ದಲಿತ ಸಿಎಂ ಆಗ್ತಾರೆ ಅಂತ ಕನಸು ಕಾಣೋನು ಹುಚ್ಚ: ಎ.ನಾರಾಯಣಸ್ವಾಮಿ

Public TV
1 Min Read

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ ಆಗುತ್ತಾರೆ ಅಂತ ಕನಸು ಕಾಣೋನು ಹುಚ್ಚ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ.

ಆನೇಕಲ್‍ನ ಸಾಯಿರಾಮ್ ಕಾಲೇಜಿನಲ್ಲಿ ನಡೆದ ಪದವಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗುತ್ತಾರೆ ಅಂತ ಕನಸು ಕಾಣೋನು ಹುಚ್ಚ. ದಲಿತ ಸಿಎಂ ಎನ್ನುವ ಚರ್ಚೆ ಕೇವಲ ರಾಜಕೀಯ ತೆವಲು ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ದಕ್ಷ, ಜನಪರ ಆಡಳಿತವನ್ನು ಸರ್ಕಾರ ಮಾಡ್ತಿದೆ, ಆಡಳಿತ ವಿರೋಧಿಗಳಿಗೆ ಅದೇ ಉತ್ತರ: ಬೊಮ್ಮಾಯಿ

ಈವರೆಗೆ ರಾಜ್ಯ ರಾಜಕಾರಣದಲ್ಲಿ ದಲಿತ ಸಿಎಂ ಯಾಕೆ ಆಗಲ್ಲ ಎಂಬುವುದಕ್ಕೆ ಈ ದೇಶದಲ್ಲಿ ಬಹಳಷ್ಟು ಉದಾಹರಣೆಗಳಿವೆ. ಸಂವಿಧಾನ ಬರೆದ ಡಾ.ಬಿ.ಆರ್. ಅಂಬೇಡ್ಕರ್‌ರವರಿಗೆ ಐದು ವರ್ಷಗಳ ಕಾಲ ಮಂತ್ರಿಯಾಗಿ ಮುಂದುವರೆಯುವುದಕ್ಕೂ ಸಹ ಬಿಡಲಿಲ್ಲ. ಅಂಬೇಡ್ಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕೂಡ ನೀವು ಐದು ವರ್ಷ ಮಂತ್ರಿಯಾಗಿ ಮುಂದುವರಿಯಬೇಕು ಎಂದು ಅವರ ಮನೆಗೆ ಹೋಗಿ ಯಾರು ಒಂದು ಕಪ್ ಕಾಫಿಯೂ ಸಹ ಕುಡಿದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಆಂಜನೇಯಸ್ವಾಮಿ ಕನ್ನಡ ನಾಡಿನ ಪುತ್ರ: ಬೊಮ್ಮಾಯಿ

ಈ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಒಂಭತ್ತು ಬಾರಿ ಶಾಸಕರಾಗಿ, ಮಂತ್ರಿಯಾದರೂ ಇನ್ನೇನು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಅವರನ್ನು ಬೇಕು ಅಂತಲೇ ಮಾಡಲಿಲ್ಲ. ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಅಂತಲೇ ಅವರನ್ನು ಸೋಲಿಸಿದರು. ಕರ್ನಾಟಕದ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ ಆಗುತ್ತಾರೆ ಅಂತ ಕನಸು ಕಾಣೋನು ಹುಚ್ಚರು. ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಸರಳತೆಗೆ ಹೆಸರಾಗಿರುವ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *