ಮಗನ ಮುಂದೆಯೇ 79 ದಿನಗಳ ಕಾಲ ತಾಯಿಯ ಮೇಲೆ ನಿರಂತರ ಅತ್ಯಾಚಾರ

Public TV
1 Min Read

ಭುವನೇಶ್ವರ್: ಮಹಿಳೆಯೊಬ್ಬರು ಎರಡೂವರೆ ವರ್ಷದ ಮಗನ ಮುಂದೆ ವ್ಯಕ್ತಿಯೊಬ್ಬನಿಂದ 79 ದಿನಗಳ ಕಾಲ ಸತತ ಅತ್ಯಾಚಾರಕ್ಕೊಳಗಾದ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರು ಶುಕ್ರವಾರ ಸಂತ್ರಸ್ತೆ ಮತ್ತು ಮಗನನ್ನು ಆರೋಪಿ ಕೋಣೆಯಿಂದ ರಕ್ಷಿಸಿದ್ದಾರೆ. ಈ ವೇಳೆ ಆರೋಪಿಯು ತಲೆಮರೆಸಿಕೊಂಡಿದ್ದು, ಆತನನ್ನು ಹಿಡಿಯಲು ಪೊಲೀಸರು ಜಾಲ ಬೀಸಿದ್ದಾರೆ. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

police (1)

2017 ರಲ್ಲಿ ವಿವಾಹವಾದ ಮಹಿಳೆ, ವರದಕ್ಷಿಣೆಗಾಗಿ ತನ್ನ ಅತ್ತೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಆರೋಪಿಯು ಮಹಿಳೆಯ ಕುಟುಂಬಕ್ಕೆ ಭಿನ್ನಾಭಿಪ್ರಾಯವನ್ನು ಬಗೆಹರಿಸುವದಾಗಿ ಭರವಸೆ ನೀಡಿ, ಮಹಿಳೆಯನ್ನು ಕರೆದುಕೊಂಡು ಹೋಗಲು ಸಿದ್ಧನಾಗಿದ್ದನು. ಆದರೆ ಅವರು ಆರೋಪಿ ಜೊತೆ ಹೋಗಲು ನಿರಾಕರಿಸಿದರು. ಈ ಹಿನ್ನೆಲೆ ಅತ್ತೆ ಮಹಿಳೆಯನ್ನು ಪ್ರಜ್ಞೆ ಹೋಗುವಂತೆ ಥಳಿಸಿ ವ್ಯಕ್ತಿಯ ಕೋಣೆಯಲ್ಲಿ ಕೂಡಿಟ್ಟಿದ್ದರು. ಪ್ರಜ್ಞೆ ಬಂದ ನಂತರದಲ್ಲಿ ಮಹಿಳೆ ತನ್ನ ಮಗನನ್ನು ಹುಡುಕಲು ಆರಂಭಿಸಿದ್ದು, ಮಗ ಆರೋಪಿಯ ಕೋಣೆಯಲ್ಲಿ ಸಿಕ್ಕಿದ್ದಾನೆ. ಇದನ್ನೂ ಓದಿ: ಪತಿ ಆಸೆ ಈಡೇರಿಸಿದ ಪತ್ನಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್

ಏಪ್ರಿಲ್ 28 ರಂದು ಆರೋಪಿಯು ತನ್ನ ಮೊಬೈಲ್ ಫೋನ್ ಅನ್ನು ಕೋಣೆಯಲ್ಲಿಯೇ ಬಿಟ್ಟು ಹೋಗಿರುವುದನ್ನು ಮಹಿಳೆ ಕಂಡುಕೊಂಡು ಕೂಡಲೇ ಪೋಷಕರಿಗೆ ಕರೆ ಮಾಡಿ ತನ್ನ ಕಷ್ಟವನ್ನು ವಿವರಿಸಿದ್ದಾರೆ. ಈ ವೇಳೆ ಮಹಿಳೆಯ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆರೋಪಿಯು ಪರಾರಿಯಾಗಿದ್ದನು. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಸೇರಿದಂತೆ ಹಲವು ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಹಿಳೆಯು ಎಫ್‍ಐಆರ್‌ನಲ್ಲಿ ತನ್ನ ಪತಿ, ಅವನ ಸಹೋದರ ಮತ್ತು ಅತ್ತೆ, ಮಾವನನ್ನು ಹೆಸರಿಸಿದ್ದಾರೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *