ವಿ.ಹರಿಕೃಷ್ಣ ನಂತರ ಮತ್ತೋರ್ವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಡೈರೆಕ್ಷನ್

Public TV
1 Min Read

ಜಮಾನ ಸಿನಿಮಾದ ಮೂಲಕ ನಿರ್ದಶಕರಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ. ಅವರು ಇದೀಗ ತಮ್ಮ ಎರಡನೇ ಸಿನಿಮಾದ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಈ ಬೆನ್ನಲ್ಲೆ ಮತ್ತೋರ್ವ ಸಂಗೀತ ನಿರ್ದೇಶಕರು ಡೈರೆಕ್ಟರ್ ಆಗಿ ಬದಲಾಗುತ್ತಿದ್ದಾರೆ. ಅಂದುಕೊಂಡಂತೆ ಆದರೆ, ಇದೇ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಮೊದಲಲ್ಲಿ ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಸಲ್ಮಾನ್ ಖಾನ್ ಸಿನಿಮಾಗೆ ಹತ್ತು ನಾಯಕಿಯರು : ಕನ್ನಡದ ಹುಡುಗಿಗೂ ಸಿಗತ್ತಾ ಅವಕಾಶ

ವಿ.ಹರಿಕೃಷ್ಣ ಸಂಗೀತ ನಿರ್ದೇಶನದಿಂದ ಸಿನಿಮಾ ನಿರ್ದೇಶಕನಾಗಿ ಬದಲಾಗುತ್ತಿದ್ದಂತೆ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುವಲ್ಲಿ ಸಖತ್ ಬ್ಯುಸಿಯಾಗಿದ್ದರು. ಈ ನಡುವೆಯೂ ಅವರು ಸುಂದರವಾದ ಕಥೆಯೊಂದನ್ನು ಬರೆದಿದ್ದಾರಂತೆ. ತಾವೇ ಬರೆದ ಕಥೆಯನ್ನೇ ಸಿನಿಮಾ ಮಾಡುವುದಾಗಿ ಆಪ್ತರೊಂದಿಗೆ ತಿಳಿಸಿದ್ದಾರೆ. ಅಲ್ಲದೇ ನಿರ್ಮಾಪಕನನ್ನೂ ಅವರು ಹುಡುಕಿಕೊಂಡಿದ್ದಾರೆ ಎನ್ನುವ ಸುದ್ದಿಯಿದೆ. ಅಂದುಕೊಂಡಂತೆ ನಡೆದರೆ, ಈ ಸಿನಿಮಾವನ್ನು ರಮೇಶ್ ರೆಡ್ಡಿ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?

ಶಿವರಾಜ್ ಕುಮಾರ್ ಅವರಿಗಾಗಿ ಈ ಕಥೆಯನ್ನು ಅರ್ಜುನ್ ಜನ್ಯ ಬರೆದಿದ್ದು, ಶಿವಣ್ಣನಿಗೆ ಕಥೆಯನ್ನೂ ಹೇಳಿದ್ದಾರಂತೆ. ಇತ್ತೀಚೆಗೆ ಶಿವರಾಜ್ ಕುಮಾರ್ ನಟನೆಯ ಬಹುತೇಕ ಚಿತ್ರಗಳಿಗೆ ಅರ್ಜುನ್ ಜನ್ಯ ಮ್ಯೂಸಿಕ್ ಮಾಡಿದ್ದಾರೆ. ಹಿಟ್ ಹಾಡುಗಳನ್ನೂ ಕೊಟ್ಟಿದ್ದಾರೆ. ಅಲ್ಲದೇ, ಒಂದಷ್ಟು ಸಿನಿಮಾಗಳಿಗೆ ಅರ್ಜುನ್ ಬಂಡವಾಳವನ್ನೂ ಹೂಡಿದ್ದಾರೆ. ಅನೇಕ ವಿಭಾಗಗಳಲ್ಲಿ ಪರಿಣಿತಿ ಪಡೆದಿರುವುದರಿಂದ ನಿರ್ದೇಶಕರಾಗಿ ಇಲ್ಲಿಯೂ ಹೆಸರು ಮಾಡುವ ಕನಸು ಇವರದ್ದು.

Live Tv

Share This Article
Leave a Comment

Leave a Reply

Your email address will not be published. Required fields are marked *