟೆ ತೆಗೆದು ಕತ್ತು ಹಿಸುಕಿ ಕೊಲೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆಗ ಮನೆಯಲ್ಲಿಯೇ ಇದ್ದ ರಾಮಣ್ಣನ ಪತ್ನಿ ಸುನೀತಾ ಕೂಡ ಹಂತಕರ ಜೊತೆ ಕೈ ಜೋಡಿಸಿ  ಚಮಚವನ್ನು ಗಂಡನ ಬಾಯಿಗೆ ಚುಚ್ಚಿ ಕೊನೆಗೆ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಇದೇ ವೇಳೆ ತಂದೆಯನ್ನು ಉಳಿಸಲು ಅಡ್ಡ ಬಂದ ಎರಡು ಮಕ್ಕಳನ್ನು ಕೋಣೆಯಲ್ಲಿ ಕೂಡಿ ಹಾಕಿ ರಾಮಪ್ಪನನ್ನು ಕೊಲೆ ಮಾಡಿದ್ದಾರೆ. ಕೊಲೆಯ ನಂತರ ಸುನೀತಾ, ಮಲ್ಲಪ್ಪ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿಕೊಂಡು ರಾಮಪ್ಪನ ಕೈ, ಕಾಲು ಕಟ್ಟಿ ಹಾಕಿ ಗೋಣಿ ಚೀಲದಲ್ಲಿ ಶವವನ್ನು ಸಾಗಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ಮನೆಯಿಂದ ಹೊರ ಬಂದು ಶವ ಸಾಗಾಟ ಮಾಡುವಾಗ ಗ್ರಾಮಸ್ಥರು ಬೈಕ್‍ನಲ್ಲಿ ಬರುವುದನ್ನು ಕಂಡು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಸ್ಪಾ ಮ್ಯಾನೇಜರ್, ಗ್ರಾಹಕರು ಸೇರಿ ಯುವತಿ ಮೇಲೆ ಅತ್ಯಾಚಾರ – ಪೊಲೀಸರಿಗೆ ನೋಟಿಸ್

CRIME 2

ಅಷ್ಟಕ್ಕೂ ಕೊಲೆಗೆ ಅಸಲಿ ಕಾರಣ ಅಂದರೆ ಹೆಂಡತಿಯ ಅಕ್ರಮ ಸಂಬಂಧ. ರಾಮಪ್ಪನ ಪತ್ನಿ ಸುನೀತಾ ಅದೇ ಗ್ರಾಮದ ಮಲ್ಲಪ್ಪನ ಜೊತೆ ಕಳೆದ ಮೂರು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದಳು. ಅನೈತಿಕ ಸಂಬಂಧದ ವಿಚಾರ ತಿಳಿದ ಗಂಡ, ಮಲ್ಲಪ್ಪನಿಂದ ದೂರ ಇರುವಂತೆ ಸೂಚಿಸಿದ್ದಾನೆ. ಆದರೆ ಗಂಡನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದ ಸುನೀತಾ ತನ್ನ ಲವ್ವಿ-ಡವ್ವಿಯನ್ನು ಮುಂದುವರಿಸಿದ್ದರು.

ರಾಮಪ್ಪ ಒಕ್ಕಲುತನ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಹಗಲು ಹೊತ್ತಲ್ಲಿ ಜಮೀನಿಗೆ ಕೆಲಸಕ್ಕೆ ಹೋದಾಗ, ಸುನೀತಾ ಮಲ್ಲಪ್ಪನಿಗೆ ಫೋನ್ ಮಾಡಿ ಕರೆಯಿಸಿಕೊಳ್ಳುತ್ತಿದ್ದಳು. ಬಳಿಕ ಮನೆಯಲ್ಲಿದ್ದ ಸುನೀತಾಳ ಮಕ್ಕಳಿಗೆ ಈ ಮಲ್ಲಪ್ಪ ಹಣ ಕೊಟ್ಟು ಹೊರಗಡೆ ಕಳುಹಿಸಿ ಮನೆಯಲ್ಲಿ ಸುನೀತಾ ಜೊತೆ ಚಕ್ಕಂದ ಆಡುವುದಕ್ಕೆ ಮುಂದಾಗುತ್ತಿದ್ದರು. ಇದೇ ರೀತಿಯಾಗಿ ಕಳೆದ ಮೂರು ವರ್ಷಗಳಿಂದ ಇವರಿಬ್ಬರು ಚಕ್ಕಂದ ಮುಂದುವರಿಸಿಕೊಂಡು ಬಂದಿದ್ದರು. ಇದನ್ನೂ ಓದಿ: ಐವರ ಪ್ರಾಣ ಉಳಿಸಿದೆ ಅಂಗಾಂಗ ದಾನ – ಮಗನ ಸಾವಿನಲ್ಲಿ ಸಾರ್ಥಕತೆ ಕಂಡ ಕುಟುಂಬ

ಅಕ್ರಮ ಸಂಬಂಧ ಗೊತ್ತಾದ ಹಿನ್ನೆಲೆಯಲ್ಲಿ ರಾಮಪ್ಪ ತನ್ನ ತಾಯಿ ಮತ್ತು ಅಣ್ಣನನ್ನು ಮನೆಯಿಂದ ಆಚೆ ಕಳುಹಿಸಿ ಗಂಡ, ಹೆಂಡತಿ ಇಬ್ಬರು ಮಕ್ಕಳು ಮನೆಯಲ್ಲಿ ವಾಸ ಮಾಡುವುದಕ್ಕೆ ಮುಂದಾಗಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡ ಸುನೀತಾ ತನ್ನ ಅಕ್ರಮ ಸಂಬಂಧವನ್ನು ಗಂಡನ ಭಯವಿಲ್ಲದೇ ಮುಂದುವರಿಸಿದ್ದಳು. ಇದರಿಂದ ಕೆರಳಿದ ಗಂಡ ಆತನ ಜೊತೆ ಸೇರ ಬೇಡ ಅಂತಾ ಹೇಳಿದಕ್ಕೆ ಗಂಡ ಹೆಂಡತಿಯ ಮಧ್ಯೆ ಗಲಾಟೆ ಆಗುತ್ತಿತ್ತು. ನಿನ್ನೆಯು ಸಹ ಗಲಾಟೆ ಜೋರಾದ ಹಿನ್ನೆಲೆ ಪ್ರಿಯಕರನಿಗೆ ಹೇಳಿ ಕೊಲೆ ಮಾಡುವ ನಿರ್ಧಾರಕ್ಕೆ ಬಂದು ರಾತ್ರಿ ಕೊಲೆ ಮಾಡಿದ್ದಾರೆ.

ಇದೀಗ ಈ ಸಂಬಂಧ ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ನಿ ಸುನೀತಾ, ಮಲ್ಲಪ್ಪ ಮತ್ತು ಆತನ ಇಬ್ಬರು ಸ್ನೇಹಿತರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅದೇನೆ ಆಗಲಿ ಕಳೆದ 12 ವರ್ಷಗಳ ಸುಖ ಸಂಸಾರದಲ್ಲಿ ಬಿರುಗಾಳಿ ಎದ್ದು ಗಂಡ ಕೊಲೆಯಾದರೆ, ಹೆಂಡತಿ ಸೆರೆಮನೆ ಸೇರಿದ್ದಾಳೆ. ಇದರ ಮಧ್ಯೆ ತಂದೆ, ತಾಯಿ ಕಳೆದುಕೊಂಡ ಎರಡು ಮಕ್ಕಳು ಅನಾಥರಾಗಿ ಬಿಟ್ಟಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *