ಕೊಲಂಬೋ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ದೇಶದಲ್ಲಿಲ್ಲ ಎಂದಿದ್ದ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ಧನ ಅವರು ಇದೀಗ ಅಧ್ಯಕ್ಷರು ಇನ್ನೂ ದೇಶದಲ್ಲಿಯೇ ಇದ್ದಾರೆ ಎಂದು ಹೇಳಿದ್ದಾರೆ.
ಗೊಟಬಯ ರಾಜಪಕ್ಸೆ ಅವರೊಂದಿಗೆ ಮಹಿಂದಾ ಯಾಪಾ ಅಬೇವರ್ಧನ ಅವರು ಸಂಪರ್ಕದಲ್ಲಿದ್ದು, ಅಧ್ಯಕ್ಷರು ಸ್ಪೀಕರ್ ಜೊತೆಗೆ ಸಂವಹನ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೊಟಬಯ ರಾಜಪಕ್ಸೆ
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಜನ ಅಧ್ಯಕ್ಷ ಗೊಟಬಯ ರಾಜಪಕ್ಸೆ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಮನೆಗೆ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರಪತಿ ಹಾಗೂ ಪ್ರಧಾನಿ ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಅವರ ನಿವಾಸಗಳನ್ನು ಒತ್ತುವರಿ ಮಾಡಿಕೊಂಡಿಕೊಳ್ಳುವುದಾಗಿ ಪ್ರತಿಭಟನಾಕಾರರು ಹೇಳಿದ್ದರು.
ದೇಶದಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದ ಹಿನ್ನೆಲೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಸೋಮವಾರ ಅಧಿಕೃತವಾಗಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರಿಗೆ ತಿಳಿಸಿದ್ದರು. ಇದನ್ನೂ ಓದಿ: ಲಂಕಾ ಪ್ರತಿಭಟನೆ: ಪ್ರಧಾನಿಯ ಬೆಡ್ರೂಂನಲ್ಲಿ WWE ಪ್ರದರ್ಶನ
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಂದಾ ಯಾಪಾ ಅಬೇವರ್ಧನ ಅವರು, ಭದ್ರತೆ ಇಲ್ಲದ ಕಾರಣ ಗೊಟಬಯ ರಾಜಪೆಕ್ಸೆ ಅವರು ದೇಶದಿಂದ ಹೊರಗಿದ್ದಾರೆ ಎಂದಿದ್ದರು. ಆದರೀಗ ರಾಜಕೀಯ ಬಿಕ್ಕಟ್ಟಿನಿಂದ ಸಂದರ್ಭಾನುಸಾರವಾಗಿ ಹೀಗೆ ಹೇಳಿದ್ದೆ. ಆದರೆ ಗೊಟಬಯ ರಾಜಪಕ್ಸೆ ಇನ್ನೂ ದೇಶದಲ್ಲಿಯೇ ಇದ್ದಾರೆ ಎಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.