ನೈಟ್‍ಕ್ಲಬ್‍ನಲ್ಲಿ 20 ಯುವಕರ ನಿಗೂಢ ಸಾವು

Public TV
1 Min Read

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಕರಾವಳಿ ಪಟ್ಟಣದ ಪೂರ್ವ ಲಂಡನ್‍ನಲ್ಲಿರುವ ನೈಟ್‍ಕ್ಲಬ್‍ನಲ್ಲಿ 20 ಯುವಕರು ಮೃತಪಟ್ಟಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಚಳಿಗಾಲದ ಶಾಲಾ ಪರೀಕ್ಷೆ ಮುಕ್ತಾಯವಾಗಿದ್ದ ಹಿನ್ನೆಲೆ ಯುವಕರು ಪಾರ್ಟಿ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಅದಕ್ಕೆ ಪೂರ್ವ ಲಂಡನ್‍ನಲ್ಲಿರುವ ನೈಟ್‍ಕ್ಲಬ್‍ನಲ್ಲಿ ಪಾರ್ಟಿಗೆ ಎಲ್ಲ ಯುವಕರು ಪಾಲ್ಗೊಂಡಿದ್ದರು. ಆದರೆ ಬೆಳಗ್ಗೆಯಾಗುವಷ್ಟರಲ್ಲಿ ಎಲ್ಲರು ಮಸಣದ ಬಾಗಿಲನ್ನು ತಟ್ಟಿದ್ದಾರೆ. ಆದರೆ ಇವರ ಸಾವಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಬಿಜೆಪಿಯ ಕೊಳಕು ರಾಜಕೀಯವನ್ನು ಜನರು ಸೋಲಿಸಿದ್ದಾರೆ: ಕೇಜ್ರಿವಾಲ್

ಸ್ಥಳೀಯ ವರದಿಗಳ ಪ್ರಕಾರ, ಮೃತದೇಹಗಳ ಮೇಲೆ ಯಾವುದೇ ರೀತಿಯ ಗಾಯಗಳು ಗೋಚರವಾಗಿಲ್ಲ. ಕ್ಲಬ್‍ನಲ್ಲಿದ್ದ ಟೇಬಲ್‍ಗಳು ಮತ್ತು ಕುರ್ಚಿಗಳು ಅಲ್ಲಲ್ಲಿ ಹರಡಿಕೊಂಡಿವೆ. ಪ್ರಸ್ತುತ ಸಾವಿನ ಕಾರಣವೇನು ಎಂದು ದೃಢೀಕರಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ವಕ್ತಾರ ತಿಳಿಸಿದರು.

ಸಾಧ್ಯವಾದಷ್ಟು ಬೇಗ ಈ ಸಾವಿಗೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳುತ್ತೇವೆ. ಪ್ರಸ್ತುತ ಮೃತದೇಹಗಳನ್ನು ಶವಪರೀಕ್ಷೆಗೆಂದು ಕಳುಹಿಸಲಾಗಿದೆ ಎಂದು ವಿವರಿಸಿದರು.

Live Tv

Share This Article
Leave a Comment

Leave a Reply

Your email address will not be published. Required fields are marked *