ಬಿಜೆಪಿ ಸರ್ಕಾರ ಸೇನೆಗೆ ಗುತ್ತಿಗೆ ಆಧಾರದಲ್ಲಿ ಯೋಧರ ನೇಮಕ ಮಾಡ್ತಿದೆ: ಖಾದರ್

Public TV
1 Min Read

ಮಂಗಳೂರು: ಬಿಜೆಪಿ ಸರ್ಕಾರ ಸೇನೆಗೆ ಗುತ್ತಿಗೆ ಆಧಾರದಲ್ಲಿ ಯೋಧರನ್ನು ನೇಮಕ ಮಾಡುತ್ತಿದೆ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ವಾಗ್ದಾಳಿ ನಡೆಸಿದರು.

ARMY

ಅಗ್ನಿಪಥ್ ಹೊಸ ಸೇನಾ ನೇಮಕಾತಿ ಯೋಜನೆ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ದೇಶದ ಯುವಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಉದ್ಯೋಗ ಮತ್ತು ಶಿಕ್ಷಣದಿಂದ ವಂಚಿತ ಮಾಡುವುದೇ ಅಗ್ನಿಪಥ್ ಯೋಜನೆ. ಹುತಾತ್ಮ ಸೈನಿಕರನ್ನು ಮುಂದಿಟ್ಟುಕೊಂಡು ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಆದರೆ ಸೇನೆಯಲ್ಲಿ ದುಡಿಯುವವರಿಗೆ ಸವಲತ್ತು ಕೊಡುವ ಯೋಗ್ಯತೆ ಇಲ್ವಾ..?. ದೇಶದ ಗಡಿಯಲ್ಲಿ ಬಂದೂಕು ಫಿರಂಗಿ ಹಿಡಿದು ಶತ್ರು ದೇಶದ ಮೇಲೆ ಹೋರಾಟ ಮಾಡುವವರು ಸೈನಿಕರು. ಆದ್ರೆ ಸೇನೆಗೆ ಸೇರುವ ಯುವಕರ ಮೇಲೆಯೇ ಭಾರತ ಸರ್ಕಾರ ಪಿರಂಗಿ ಬಂದೂಕು ಬಿಡುತ್ತಿದೆ ಎಂದು ಕಿಡಿಕಾರಿದರು.

ಸೇನೆಯಲ್ಲಿರುವ ಸೈನಿಕರನ್ನು ಆರ್ಥಿಕ ಹೊರೆ ಎಂದು ಭಾವಿಸಿದ್ದು ಇದು ಇತಿಹಾಸದಲ್ಲಿ ಮೊದಲು. ರೈತರು ಮತ್ತು ಸೈನಿಕರನ್ನು ಈ ರೀತಿ ಕಂಡಿರುವುದಕ್ಕೆ ಬಿ.ಜೆ.ಪಿ ಭಾರೀ ಬೆಲೆಯನ್ನು ತೆರುತ್ತೆ. ಪೌರ ಕಾರ್ಮಿಕರನ್ನೆ ನಾವು ಗುತ್ತಿಗೆ ಆಧಾರದ ಬದಲು ಪರ್ಮನೆಂಟ್ ಮಾಡಿದ್ದೆವು. ಆದ್ರೆ ಬಿಜೆಪಿ ಸರ್ಕಾರ ಸೇನೆಗೆ ಗುತ್ತಿಗೆ ಆಧಾರದಲ್ಲಿ ಯೋಧರ ನೇಮಕ ಮಾಡುತ್ತಿದೆ ಎಂದು ಗುಡುಗಿದರು. ಇದನ್ನೂ ಓದಿ: ಬಾಲ್ಯ ಸ್ನೇಹಿತ ಅಬ್ಬಾಸ್ ನೆನಪಿಸಿಕೊಂಡ ಮೋದಿ – ನೆಟ್ಟಿಗರಿಗೆ ಕುತೂಹಲ

bjP

ಬಿಜೆಪಿ ಅಧಿಕಾರಕ್ಕೆ ಬರುವಾಗ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಎಂದು ಹೇಳುತ್ತೆ. ಇವತ್ತು ಇದ್ದ ಕೆಲಸವೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಹೋರಾಟದಂತೆ ಇದು ಇನ್ನೊಂದು ರೀತಿಯ ಹೋರಾಟಕ್ಕೆ ಕಾರಣವಾಗುತ್ತೆ. ಸೇನೆಯ ಮುಖ್ಯಸ್ಥರ ಬಳಿಯೆ ಯೋಜನೆಯ ಸಾಧಕ ಭಾದಕ ಚರ್ಚೆ ಮಾಡಿಲ್ಲ. ಖಾಸಗಿ ಸಂಸ್ಥೆಯ ಮೂಲಕ ನೇಮಕಾತಿ ನಡೆಯುತ್ತೆ. ದೇಶದ ಸೇನೆಯನ್ನು ಖಾಸಗಿಕರಣ ಮಾಡಲಾಗುತ್ತಿದೆ ಎಂದು ಹೇಳಿದರು.

Live Tv

Share This Article
Leave a Comment

Leave a Reply

Your email address will not be published. Required fields are marked *