ಕೊನೇ ಕ್ಷಣದಲ್ಲಿ ಔರಂಗಾಬಾದ್, ಉಸ್ಮಾನಾಬಾದ್‌ ನಗರದ ಹೆಸರನ್ನೇ ಬದಲಿಸಿದ ಎಂವಿಎ ಸರ್ಕಾರ

Public TV
1 Min Read

ಮುಂಬೈ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಕೈಗೊಂಡಂತೆ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ನಗರಗಳ ಹೆಸರನ್ನು ಬದಲಾಯಿಸಿ ತೀರ್ಮಾನ ಕೈಗೊಂಡಿದೆ.

ಮಹಾರಾಷ್ಟ್ರದ ಸರ್ಕಾರ ಪತನದ ಅಂಚಿನಲ್ಲಿದ್ದು, ಬುಧವಾರ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಹಠಾತ್ತನೆ ಪ್ರಮುಖ ನಗರಗಳ ಹೆಸರನ್ನು ಬದಲಿಸಲಾಗಿದೆ. ಇದನ್ನೂ ಓದಿ: ಮದರಸಾಗಳಲ್ಲಿ ಮಕ್ಕಳಿಗೆ ರುಂಡ ಕತ್ತರಿಸುವ ಕಾನೂನನ್ನೇ ಬೋಧಿಸಲಾಗುತ್ತಿದೆ – ಆರಿಫ್ ಖಾನ್ ಕಿಡಿ

ಔರಂಗಬಾದ್ ಅನ್ನು ‘ಸಂಭಾಜಿನಗರ’ ಹಾಗೂ ಉಸ್ಮಾನಾಬಾದ್ ಅನ್ನು ‘ಧಾರಶಿವ್’ ಎಂದು ಮರುನಾಮಕರಣ ಮಾಡಲು ಸಂಪುಟ ಅನುಮೋದಿಸಿದೆ. ಇದರೊಂದಿಗೆ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(ಎನ್‌ಎಂಐಎ) ಸ್ಥಳೀಯ ನಾಯಕ ಡಿಬಿ ಪಾಟೀಲ್ ಹೆಸರನ್ನು ಮರುನಾಮಕರಣಗೊಳಿಸಲು ಅನುಮೋದನೆ ನೀಡಿದೆ. ಇದನ್ನೂ ಓದಿ: ರಿಲಯನ್ಸ್ ರಿಟೇಲ್ ಅಧ್ಯಕ್ಷೆಯಾಗಲಿದ್ದಾರೆ ಅಂಬಾನಿ ಪುತ್ರಿ ಇಶಾ

ಸಭೆ ಮುಕ್ತಾಯದ ಬಳಿಕ ಮಾತನಾಡಿದ ಠಾಕ್ರೆ, ನೀವು ನನ್ನೊಂದಿಗೆ ಇರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ನನ್ನವರೇ ನನಗೆ ದ್ರೋಹ ಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗುರುವಾರ ವಿಶ್ವಾಸಮತ ಯಾಚನೆಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸೂಚಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *