ಶಿವಸೇನೆ ಹೆಸರು ಬಳಸದಂತೆ ಶಿಂಧೆಗೆ ಠಾಕ್ರೆ ಸವಾಲ್ – 16 ರೆಬೆಲ್ ಶಾಸಕರಿಗೆ ನೊಟೀಸ್

Public TV
1 Min Read

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಗೊಂದಲ ಮುಂದುವರಿದಿದೆ. ಶಿವಸೇನಾ ನಾಯಕ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸಲ್ಲಿಸಿದ ಅರ್ಜಿಯನ್ನು ಅಂಗೀಕರಿಸಲಾಗಿದೆ.

ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ 46 ಶಾಸಕರೊಂದಿಗೆ ಅಸ್ಸಾಂನಲ್ಲಿ ಬೀಡುಬಿಟ್ಟಿದ್ದಾರೆ. ಇವರಲ್ಲಿ 38 ಮಂದಿ ಶಿವಸೇನೆ, ಉಳಿದವರು ಸ್ವತಂತ್ರ ಶಾಸಕರಾಗಿದ್ದಾರೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸುತ್ತ ಅನುಮಾನದ ಪ್ರಶ್ನೆಗಳು ಮೂಡಲಾರಂಭಿಸಿವೆ. ಈ ಬಂಡಾಯದ ಬಗ್ಗೆ ಉದ್ಧವ್ ಅವರಿಗೆ ಮೊದಲೇ ಗೊತ್ತಿತ್ತು ಎಂದು ರಾಜಕೀಯ ಕಾರಿಡಾರ್‍ನಲ್ಲಿ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ:  ನಾನು ಓಡಿ ಬಂದೆ, ಅಲ್ಲಿರುವವರು ಒತ್ತಡದಲ್ಲಿ ಸಹಿ ಹಾಕ್ತಿದ್ದಾರೆ: ಶಿಂಧೆ ವಿರುದ್ಧ ಶಿವಸೇನಾ ಶಾಸಕ ಆರೋಪ

ಶಿವಸೇನೆ, ಕಾಂಗ್ರೆಸ್ ಮತ್ತು ಎನ್‍ಸಿಪಿ ನಡುವೆ ಇತ್ತೀಚೆಗೆ ಹೊಂದಾಣಿಕೆ ಇರಲಿಲ್ಲ. ಅದರಲ್ಲೂ ಸಮಯ ಕಳೆದಂತೆ ಶಿವಸೇನೆ ಕಾಂಗ್ರೆಸ್ ಮತ್ತು ಎನ್‍ಸಿಪಿ ಶಾಸಕರ ನಡುವೆ ಅಸಮಾಧಾನ ಹೆಚ್ಚಾಗುತ್ತಿತ್ತು. ಒಂದರ ಹಿಂದೆ, ಒಂದರಂತೆ ಹಲವು ನಾಯಕರು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೂ ದೂರು ನೀಡಿದರೂ ಪರಿಹಾರ ಸಿಕ್ಕಿರಲಿಲ್ಲ. ಈ ಮೈತ್ರಿಯನ್ನು ಹೇಗೆ ಮುರಿಯುವುದು ಎಂದು ಸ್ವತಃ ಉದ್ಧವ್ ಅವರಿಗೆ ಅರ್ಥವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಶಾಸಕರೇ ಸ್ವತಃ ಹೊಸ ದಾರಿ ಕಂಡುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.  ಇದನ್ನೂ ಓದಿ: ಉದ್ಧವ್‌, ಏಕನಾಥ್‌ ವೈಮನಸ್ಸಿಗೆ ಮರಾಠಿ ಸಿನಿಮಾ ಕಾರಣ?

ರಾಜ್ಯಸಭೆ ಮತ್ತು ನಂತರದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶಗಳು ಈ ಅಸಮಾಧಾನ ಇರುವುದು ಪಕ್ಕಾ ಎನ್ನುವುದನ್ನು ಸಾಬೀತು ಪಡಿಸುತ್ತಿವೆ. ಎರಡೂ ಚುನಾವಣೆಗಳಲ್ಲಿ ಶಿವಸೇನೆಗೆ ಹಾನಿ ಮಾಡದೇ, ಕಾಂಗ್ರೆಸ್‍ಗೆ ಮಾತ್ರ ಹಿನ್ನೆಡೆಯಾಗಿದೆ. ಬಂಡಾಯ ಶಾಸಕರು ಶಿವಸೇನೆಗೆ ಹಾನಿ ಮಾಡಲು ಬಯಸಲಿಲ್ಲ ಎಂಬುದು ಸ್ಪಷ್ಟವಾಗಿದೆ. ಅಲ್ಲದೇ 16 ರೆಬೆಲ್ ಶಾಸಕರಿಗೆ ಡೆಪ್ಯೂಟಿ ಸ್ಪೀಕರ್ ಸೋಮವಾರ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಿದ್ದಾರೆ. ರೆಬೆಲ್ ಶಾಸಕರ ವಿರುದ್ಧ ಕ್ರಮಕ್ಕೆ ಸಿಎಂ ಠಾಕ್ರೆ ಒತ್ತಾಯಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *