ಆಕೆಯ ಮೇಲೆ ಪದೇ-ಪದೇ ಅತ್ಯಾಚಾರ ಮಾಡಿದ್ರು, ನರಮಾಂಸ ತಿನ್ನುವಂತೆ ಒತ್ತಾಯಿಸಿದ್ರು!

Public TV
2 Min Read

ಬನ್ಗುಯಿ: ಕಾಂಗೋನಲ್ಲಿ ಉಗ್ರಗಾಮಿಗಳು ಮಹಿಳೆಯೊಬ್ಬರನ್ನು ಎರಡು ಬಾರಿ ಅಪಹರಿಸಿದ್ದಾರೆ. ಪದೇ ಪದೇ ಅತ್ಯಾಚಾರ ಎಸಗಿದ್ದಲ್ಲದೇ ಆಕೆಗೆ ನರ ಮಾಂಸವನ್ನು ಬೇಯಿಸಿ ತಿನ್ನುವಂತೆ ಒತ್ತಾಯಿಸಿದ್ದಾರೆ ಎಂದು ಕಾಂಗೋಲೀಸ್ ಹಕ್ಕುಗಳ ಗುಂಪು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ.

STOP RAPE

ಮಹಿಳಾ ಹಕ್ಕುಗಳ ಗುಂಪಿನ ಮಹಿಳಾ ಸಾಲಿಡಾರಿಟಿ ಫಾರ್ ಇಂಟಿಗ್ರೇಟೆಡ್ ಪೀಸ್ ಅಂಡ್ ಡೆವಲಪ್‌ಮೆಂಟ್ (SOFEPADI)ನ ಅಧ್ಯಕ್ಷೆ ಜೂಲಿಯೆನ್ ಲುಸೆಂಗೆ, ಕಾಂಗೋದ ಪೂರ್ವದ ಸಂಘರ್ಷದ ಬಗ್ಗೆ 15 ಸದಸ್ಯರ ಮಂಡಳಿಯನ್ನು ಉದ್ದೇಶಿಸಿ ಮಾತನಾಡುವಾಗ ಅತ್ಯಾಚಾರಕ್ಕೆ ಸಿಕ್ಕಿ ನಲುಗಿದ ಮಹಿಳೆಯೊಬ್ಬರ ಕರಾಳ ಕಥೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಟಾಯ್ಲೆಟ್‌ ನೀರು ಮರುಬಳಸಿ ತಯಾರಿಸಿದ ಬಿಯರ್‌ ಸೂಪರ್‌ ಎಂದ ಮದ್ಯಪ್ರಿಯರು!

ಕಳೆದ ಮೇ ತಿಂಗಳಿನಲ್ಲಿ ಕಾಂಗೋ ಸರ್ಕಾರ ಹಾಗೂ ಬಂಡಾಯ ಗುಂಪುಗಳ ನಡುವೆ ನಡೆಯುತ್ತಿದ್ದ ಹೋರಾಟವು ಹಿಂಸಾಚಾರಕ್ಕೆ ತಿರುಗಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕಾಂಗೋ ಹಾಗೂ ಅಲ್ಲಿನ ನಿಯಮಗಳ ಕುರಿತು ವಿಶ್ಲೇಷಣೆ ನಡೆಸಿತು.

ಈ ವೇಳೆ ಅಪಹರಣಕ್ಕೊಳಗಾದ ಕುಟುಂಬ ಸದಸ್ಯರೊಬ್ಬರನ್ನು ಬಿಡುಗಡೆ ಮಾಡಲು ಹೋದಾಗ CODECO ಉಗ್ರಗಾಮಿಗಳು ಮಹಿಳೆಯನ್ನು ಅಪಹರಿಸಿದ್ದರು. ಆಕೆಯ ಮೇಲೆ ಪದೇ-ಪದೇ ಅತ್ಯಾಚಾರ ನಡೆಸಿದರು. ದೈಹಿಕವಾಗಿ ಹಿಂಸಿಸಿದ್ರು. ಇಷ್ಟು ಸಾಲದೆಂಬಂತೆ ಒಬ್ಬ ವ್ಯಕ್ತಿಯ ಕತ್ತನ್ನು ಸೀಳಿ, ಅವನ ಕರುಳನ್ನು ಹೊರತೆಗೆದು ಬೇಯಿಸುವಂತೆ ಹೇಳಿದ್ದಾರೆ. ಜೊತೆಗೆ ಅದರಿಂದಲೇ ಅಡುಗೆ ತಯಾರಿಸಲು ಹೇಳಿದ್ದಾರೆ. ಊಟ ತಯಾರಿಸಿದ ಬಳಿಕ ಎಲ್ಲ ಕೈದಿಗಳಿಗೂ ಮನುಷ್ಯನ ಮಾಂಸವನ್ನೇ ತಿನ್ನಿಸಿದ್ದಾರೆ ಎಂದು ಲುಸೆಂಜ್ ಮಹಿಳೆಯ ಕಥೆ ವಿವರಿಸುತ್ತಾ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಸೆಪ್ಟೆಂಬರ್‌ವರೆಗೂ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದ ದೆಹಲಿ ಸರ್ಕಾರ

ಅಲ್ಲಿಂದ ಕೆಲ ದಿನಗಳ ನಂತರ ಮಹಿಳೆಯನ್ನು ಬಿಡುಗಡೆ ಮಾಡಲಾಯಿತು. ಮಹಿಳೆ ಮನೆಗೆ ಮರಳುತ್ತಿರುವಾಗ ಮತ್ತೊಂದು ಉಗ್ರಗಾಮಿಗಳ ಗುಂಪೊಂದು ಆಕೆಯನ್ನು ಅಪಹರಿಸಿದೆ. ಅಲ್ಲಿಯೂ ಕೂಡ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಲಾಗಿದೆ. ಮತ್ತೆ ನರ ಮಾಂಸವನ್ನು ಬೇಯಿಸಿ ತಿನ್ನುವಂತೆ ಒತ್ತಾಯಿಸಲಾಗಿದೆ. ಅಂತಿಮವಾಗಿ ಅಲ್ಲಿಂದ ತಪ್ಪಿಸಿಕೊಂಡ ಮಹಿಳೆ ತನ್ನ ಕಥೆಯನ್ನು ಹೇಳಿಕೊಂಡಿರುವುದಾಗಿ ವಿವರಿಸಿದ್ದಾರೆ.

ದೀರ್ಘಕಾಲ ಹೋರಾಡುತ್ತಿರುವ ಹಲವು ಸಶಸ್ತ್ರ ಸೇನಾ ಪಡೆಗಳಲ್ಲಿ ಕಾಂಗೋದ CODECO ಸಹ ಒಂದಾಗಿದೆ. ಕಳೆದ ದಶಕಗಳಲ್ಲಿ ಈ ಪಡೆಯು ಸಾವಿರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಸ್ಥಳಾಂತರಿಸಿದೆ ಎಂದು ಯುನ್ ಭದ್ರತಾ ಮಂಡಳಿ ಸಭೆಯಲ್ಲಿ ತಿಳಿದುಬಂದಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *