ಸರಗಳ್ಳತನಕ್ಕೆ ಯತ್ನಿಸಿ ಎಸ್ಕೇಪ್‌ ಆಗುವಾಗ ಬೈಕ್‌ ಅಪಘಾತ – ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳರು

Public TV
1 Min Read

ಚಿಕ್ಕಬಳ್ಳಾಪುರ: ಸರಗಳ್ಳತನಕ್ಕೆ ಯತ್ನಿಸಿ ಎಸ್ಕೇಪ್‌ ಆಗುವಾಗ ಬೈಕ್‌ ಅಪಘಾತವಾಗಿ ಕಳ್ಳರು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ನಡೆದಿದೆ.

ಮಹಿಳೆಯ ಸರ ಕಳವು ಮಾಡಲು ಕಳ್ಳರು ಯತ್ನಿಸಿದ್ದಾರೆ. ಈ ವೇಳೆ ಸಾರ್ವಜನಿಕರು ಅವರನ್ನು ಹಿಡಿಯಲು ಮುಂದಾಗಿದ್ದಾರೆ. ಆಗ ಒಬ್ಬ ಕಳ್ಳ ಬೈಕ್‌ನಲ್ಲಿ ಎಸ್ಕೇಪ್‌ ಆಗುವ ವೇಳೆ ಅಪಘಾತವಾಗಿದೆ. ತಕ್ಷಣ ಸಾರ್ವಜನಿಕರು ಹಿಡಿದಿದ್ದಾರೆ. ಇದನ್ನೂ ಓದಿ: ಉತ್ತರ ಕರ್ನಾಟಕ ರಾಜ್ಯ ನಿರ್ಮಾಣ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಬೊಮ್ಮಾಯಿ

ಕೋಡಿಹಳ್ಳಿ ಗ್ರಾಮದಲ್ಲಿ ಪಲ್ಸರ್ ವಾಹನದಲ್ಲಿ ಬಂದಿದ್ದ ಇಬ್ಬರು ಸರಗಳ್ಳರು ಚಿನ್ನದ ಸರ ಪಾಲಿಶ್ ಮಾಡಿಕೊಡುವ ನೆಪದಲ್ಲಿ ಸರಗಳ್ಳತನಕ್ಕೆ ಯತ್ನಿಸಿದ್ದಾರೆ‌. ಈ ವೇಳೆ ಒಬ್ಬನನ್ನು ಹಿಡಿದ ಗ್ರಾಮಸ್ಥರು ಗೂಸ ನೀಡಿದ್ದಾರೆ. ಇದನ್ನು ಕಂಡ ಮತ್ತೊಬ್ಬ ಕಳ್ಳ ಬೈಕ್ ಏರಿ ಸ್ಥಳದಿಂದ ಪರಾರಿಯಾಗಲು ಮುಂದಾಗಿದ್ದಾನೆ. ಈ ವೇಳೆ ಬೈಕ್‌ ಅಪಘಾತವಾಗಿದೆ.

ಕೂಡಲೇ ಗ್ರಾಮಸ್ಥರೆಲ್ಲರೂ ಸುತ್ತುವರಿದು ರಕ್ಷಣೆ ಮಾಡಿದ್ದು, ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಆದ್ರೆ ಅಷ್ಟರಲ್ಲೇ ಈತ ಸರಗಳ್ಳ ಅಂತ ಗೊತ್ತಾಗಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಸದ್ಯ ಇಬ್ಬರು ಸರಗಳ್ಳರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಬೈಕ್ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಂಧಿತರು ಬಿಹಾರ ಮೂಲದವರು ಎನ್ನಲಾಗಿದ್ದರೂ, ತೆಲುಗು ಭಾಷೆ ಮಾತನಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕೊಡಗಿನ ವಿವಿಧೆಡೆ ಕಂಪಿಸಿದ ಭೂಮಿ – ಬೆಚ್ಚಿಬಿದ್ದ ಜನ

Live Tv

Share This Article
Leave a Comment

Leave a Reply

Your email address will not be published. Required fields are marked *