ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ಗಿಲ್ಲ ರಿಲೀಫ್ – ಜಾಮೀನು ಅರ್ಜಿ ವಜಾ

Public TV
1 Min Read

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ಗೆ ಜಾಮೀನು ನೀಡಲು ಸಿಬಿಐ ವಿಶೇಷ ನ್ಯಾಯಾಲಯ ನಿರಾಕರಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಗೀತಾಂಜಲಿ ಗೋಯೆಲ್ ಜಾಮೀನು ಅರ್ಜಿ ವಜಾಗೊಳಿಸಿದ್ದಾರೆ. ಇದನ್ನೂ ಓದಿ: ದಾವೂದ್ ಇಬ್ರಾಹಿಂ ಸಹೋದರನ ಕಡೆಯಿಂದ ಸಾಧ್ವಿ ಪ್ರಜ್ಞಾ ಠಾಕೂರ್‌ಗೆ ಕೊಲೆ ಬೆದರಿಕೆ 

ಮೇ 30 ರಂದು ಇಡಿಯಿಂದ ಬಂಧನಕ್ಕೊಳಗಾಗಿದ್ದ ಸತ್ಯೇಂದ್ರ ಜೈನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗೀತಾಂಜಲಿ ಗೋಯೆಲ್ ಆದೇಶ ಕಾಯ್ದಿರಿಸಿದ್ದರು.

ಭ್ರಷ್ಟಾಚಾರ ತಡೆ ಕಾಯ್ದೆಯಡಿ 2017ರ ಆಗಸ್ಟ್‌ನಲ್ಲಿ ಸಿಬಿಐ ದಾಖಲಿಸಿದ್ದ ಪ್ರಕರಣದ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು (ED) ಇಸಿಐಆರ್ ದಾಖಲಿಸಿಕೊಂಡು, ವಿಚಾರಣೆಗೆ ಸಮನ್ಸ್ ನೀಡಿತ್ತು. ಮೇ 30 ರಂದು ಜೈನ್ ಅವರನ್ನು ವಶಕ್ಕೆ ಪಡೆದುಕೊಂಡಿತ್ತು. ಜೂನ್ 13ರ ಬಳಿಕ ಅವರು ನ್ಯಾಯಂಗ ಬಂಧನದಲ್ಲಿದ್ದಾರೆ. ಇದನ್ನೂ ಓದಿ: ಗುರುದ್ವಾರದ ಮೇಲೆ ಭಯೋತ್ಪಾದಕರಿಂದ ಗುಂಡಿನ ದಾಳಿ – ಭದ್ರತಾ ಸಿಬ್ಬಂದಿ ಸಾವು 

ವಿಚಾರಣೆ ವೇಳೆ ಸತ್ಯೇಂದ್ರ ಜೈನ್, ಕನಿಷ್ಠ ನಾಲ್ಕು ಕಂಪನಿಗಳ ಮೂಲಕ ಹಣ ಲಪಟಾಯಿಸಿದ್ದಾರೆ. ಅಕ್ರಮ ಹಣ ವರ್ಗಾವಣೆಯಲ್ಲಿ ಸಚಿವರು ಭಾಗಿಯಾಗಿದ್ದಾರೆ. ಅವರ ಬಂಧನ ಬಳಿಕವೂ ಹಲವು ದಾಳಿ ನಡೆಸಿದ್ದು ಆಪ್ತರ ಮನೆಯಲ್ಲಿ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿದ್ದು ಇವುಗಳ ತನಿಖೆ ಮಾಡಬೇಕಿದೆ. ಆದರೆ ಆರೋಪಿ ತನಿಖೆಗೆ ಸಹಕಾರ ನೀಡುತ್ತಿಲ್ಲ, ಪ್ರಭಾವಿಯಾಗಿರುವ ಹಿನ್ನಲೆ ಸಾಕ್ಷ್ಯ ನಾಶ ಸಾಧ್ಯತೆಗಳಿವೆ ಎಂದು ಇಡಿ ವಾದಿಸಿತ್ತು.

ನಿದ್ರೆಯಲ್ಲಿ ಉಸಿರುಗಟ್ಟುವ ಕಾಯಿಲೆಯಿದೆ: ಸತ್ಯೇಂದ್ರ ಜೈನ್ ಪರ ವಾದ ಮಂಡಿಸಿದ್ದ ವಕೀಲ ಹರಿಹರನ್, ಈವರೆಗೂ ಜೈನ್ ತನಿಖೆಗೆ ಸಹಕರಿಸಿದ್ದಾರೆ, ಮುಂದೆಯೂ ಸಹಕಾರ ನೀಡಲಿದ್ದಾರೆ. ಈಗಾಗಲೇ ಎಲ್ಲ ಹೇಳಿಕೆಯನ್ನು ನೀಡಿರುವ ಹಿನ್ನೆಲೆ ಸಾಕ್ಷ್ಯದ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಜೈನ್‌ಗೆ ನಿದ್ದೆಯಲ್ಲಿ ಉಸಿರುಗಟ್ಟುವ ಸಮಸ್ಯೆ ಇದ್ದು ಆರೋಗ್ಯ ಕಾರಣಗಳಿಂದ ಜಾಮೀನು ನೀಡಬೇಕು ಒಂದು ಮನವಿ ಮಾಡಿದ್ದರು.

Live Tv

Share This Article
Leave a Comment

Leave a Reply

Your email address will not be published. Required fields are marked *