20 ಅಡಿ ಉದ್ದದ ಫ್ಲೆಕ್ಸ್ ಹಾಕಿಸಿ, ಸನ್ನಿ ಬರ್ತ್‍ಡೇಯನ್ನು ಅದ್ದೂರಿಯಾಗಿ ಆಚರಿಸಿದ ಮಂಡ್ಯ ಅಭಿಮಾನಿಗಳು

Public TV
1 Min Read

ಮಂಡ್ಯ: ಸನ್ನಿಲಿಯೋನ್ ಎಂದರೆ ಸಮಾಜದಲ್ಲಿ ಜನ ನೋಡುವ ದೃಷ್ಟಿಯೇ ಬೇರೆ, ಆದರೆ ಸಕ್ಕರೆ ನಾಡು ಮಂಡ್ಯದ ಅಭಿಮಾನಿಗಳು ಸನ್ನಿಲಿಯೋನ್‍ನ ಸಮಾಜ ಸೇವೆಯನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಿದ್ದಾರೆ.

ಮಂಡ್ಯದ ಕಾರಸವಾಡಿ ಗ್ರಾಮದ ಪ್ರಸಾದ್ ನಗರದ ನೂರಡಿ ರಸ್ತೆಯ ಕರ್ನಾಟಕ ಬಾರ್ ವೃತ್ತದಲ್ಲಿ ಡಿಕೆ ಫ್ರೆಶ್ ಚಿಕನ್ ಸೆಂಟರ್ ಇಟ್ಟಿದ್ದಾರೆ. ಇವರು ಸನ್ನಿಲಿಯೋನ್ ಮಾಡುವ ಸಮಾಜ ಸೇವೆಗೆ ಮಾರುಹೋಗಿ ಆಕೆಯ ಅಪ್ಪಟ ಅಭಿಮಾನಿಯಾಗಿದ್ದಾರೆ. ಆಕೆ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುವ ಕೆಲಸಕ್ಕೆ ಫುಲ್ ಫಿದಾ ಆಗಿದ್ದು, ಆಕೆಯ ಸಮಾಜ ಸೇವೆಗೆ ಮಾರುಹೋಗಿದ್ದಾರೆ. ಹೀಗಾಗಿ ಇಂದು ಸನ್ನಿಲಿಯೋನ್ ಅವರ 41ನೇ ಹುಟ್ಟು ಹಬ್ಬದ ಹಿನ್ನೆಲೆ ಚಿಕನ್ ಸೆಂಟರ್ ಎದುರು ಕೇಕ್ ಕತ್ತರಿಸಿ ಬಡವರಿಗೆ ಬಿರಿಯಾನಿಯನ್ನು ಹಂಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಸನ್ನಿಯ ಪೋಸ್ಟ್‍ಗಳಿಗೆ ಅತೀ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ಸ್ ಮಾಡಿದ ಅಭಿಮಾನಿಗಳಗೆ ತಮ್ಮ ಚಿಕನ್ ಸೆಂಟರ್‍ನಲ್ಲಿ 10% ಡಿಸ್ಕೌಂಟ್‍ನ್ನು ಸಹ ನೀಡಿದ್ದಾರೆ. ಇದನ್ನೂ ಓದಿ: ಸನ್ನಿ ಲಿಯೋನ್ ಮೂರು ಮಕ್ಕಳ ತಾಯಿ, ನೂರಾರು ಕೋಟಿ ಒಡತಿ : ಜಸ್ಟ್ @ 40

ಇದಲ್ಲದೇ ಮಂಡ್ಯ ತಾಲೂಕಿನ ಕೊಮ್ಮೇರನಹಳ್ಳಿ ಗ್ರಾಮದಲ್ಲೂ ಸಹ ಸನ್ನಿಲಿಯೋನ್ ಬರ್ತಡೇ ಆಚರಣೆ ಮಾಡಿದ್ದು, ಗ್ರಾಮದ ರಸ್ತೆಯ ಬಳಿ ಅನಾಥ ಮಕ್ಕಳ ತಾಯಿ ಎಂದು ಸನ್ನಿಲಿಯೋನ್‍ನ 20 ಅಡಿ ಉದ್ದದ ಫೆಕ್ಸ್ ಹಾಕಲಾಗಿದೆ. ಅವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಮಾಡಬೇಕೆಂದು ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ರಕ್ತದಾನ ಶಿಬಿರ ಮಾಡಲಾಯಿತು. ಬಳಿಕ ಗ್ರಾಮದ ಮಕ್ಕಳ ಕೈಯಲ್ಲಿ ಕೇಕ್ ಕತ್ತರಿಸಿ ಇಲ್ಲಿನ ಗ್ರಾಮಸ್ಥರು ಸಂಭ್ರಮಿಸಿ ನಂತರ ಜನರಿಗೆ ಮಾಂಸದ ಊಟವನ್ನು ಹಂಚಲಾಯಿತು.

Share This Article
Leave a Comment

Leave a Reply

Your email address will not be published. Required fields are marked *