ಬ್ಲೂಟೂತ್ ಬಳಸಿ PSI ಪರೀಕ್ಷೆ ಪಾಸ್ ಮಾಡಿದ್ದ ಪ್ರಭು ಅರೆಸ್ಟ್

By
1 Min Read

ಕಲಬುರಗಿ: PSI ಪರೀಕ್ಷಾ ಅಕ್ರಮ ಕುರಿತು ಸಿಐಡಿ ತನಿಖೆ ಚುರುಕುಗೊಳಿಸಿದ್ದು, ಬಂಧಿತ ಆರೋಪಿಗಳ ಸಂಖ್ಯೆ 40ರ ಗಡಿ ದಾಟಿದೆ. ಇಂದೂ ಸಹ ಬೆಂಗಳೂರಿನಲ್ಲಿ ಒರ್ವ ಆರೋಪಿಯನ್ನು ಬಂಧಿಸಲಾಗಿದೆ. ಕಲಬುರಗಿಯಲ್ಲಿ ಇನ್ನೊಬ್ಬ ಆರೋಪಿ ತಾನೇ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಇಲ್ಲಿನ ಮತ್ತೊಂದು MSI ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಬಯಲಾಗಿದೆ. ಈ ಕೇಂದ್ರದಲ್ಲಿ ಒಟ್ಟು 8 ಅಭ್ಯರ್ಥಿಗಳು ಪರೀಕ್ಷೆ ಪಾಸ್ ಮಾಡಿದ್ದರು. ಅವರಲ್ಲಿ ಓರ್ವ ಅಭ್ಯರ್ಥಿ ಪ್ರಭು ಬ್ಲೂಟೂತ್ ಬಳಸಿ ಅಕ್ರಮವಾಗಿ ಪರೀಕ್ಷೆ ಪಾಸ್ ಮಾಡಿದ್ದರು. ನಿನ್ನೆ ಆರೋಪಿ ಪ್ರಭುನೊಂದಿಗೆ ಆತನ ತಂದೆ ಶರಣಪ್ಪನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: MES ಮುಖಂಡ ಶುಭಂ ಶಳಕೆಯಿಂದ DDPI ಕಚೇರಿಗೆ ನುಗ್ಗಿ ಪುಂಡಾಟಿಕೆ – ವೀಡಿಯೋ ವೈರಲ್

PSI EXAMS

ಅಕ್ರಮ ಎಸಗಿದ ಅಭ್ಯರ್ಥಿ ಪ್ರಭು ನನ್ನು ಎಂಎಸ್‌ಐ ಕಾಲೇಜಿನಲ್ಲಿ ಮಹಜರು ನಡೆಸಲಾಗಿದೆ. ಈತ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರು ಬಂದಕೂಡಲೇ ಪೊಲೀಸ್ ಹೇರ್‌ಸ್ಟೈಲ್‌ ಕಟಿಂಗ್ ಸಹ ಮಾಡಿಸಿಕೊಂಡಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗ್ಳೂರಿನ ಕೇಂದ್ರಗಳ ಮೇಲೆ ಕಣ್ಣು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ತನಿಖೆಯು ಇದೀಗ ಕಲಬುರಗಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ವ್ಯಾಪಿಸಿದ್ದು, ಬೆಂಗಳೂರಿನ 7 ಪರೀಕ್ಷಾ ಕೇಂದ್ರಗಳ ಮೇಲೂ ಸಿಐಡಿ ದಾಳಿಯನ್ನು ಮಾಡಿ ಮತ್ತಷ್ಟು ಮಹತ್ವದ ಮಾಹಿತಿ ಬಯಲಿಗೆಳೆಯಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಆ್ಯಸಿಡ್ ದಾಳಿ ಪ್ರಕರಣ – ಯುವತಿಯ ಆರೋಗ್ಯದಲ್ಲಿ ಚೇತರಿಕೆ

PSI EXAM

PSI 545 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ, ಬೆಂಗಳೂರಿನಿಂದ ಆಯ್ಕೆಯಾಗಿದ್ದ 172 ಅಭ್ಯರ್ಥಿಗಳ ಎಫ್‌ಎಸ್‌ಎಲ್ ವರದಿಯಲ್ಲಿ 22 ಅಭ್ಯರ್ಥಿಗಳ ಅಸಲಿ OMR ಮತ್ತು OMR ಕಾರ್ಬನ್ ಪ್ರತಿಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಇದೀಗ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರ ಹೆಸರು ಕೇಳಿಬರುತ್ತಿದ್ದಂತೆ ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಮೇಲೆ ಸಿಐಡಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *