6 ವರ್ಷದ ಪ್ರೀತಿಗೆ ಅಂತ್ಯ ಹಾಡಿದ ಟೈಗರ್ ಶ್ರಾಫ್ – ದಿಶಾ ಪಠಾಣಿ

Public TV
1 Min Read

ಬಿಟೌನ್‌ನ `ಭಾಗಿ 2′ ಜೋಡಿ ಟೈಗರ್ ಶ್ರಾಫ್ ಮತ್ತು ದಿಶಾ ಪಠಾಣಿ ನಾನೊಂದು ತೀರ, ನೀನೊಂದು ತೀರ ಎಂದು ಹೇಳಿದ್ದಾರೆ. ಟೈಗರ್ ಮತ್ತು ದಿಶಾ ಡೇಟಿಂಗ್ ಮಾಡುತ್ತಿದ್ದರು. ಈಗ ಏಕಾಎಕಿ ಲವ್ ಸ್ಟೋರಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್‌ನ `ಭಾಗಿ 2′ ಚಿತ್ರದ ಮೂಲಕ ಸಿನಿಪ್ರೇಕ್ಷಕರ ಮನಗೆದ್ದ ಜೋಡಿ ಟೈಗರ್ ಮತ್ತು ದಿಶಾಗೆ ಈ ಸಿನಿಮಾ ಚಿತ್ರೀಕರಣದ ಸಮಯದಲ್ಲೇ ಪ್ರೀತಿ ಚಿಗುರಿತ್ತು. ನಂತರ 6 ವರ್ಷಗಳ ಸುದೀರ್ಫವಾಗಿ ಡೇಟಿಂಗ್ ಮಾಡ್ತಿದ್ದರು. ಈಗ ಈ ಜೋಡಿ ದೂರ ದೂರ ಆಗಿದ್ದಾರೆ. ಡೇಟಿಂಗ್ ವೇಳೆ ವಿದೇಶಕ್ಕೆಲ್ಲ ಜತೆಯಾಗಿ ಹಾರಿದ್ದ ಈ ಜೋಡಿ, ಕಳೆದ ಒಂದು ವರ್ಷದಿಂದ ಜತೆಯಾಗಿಲ್ಲ ಎಂದು ತಿಳಿಸಲಾಗುತ್ತಿದೆ. ಇದನ್ನೂ ಓದಿ;ಮೈ ಕಾಣುವಂತಹ ಮಿನಿ ಡ್ರೆಸ್‌ಗೆ 2 ಲಕ್ಷ ರೂ. ಕೊಟ್ರಾ ಮಲೈಕಾ ಅರೋರಾ!

ಬಹಳ ಸಮಯದಿಂದ ಬೇರೆಯಾಗಿರುವ ಈ ಜೋಡಿ. ಬ್ರೇಕಪ್ ಕುರಿತು ಅಧಿಕೃತವಾಗಿ ಹೇಳಿಕೊಂಡಿಲ್ಲ. ಈಗ ಸಾಲು ಸಲು ಸಿನಿಮಾಗಳಲ್ಲಿ ಈ ಜೋಡಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಬಿಟೌನ್‌ನಲ್ಲಿ ಕೈ ಕೈ ಹಿಡಿದು ಓಡಾಡಿಕೊಂಡಿದ್ದ ಟೈಗರ್ ಮತ್ತು ದಿಶಾ ಅವರ ದಾರಿ ಬೇರೆ ಬೇರೆಯಾಗಿದೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಈ ಜೋಡಿ ಮತ್ತೆ ಒಂದಾಗಲಿ ಅಂತಾ ಹಾರೈಸುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *