ನೀರೆಂದರೆ ಈಕೆಗೆ ಅಲರ್ಜಿ, ಮೈಗೆ ತಾಗಿದರೆ ಸಾಕು ಆ್ಯಸಿಡ್ ಬಿದ್ದಂತಾಗುತ್ತಂತೆ!

Public TV
1 Min Read

ವಾಷಿಂಗ್ಟನ್: ನೀರು ಮನುಷ್ಯನ ಜೀವನಕ್ಕೆ ಬೇಕಾದ ಪ್ರಮುಖ ಅಂಶವಾಗಿದೆ. ಆದರೆ ಇಲ್ಲೊಂದು ಹುಡುಗಿಗೆ ನೀರೆಂದರೆ ಅಲರ್ಜಿ. ಮೈಗೆ ಸ್ವಲ್ಪ ನೀರು ಬಿದ್ದರೆ ಸಾಕು ಆ್ಯಸಿಡ್ ಬಿದ್ದಂತೆ ಕಿರುಚುತ್ತಾಳೆ. ಈ ವಿಚಿತ್ರ ಘಟನೆ ಅಮೆರಿಕದ ಅರಿಜೋನಾದ ಟಕ್ಸನ್‍ನಲ್ಲಿ ನಡೆದಿದೆ.

ಅಬಿಗೈಲ್ ಬೆಕ್(15) ಇವಳು ಬೆಕ್ ಕಳೆದ ಕೆಲ ವರ್ಷಗಳಿಂದ ಅಕ್ವಾಜೆನಿಕ್ ಉರ್ಟೇರಿಯಾರಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಮೂರು ವರ್ಷಗಳ ಹಿಂದೆ ಇವರಿಗೆ ಈ ರೋಗಲಕ್ಷಣಗಳು ಕಾಣಿಸಿಕೊಂಡಿತ್ತು. ಇದರಿಂದಾಗಿ ಬೆಕ್‍ಗೆ ನಿಯಮಿತವಾಗಿ ಸ್ನಾನ ಮಾಡಲು ಆಗುತ್ತಿಲ್ಲ. ಜೊತೆಗೆ ಬಾಯಾರಿಕೆ ಆದಾಗ ನೀರನ್ನು ಕುಡಿಯಲು ಆಗುತ್ತಿಲ್ಲ. ಬಲಂವತವಾಗಿ ಕುಡಿದರೆ ಆಕೆಗೆ ವಾಂತಿ ಆಗುತ್ತದೆ.

ಅವಳು ಹೇಳುವ ಪ್ರಕಾರ ಕಣ್ಣಿನಿಂದ ನೀರು ಬಂದರು ಮುಖವು ಸುಟ್ಟು ಹೋದ ಅನುಭವವಾಗುತ್ತದೆ. ಮಳೆ ಬಂದಾಗ ಅಥವಾ ಅವಳು ಸ್ನಾನ ಮಾಡುವಾಗ ನೀರನ್ನು ಹಾಕಿದರೆ ಅವಳ ಚರ್ಮದ ಮೇಲೆ ಆ್ಯಸಿಡ್ ಹಾಕಿದಂತೆ ಭಾಸವಾಗುತ್ತದೆ. ನೀರು ಕುಡಿದರೂ ಆಕೆಗೆ ವಾಂತಿ ಆಗುತ್ತದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಒಂದು ಲೋಟ ನೀರು ಕುಡಿದಿಲ್ಲ. ಬದಲಿಗೆ ಹಣ್ಣಿನ ರಸ ಅಂತಹದ್ದನ್ನೇ ಸೇವಿಸುತ್ತಿದ್ದಾಳಂತೆ. ಬಿಜೆಪಿಯಿಂದ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ: ಜೆಪಿ ನಡ್ಡಾ

ಬೆಕ್‍ಗೆ ಈ ರೋಗ ಕಾಣಿಸಿಕೊಂಡ ಆರಂಭದಲ್ಲಿ ಮನೆಯ ನೀರಿನಲ್ಲೇ ಏನಾದರೂ ತೊಂದರೆ ಇದೆ ಎಂದು ಕೊಂಡಿದ್ದಳು. ಆ ನೀರು ಸರಿಯಾಗಿದೆ ಎಂದು ತಿಳಿದ ನಂತರ ಚರ್ಮಕ್ಕೆ ಹಚ್ಚುವ ಲೋಷನ್‍ನಿಂದ ತೊಂದರೆ ಆಗಿದೆ ಎಂದು ಕೊಂಡಳು. ತನ್ನ ರೋಗದ ಬಗ್ಗೆ ಇತರರಿಗೆ ಹೇಳಿದಾಗ ಅವಳನ್ನು ತಮಾಷೆ ಮಾಡಿ ನಕ್ಕಿದ್ದರು. ಕೆಲವರಂತೂ ನಿನಗೆ ಹುಚ್ಚು ಹಿಡಿದಿದೆ ಎಂದಿದ್ದರು. ಆದರೂ ಈ ರೋಗ ಲಕ್ಷಣ ಹೆಚ್ಚಾದಾಗ ವೈದ್ಯರನ್ನು ಸಂಪರ್ಕಿಸಿದಳು.

ಆಗ ವೈದ್ಯರು ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಇದು ಸಾಮಾನ್ಯವಾಗಿ ಸಂಭವಿಸುತ್ತದೆ. ಇದರಿಂದಾಗಿ ವೈದ್ಯರು ಆಕೆಗೆ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಬಿಗೈಲ್ ಈಗ ತನ್ನ ಸ್ಥಿತಿಯ ಬಗ್ಗೆ ಬಹಿರಂಗವಾಗಿ ಜಾಗೃತಿ ಮೂಡಿಸಲು ಸಿದ್ಧವಾಗಿದ್ದಾಳೆ. ಆರೋಪಿ ನಾಗೇಶ್ ಬಂಧಿಸಿದ ಪೊಲೀಸರಿಗೆ ಆರಗ ಜ್ಞಾನೇಂದ್ರ ಧನ್ಯವಾದ

Share This Article
Leave a Comment

Leave a Reply

Your email address will not be published. Required fields are marked *