‘ಆಸ್ಕರ್’ ಕಮಿಟಿಯಲ್ಲಿ ಭಾರತದ ಮೂವರಿಗೆ ಸ್ಥಾನ : ತಮಿಳು ನಟ ಸೂರ್ಯಗೂ ಚಾನ್ಸ್

Public TV
1 Min Read

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಆಯ್ಕೆಯ ಸಮಿತಿಯಲ್ಲಿ ಈ ಬಾರಿ ಭಾರತದ ಮೂವರಿಗೆ ಸ್ಥಾನ ಸಿಕ್ಕಿದೆ. ಅದರಲ್ಲೂ ತಮಿಳಿನ ಖ್ಯಾತ ನಟ ಸೂರ್ಯ ಕೂಡ ಈ ಬಾರಿಯ ಆಯ್ಕೆಯ ಕಮಿಟಿಯಲ್ಲಿ ಇರಲಿದ್ದಾರೆ ಎನ್ನುವುದು ವಿಶೇಷ. ಬಾಲಿವುಡ್ ನಿಂದ ಖ್ಯಾತ ನಟಿ ಕಾಜೋಲ್ ಮತ್ತು ನಿರ್ದೇಶಕಿ ರೀಮಾ ಕಗ್ತಿ ಆಯ್ಕೆಯಾಗಿದ್ದರೆ, ದಕ್ಷಿಣದಿಂದ ಸೂರ್ಯ ಅವರಿಗೆ ಈ ಗೌರವ ಲಭಿಸಿದೆ.

ಸೂರ್ಯ ನಟನೆಯ ಜೈ ಭೀಮ್, ಸೂರರೈ ಪೊಟ್ರೊ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದವು. ಅದರಲ್ಲೂ ಜೈ ಭೀಮ್ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಇದರ ಬೆನ್ನಲ್ಲೇ ಆಸ್ಕರ್ ಕಮಿಟಿಗೆ ಆಯ್ಕೆ ಆಗುವ ಮೂಲಕ, ಈ ಗೌರವಕ್ಕೆ ಪಾತ್ರರಾದ ಮೊದಲ ದಕ್ಷಿಣದ ತಾರೆ ಎಂಬ ಹೆಗ್ಗಳಿಕೆ ಇವರು ಪಾತ್ರರಾಗಿದ್ದಾರೆ. ಇಂಥದ್ದೊಂದು ಕಮಿಟಿಗೆ ಆಯ್ಕೆ ಆಗಿರುವುದಕ್ಕೆ ಅವರ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬಂದಿದೆ. ಇದನ್ನೂ ಓದಿ:ಪಿಂಕ್ ಕಲರ್ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

ನಿರ್ದೇಶಕ, ಬರಹಗಾರ ಸೇರಿದಂತೆ ಒಟ್ಟು ಆಸ್ಕರ್ ನಲ್ಲಿ 17 ಶಾಖೆಗಳು ಇರಲಿವೆ. ಅವುಗಳಲ್ಲಿ ಒಂದನ್ನು ಸೂರ್ಯ ಅವರು ಆಯ್ಕೆ ಮಾಡಿಕೊಳ್ಳಬೇಕಿದೆ.  ಸೂರ್ಯ ಅವರು ಯಾವ ಶಾಖೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರದ್ದು. ನಟ, ನಿರ್ಮಾಪಕರೂ ಆಗಿರುವ ಸೂರ್ಯ ಬಹುಶಃ ಈ ಎರಡರ ಆಯ್ಕೆಯಲ್ಲಿ ಇರಬಹುದು ಎನ್ನಲಾಗುತ್ತಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *