ಕುವೆಂಪು ಮುಸ್ಲಿಂ ವಿರೋಧಿ ಆಗಿದ್ರು: ಸಾಹಿತಿ ಬೋಳುವಾರು ಮಹಮದ್ ವಿವಾದಾತ್ಮಕ ಹೇಳಿಕೆ

Public TV
1 Min Read

ಬೆಂಗಳೂರು: ಕುವೆಂಪು ಮುಸ್ಲಿಂ ವಿರೋಧಿ ಆಗಿದ್ರು. ಇದನ್ನು ನಾನು ಕೇಳಬೇಕು ಅಂತ ಅವರ ಮನೆಗೆ ಹೋಗಿದ್ದೆ. ಅವರ ವಯಸ್ಸು ನೋಡಿ ಸುಮ್ಮನೆ ಆದೆ ಎಂದು ಸಾಹಿತಿ ಬೋಳುವಾರು ಮಹಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕ್ಲಬ್ ಹೌಸ್‍ನಲ್ಲಿ ಚರ್ಚೆ ಮಾಡುವಾಗ ಕುವೆಂಪು ಬಗ್ಗೆ ಅವಹೇಳನಕಾರಿ ಮಾತು ಆಡಿರುವ ಬೋಳುವಾರು ಮಹಮದ್, ಕುವೆಂಪು ಅವರು ಮುಸ್ಲಿಂ ವಿರೋಧಿ ಆಗಿದ್ರು. ಇದನ್ನು ನಾನು ಕೇಳಬೇಕು ಅಂತ ಅವರ ಮನೆಗೆ ಹೋಗಿದ್ದೆ. ಅವರ ವಯಸ್ಸು ನೋಡಿ ಸುಮ್ಮನೆ ಆದೆ. ನಾನು ಅಂದೆ ಕುವೆಂಪು ಅವರಿಗಿಂತ ಒಳ್ಳೆಯ ಕಾದಂಬರಿ ಬರೆಯಬೇಕು ಎಂದು ನಿರ್ಧಾರ ಮಾಡಿದೆ. ಅದರಂತೆ ನಾನು ಕುವೆಂಪುಗಿಂತ ದೊಡ್ಡ ಕಾದಂಬರಿ ಬರೆದೆ. ಕುವೆಂಪುರದ್ದು 600 ಪುಟದ ಕಾದಂಬರಿ. ನಾನು 1,100 ಪುಟದ ಕಾದಂಬರಿ ಬರೆದೆ. ಕುವೆಂಪು ಅಂತಹ ಮಾನವರ ಮನಸ್ಸಿನಲ್ಲೂ ಮುಸ್ಲಿಂ ಮೇಲೆ ಈ ಕಲ್ಪನೆ ಇತ್ತು. ಮುಸ್ಲಿಮರ ವಿಚಾರದಲ್ಲಿ ಕುವೆಂಪು ಇಂತಹ ತಪ್ಪು ಮಾಡಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಬೋಳುವಾರು ಮಹಮದ್ ಕುವೆಂಪು ವಿಷಯ ಪ್ರಸ್ತಾಪ ಮಾಡಿದ್ದಾರೆ. ಈ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಎಡಪಂಥೀಯ ಸಾಹಿತಿಗಳು Vs ಸರ್ಕಾರ: ಬೇಡಿಕೆ ಏನು?

TEXTBOOK

ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಗೊಂದಲದ ಮಧ್ಯೆ ಮತ್ತೊಂದು ವಿವಾದ ಎದ್ದಿದೆ. ಅಲ್ಲದೇ ಬೋಳುವಾರು ಮಹಮದ್ ಪಠ್ಯ ವಾಪಸ್ ಅಭಿಯಾನದಲ್ಲಿ ಭಾಗಿಯಾಗಿರೋ ಸಾಹಿತಿಯಾಗಿದ್ದಾರೆ. ಇದನ್ನೂ ಓದಿ: ಬಸವಣ್ಣನ ಪಠ್ಯವನ್ನೇ ತಿರುಚಲಾಗಿದೆ: ಲಿಂಗಾಯತ ಸ್ವಾಮೀಜಿಗಳು ಅಸಮಾಧಾನ

Share This Article
Leave a Comment

Leave a Reply

Your email address will not be published. Required fields are marked *