ಮೇನಲ್ಲೂ ಕೆಆರ್‌ಎಸ್‍ನಲ್ಲಿದೆ 100 ಅಡಿ ನೀರು – ಕೇರಳದಲ್ಲಿ ಭಾರೀ ಮಳೆ

Public TV
1 Min Read

ಬೆಂಗಳೂರು/ ತಿರುವನಂತಪುರಂ : ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಜಲಾಶಯದಲ್ಲಿ ಈಗ 100 ಅಡಿ ನೀರಿದೆ. ಮೇ ತಿಂಗಳಲ್ಲಿ ಕೆಆರ್‌ಎಸ್ 100 ಅಡಿ ತಲುಪಿರುವುದು 14 ವರ್ಷಗಳಲ್ಲೇ ಇದೇ ಮೊದಲು.

2017ರ ಮೇ ತಿಂಗಳಲ್ಲಿ ಕೆಆರ್‌ಎಸ್‍ನಲ್ಲಿ ನೀರಿನ ಮಟ್ಟ 70.03 ಅಡಿ ಇತ್ತು. ಅದೇ ರೀತಿ 2018ರಲ್ಲಿ 70.13 ಅಡಿ, 2019ರಲ್ಲಿ 82.05 ಅಡಿ, 2020ರಲ್ಲಿ 96.28 ಅಡಿ, 2021ರಲ್ಲಿ 88.50 ಅಡಿ ನೀರಿತ್ತು. ಸದ್ಯ ನೀರಿನ ಮಟ್ಟ 100.2 ಅಡಿ ಇದೆ. ಒಳಹರಿವಿನ ಪ್ರಮಾಣ 1171 ಕ್ಯೂಸೆಕ್ ಇದ್ದು, ಹೊರಹರಿವಿನ ಪ್ರಮಾಣ 1061 ಕ್ಯೂಸೆಕ್ ಇದೆ. ಡ್ಯಾಂನಲ್ಲೀಗ 22.825 ಟಿಎಂಸಿ ನೀರು ಇದೆ.  ಇದನ್ನೂ ಓದಿ: ಭೂಮಿಯಿಂದ ಭಾರೀ ಶಬ್ಧ – ಬೆಚ್ಚಿಬಿದ್ದ ಚಿಕ್ಕಬಳ್ಳಾಪುರ ಜನ

ಭಾರೀ ಮಳೆಗೆ ಕೋಲಾರದ ಬಂಗಾರಪೇಟೆಯಲ್ಲಿ ಹಲವು ಕೆರೆಗಳು ಕೋಡಿ ಹರಿದಿವೆ. ರೈತರು ಖುಷಿಯಾಗಿದ್ದಾರೆ. ಈ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ನಿರೀಕ್ಷೆಗೂ ಮೀರಿ ಮಳೆ ಆಗ್ತಿದೆ. ಬಂಗಾರಪೇಟೆಯ ದೊಡ್ಡ ಕೆರೆ ಕೂಡ ಭರ್ತಿ ಆಗಿದೆ.

ಕೇರಳದಲ್ಲಿ ಭಾರೀ ಮಳೆ: ಅಸಾನಿ ಚಂಡಮಾರುತ ದುರ್ಬಲವಾಗಿ, ಆಂಧ್ರದಲ್ಲಿ ಮೇಲ್ಮೇ ಸುಳಿಗಾಳಿ ಶುರುವಾಗಿದೆ. ಇದರ ಜೊತೆಗೆ ಅರಬ್ಬಿ ಸಮುದ್ರದಲ್ಲಿ ಮುಂಗಾರು ಮಾರುತ ಪ್ರಬಲವಾಗಿದೆ. ಪರಿಣಾಮ ಮುಂಗಾರಿಗೂ ಮೊದಲೇ ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆ.

ಎರ್ನಾಕುಲಂ, ಇಡುಕ್ಕಿ, ತ್ರಿಶ್ಯೂರು, ಕೊಯಿಕ್ಕೋಡ್, ಕಣ್ಣೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇತ್ತ ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ಆಗಲಿದೆ. ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಬೆಂಗಳೂರಲ್ಲಿ ಕೂಲ್ ಕೂಲ್ ವಾತಾವರಣ ಇದ್ದು, ಇನ್ನೂ ಒಂದು ವಾರ ಇದೇ ರೀತಿಯ ವಾತಾವರಣ ಇರಲಿದೆ.

Share This Article
Leave a Comment

Leave a Reply

Your email address will not be published. Required fields are marked *