ಮೋದಿ ಯೋಗಕ್ಕೆ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ- ಇಲ್ಲಿದೆ ಕಾರ್ಯಕ್ರಮದ ವಿವರ

Public TV
2 Min Read

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಿದ್ಧತೆಗಳು ಬಿರುಸು ಪಡೆದು ಕೊಂಡಿವೆ. ಮೈಸೂರು ಅರಮನೆ ಆವರಣದಲ್ಲಿ ನಡೆಯುವ ಈ ಕಾರ್ಯಕ್ರಮದ ಮೊದಲ ಹಂತದ ರೂಪು ರೇಷೆಗಳು ಸಿದ್ಧವಾಗಿವೆ. ಈ ಮಧ್ಯೆ ಕಾರ್ಯದಲ್ಲಿ ಪಾಲ್ಗೊಳ್ಳುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.

ಹೌದು. ಮೈಸೂರು ಅರಮನೆ ಮುಂಭಾಗ ಜೂನ್ 21 ರಂದು ಪ್ರಧಾನ ಮಂತ್ರಿಗಳು ಯೋಗ ಮಾಡಲಿದ್ದಾರೆ. ಪ್ರಧಾನಿಗಳ ಜೊತೆ 15 ಸಾವಿರ ಜನ ಯೋಗ ಮಾಡಲಿದ್ದು ಇದಕ್ಕಾಗಿ ಸಿದ್ಧತೆಗಳು ನಡೆದಿವೆ. ಅಂದು ಬೆಳಗ್ಗೆ 6.30 ಕ್ಕೆ ಯೋಗ ಆರಂಭವಾಗಲಿದೆ. ಒಟ್ಟು ಮುಕ್ಕಾಲು ಗಂಟೆ 21 ಯೋಗದ ಆಸನಗಳನ್ನು ಮಾಡಲಾಗುತ್ತದೆ.

ಪ್ರಧಾನಿಗಳು ಯೋಗ ಆರಂಭಿಸುವ ಒಂದು ಗಂಟೆ ಮುನ್ನ ಅಂದರೆ ಬೆಳಗ್ಗೆ 5.30 ರ ಒಳಗೆ ನೋಂದಣಿ ಮಾಡಿ ಕೊಂಡಿರುವ ಯೋಗಪಟುಗಳು ಅರಮನೆ ಒಳಗೆ ಬರಬೇಕು. ಸರಿಯಾಗಿ 5.30 ಕ್ಕೆ ಅರಮನೆಯ ಎಲ್ಲಾ ದ್ವಾರಗಳು ಬಂದ್ ಆಗುತ್ತವೆ. ನೋಂದಣಿಯಾದ ಪ್ರತಿಯೊಬ್ಬ ಯೋಗಪಟುವಿಗೂ ಯೋಗ ಮ್ಯಾಟ್, ಶೂ ಇಡುವ ಬಾಕ್ಸ್, ಮೊಬೈಲ್ ಇಟ್ಟುಕೊಳ್ಳಲು ಪ್ರತ್ಯೇಕ ಕವರ್ ಅನ್ನು ಕೇಂದ್ರದ ಆಯುಷ್ ಇಲಾಖೆಯೆ ನೀಡಲಿದೆ. ಅಲ್ಲದೆ ಅರಮನೆ ಆವರಣದಲ್ಲಿ ಯೋಗ ಮಾಡಲು ನೋಂದಣಿ ಮಾಡುವವರು ಕೊರೊನಾ ಎರಡನೇ ಡೋಸ್ ಕಡ್ಡಾಯವಾಗಿ ಪಡೆದಿರಬೇಕು. ಯೋಗ ದಿನಕ್ಕೂ 72 ಗಂಟೆ ಮುಂಚಿನ ಕರೋನಾ ನೆಗಟಿವ್ ರೀಪೋರ್ಟ್ ಕಡ್ಡಾಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಇದನ್ನೂ ಓದಿ: ವಿಶ್ವವೇ ಮುಸ್ಲಿಮರಿಗೆ ಕ್ಷಮೆ ಕೇಳ್ಬೇಕು – 500 ವೆಬ್‌ಸೈಟ್ಸ್ ಹ್ಯಾಕ್, ಪ್ರವಾದಿ ಅವಹೇಳನಕ್ಕಿದೆಯಾ ಲಿಂಕ್?

ಒಟ್ಟು 15 ಸಾವಿರ ಜನರಲ್ಲಿ 12 ಸಾವಿರ ಸ್ಥಳೀಯರು, 1 ಸಾವಿರ ವಿವಿಧ ರಾಜ್ಯಗಳ ಪ್ರತಿನಿಧಿಗಳು, ಒಂದು ಸಾವಿರ ಆಯುಷ್ ಇಲಾಖೆ ಹಾಗೂ ಕೇಂದ್ರದ ವಿವಿಧ ಇಲಾಖೆ ಅಧಿಕಾರಿಗಳು, ಒಂದು ಸಾವಿರ ಕೇಂದ್ರ ವೈದ್ಯಕೀಯ ವಿಭಾಗದ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. 12 ಸಾವಿರ ಸ್ಥಳೀಯರ ಆಯ್ಕೆ ಪ್ರಕ್ರಿಯೆ ಕೂಡ ಮುಗಿದಿದೆ. ಇದರಲ್ಲಿ ಪೌರಕಾರ್ಮಿಕರು, ಆಟೋ ಚಾಲಕರು, ತೃತೀಯ ಲಿಂಗಿಗಳು, ಯೋಗ ಒಕ್ಕೂಟಗಳಲ್ಲಿನ ಯೋಗ ಪಟುಗಳು, ರಾಜ್ಯ ಆರೋಗ್ಯ ಇಲಾಖೆ, ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ, ಹೋಟೆಲ್ ಸಿಬ್ಬಂದಿ, ಪೊಲೀಸ್ ಇಲಾಖೆ ಹೀಗೆ ಎಲ್ಲಾ ಕಾರ್ಮಿಕ ವರ್ಗ, ಎಲ್ಲಾ ಸ್ಥರದ ಜನರನ್ನು ಸೇರಿಸಿ ಕೊಳ್ಳಲಾಗಿದೆ. ಅವರ ಕೋವಿಡ್ ಲಸಿಕಾ ವರದಿಗಳನ್ನು ಪಡೆಯಲಾಗಿದೆ. ಅವರ ಪಾಸ್ ಮುದ್ರಣ ಕಾರ್ಯ ಪ್ರಗತಿಯಲ್ಲಿದೆ.

ಅರಮನೆ ಒಳಗೆ ಒಟ್ಟು 17 ಬ್ಲಾಕ್ ಮಾಡಲಾಗುತ್ತದೆ. ಪ್ರತಿ ಬ್ಲಾಕ್ ನಲ್ಲೂ 100 ಜನ ಯೋಗ ಮಾಡಲಿದ್ದಾರೆ. ಪಾಸ್ ಗಳಲ್ಲೆ ಯಾವ ಬ್ಲಾಕ್ ಗೆ ಹೋಗಬೇಕು ಎಂಬ ಸೂಚನೆ ಇರಲಿದೆ. ಒಟ್ಟು 120 ಮೊಬೈಲ್ ಶೌಚಾಲಯದ ವ್ಯವಸ್ಥೆ ಆಗಲಿದೆ. ಇಡೀ ಕಾರ್ಯಕ್ರಮದ ನಿರ್ವಹಣೆಯನ್ನು ಕೇಂದ್ರದ ಆಯುಷ್ ಇಲಾಖೆಯೆ ಮಾಡಲಿದೆ. ಆಹ್ವಾನ ಪತ್ರಿಕೆ ಮತ್ತು ವೇದಿಕೆ ನಿರ್ಮಾಣದ ಜವಾಬ್ದಾರಿ ಮಾತ್ರ ರಾಜ್ಯ ಸರಕಾರ ನಿರ್ವಹಿಸಲಿದೆ. ಇದನ್ನೂ ಓದಿ: ಕೋವಿಡ್‌ನಿಂದ ಹಳೆಯದೆಲ್ಲಾ ಮರೆತುಹೋಗಿದೆ ಎಂದ ದಿಲ್ಲಿ ಆರೋಗ್ಯ ಸಚಿವ – ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್‌

ಕೇಂದ್ರ ಸರಕಾರ ಕ್ವಾಲಿಟಿ ಮುಖ್ಯ ಹೊರತು ಕ್ವಾಂಟಿಟಿ ಮುಖ್ಯವಲ್ಲ ಎಂದು ಸ್ಪಷ್ಟವಾಗಿ ಜಿಲ್ಲಾಡಳಿತಕ್ಕೆ ಸಂದೇಶ ರವಾನಿಸಿದೆ. ಹೀಗಾಗಿ ಬೇಕಾಬಿಟ್ಟಿ ಜನರನ್ನು ಸೇರಿಸದೆ ಯೋಗವನ್ನು ಕ್ರಮ ಬದ್ದವಾಗಿ ಮಾಡುವವರನ್ನೆ ಗುರುತಿಸಿ ಯೋಗ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *