ಚಾಮರಾಜನಗರ: ಮನೆಯಲ್ಲಿ ಚಿನ್ನದಂತಹ ಹೆಂಡ್ತಿಯಿದ್ರೂ ಕೆಲ ಗಂಡಸರು ಬೇರೆ ಮನೆಯ ಹೆಂಗಸರ ಸಹವಾಸ ಮಾಡಿ ಜೀವನ ಹಾಳು ಮಾಡಿಕೊಂಡ ಅನೇಕ ನಿದರ್ಶನ ನಮ್ಮ ಕಣ್ಣ ಮುಂದಿವೆ. ಇಂತಹ ಘಟನೆಯ ಸಾಲಿಗೆ ಕೊಳ್ಳೆಗಾಲದಲ್ಲಿ ನಡೆದ ಕೊಲೆ ಪ್ರಕರಣ ಸಹ ಸೇರ್ಪಡೆಯಾಗಿದೆ.
ಕಳೆದ ಮಾರ್ಚ್ 31 ರಂದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಬಳಿಯ ದರ್ಗಾದ ಬಳಿ ಅಪರಿಚಿತ ವ್ಯಕ್ತಿಯ ಕೊಲೆಯಾಗಿತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರ ತಂಡ ನಿಂತಿದ್ದು ರಾಮನಗರದಲ್ಲಿ. ಹೌದು, ಅಲ್ಲಿ ಕೊಲೆಯಾದ ವ್ಯಕ್ತಿ ಸೈಯದ್ ಅರೀಫ್ ಪಾಷಾ ಮೂಲತಃ ರಾಮನಗರದ ನಿವಾಸಿ. ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈತ ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡು ಇದ್ದಿದ್ರೆ ಇವತ್ತು ಕೊಲೆಯಾಗುವ ಪರಿಸ್ಥಿತಿ ಬರುತ್ತ ಇರಲಿಲ್ಲ. ಇದನ್ನೂ ಓದಿ: ವೀಸಾ ಇಲ್ಲದೇ ಇಂಡೋ-ನೇಪಾಳ ಗಡಿಗೆ ಬಂದಿದ್ದ ಇಬ್ಬರು ಚೀನಿ ಪ್ರಜೆಗಳು ಅರೆಸ್ಟ್
ಈತ ಆಟೋ ಚಾಲನೆ ಮಾಡಪ್ಪ ಅಂದ್ರೆ ಬೇರೆಯವರ ಪತ್ನಿ ಜೊತೆ ಆಟ ಆಡ್ತಿದ್ದ. ಅದೇ ರಾಮನಗರದ ರೇಷ್ಮೆಗೂಡು ವ್ಯಾಪಾರಿ ಸೈಯದ್ ಸಿಕಂದರ್ ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ವಿಚಾರ ತಿಳಿದ ಸಿಕಂದರ್ ಇಬ್ಬರಿಗೂ ಬುದ್ಧಿವಾದ ಹೇಳಿದ್ದ. ಆದ್ರೆ ಸಿಕಂದರ್ ಮಾತು ಕೇಳದ ಇಬ್ಬರೂ ತಮ್ಮ ಆಟ ಮುಂದುವರೆಸಿದ್ರು. ಇದರಿಂದ ರೊಚ್ಚಿಗೆದ್ದ ಸಿಕಂದರ್ ತನ್ನ ಸ್ನೇಹಿತರ ಜೊತೆ ಸೇರಿ ಸೈಯದ್ ಅರೀಫ್ ಪಾಷಾಗೆ ಮಸಣದ ಹಾದಿ ತೋರಿದ್ದಾನೆ.
ಕೊಲೆಗೆ ಪ್ಲಾನ್
ಸಿಕಂದರ್ ಮಾತು ಕೇಳದ ಅರೀಪ್ ಪಾಷಾನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ. ತನ್ನ ಸ್ನೇಹಿತರ ಜೊತೆ ಅವನನ್ನು ಶಿವನಸಮುದ್ರದ ದರ್ಗಾ ದರ್ಶನ ಮಾಡಿಕೊಂಡು ಬರೋಣಾ ಎಂದು ಕರೆದುಕೊಂಡು ಬಂದಿದ್ದಾನೆ. ಸಿಕಂದರ್ ಮಾತು ಕೇಳಿ ಬಂದ ಸೈಯದ್ ಅರೀಪ್ ಪಾಷಾನನ್ನು ಸಿಕಂದರ್ ಮತ್ತು ಆತನ ಸ್ನೇಹಿತರು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ನಂತರ ಏನು ಗೊತ್ತಿಲ್ಲದಂತೆ ಅಲ್ಲಿಂದ ಜಾಗ ಖಾಲಿ ಮಾಡಿದ್ರು. ಇದನ್ನೂ ಓದಿ:  ಚರಂಡಿ ವಿಷಯಕ್ಕೆ ಜಗಳ – ಯುವಕನ ಕೊಲೆ, 6 ಜನರ ಸ್ಥಿತಿ ಗಂಭೀರ 
ಇತ್ತ ಅಪರಿಚಿತ ವ್ಯಕ್ತಿ ಕೊಲೆ ಪ್ರಕರಣ ದಾಖಲಿಸಿಕೊಂಡ ಕೊಳ್ಳೇಗಾಲ ಪೊಲೀಸರು ತನಿಖೆ ಕೈಗೊಂಡಾಗ ಪ್ರಕರಣ ಬಯಲಿಗೆ ಬಂದಿದೆ. ಸದ್ಯ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಸೈಯದ್ ಸಿಕಂದರ್ ಈತನ ಸ್ನೇಹಿತರಾದ ಮುಸಾವೀರ್, ಶೌಕತ್ ಅಲಿ, ಹಬೀಬ್ ವುಲ್ಲಾ, ಸೈಯದ್ ಸಲೀಂ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

 
			

 
		 
		

 
                                
                              
		