PSI ನೇಮಕಾತಿಯಲ್ಲಿ ಅಕ್ರಮ – ಬೆಂಗ್ಳೂರಿನ 7 ಪರೀಕ್ಷಾ ಕೇಂದ್ರಗಳ ಮೇಲೆ ಕಣ್ಣು

Public TV
1 Min Read

ಬೆಂಗಳೂರು: PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ತನಿಖೆಯು ಇದೀಗ ಕಲಬುರಗಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ವ್ಯಾಪಿಸಿದೆ.

ಪಿಎಸ್‌ಐ 545 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ, ಬೆಂಗಳೂರಿನಿಂದ ಆಯ್ಕೆಯಾಗಿದ್ದ 172 ಅಭ್ಯರ್ಥಿಗಳ ಎಫ್‌ಎಸ್‌ಎಲ್ ವರದಿಯಲ್ಲಿ 22 ಅಭ್ಯರ್ಥಿಗಳ ಅಸಲಿ ಓಎಂಆರ್ ಮತ್ತು ಓಎಂಆರ್ ಕಾರ್ಬನ್ ಪ್ರತಿಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರ ಹೆಸರು ಕೇಳಿಬರುತ್ತಿದ್ದಂತೆ ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಮೇಲೆ ಸಿಐಡಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ: PSI ಟಾಪರ್ಸ್‍ಗಳ ಅಸಲಿ ಮುಖವಾಡ ಬಯಲು – ತಾತ್ಕಾಲಿಕ ಪಟ್ಟಿಯಲ್ಲಿ ಬೆಂಗ್ಳೂರಿನ 172 ಮಂದಿ ಆಯ್ಕೆ!

PSI CASE TOPERS

ಈಗಾಗಲೇ 12 ಅಭ್ಯರ್ಥಿಗಳ ಬಂಧನ ಮಾಡಿರೋ ಸಿಐಡಿ, ಇಂದು ಮತ್ತಷ್ಟು ಕಡೆ ದಾಳಿಯನ್ನು ಮಾಡಲಿದೆ. ಬೆಂಗಳೂರಿನ 7 ಪರೀಕ್ಷಾ ಕೇಂದ್ರಗಳ ಮೇಲೂ ದಾಳಿಯನ್ನು ಮಾಡಿ ಮತ್ತಷ್ಟು ಮಹತ್ವದ ಮಾಹಿತಿ ಬಯಲಿಗೆಳೆಯಲಿದೆ ಎಂದು ತಿಳಿದು ಬಂದಿದೆ.

ಪಿಎಸ್‌ಐ ಪರೀಕ್ಷೆಯ ಅಕ್ರಮದಲ್ಲಿ ಬೆಂಗಳೂರಿನ ಪಾಲು ಬಹಳ ದೊಡ್ಡದಿದೆ. ಅದಕ್ಕೆ ಅರೆಸ್ಟ್ ಆಗಿ ಸಿಐಡಿ ಕಸ್ಟಡಿಯಲ್ಲಿರೋ ಅಭ್ಯರ್ಥಿಗಳ ಸಂಖ್ಯೆ ಸಾಕ್ಷಿ. ಅಲ್ಲದೆ, ಬಹುತೇಕ ಟಾಪರ್ಸ್‌ಗಳೇ ಹಿಟ್ ಲಿಸ್ಟ್ನಲ್ಲಿದ್ದಾರೆ. ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆ ಆಗಿರುವ ಟಾಪರ್ಸ್‌ಗಳೇ ಆರೋಪಿಗಳ ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವಥ್ ನಾರಾಯಣ ಹೆಗಲು ಮುಟ್ಟಿಕೊಂಡು ನೋಡಿಕೊಂಡಿದ್ದೇಕೆ: ಡಿಕೆಶಿ ಪ್ರಶ್ನೆ

ASHWATH NARAYAN 1

ಈ ಪ್ರಕರಣದಲ್ಲಿ ಬಿಜೆಪಿ ಪ್ರಮುಖ ಸಚಿವನನ್ನೇ ಟಾರ್ಗೆಟ್ ಮಾಡಿ ಗದ್ದಲ ಎಬ್ಬಿಸಿದೆ ಎಂಬ ಆರೋಪ ಕೇಳಿಬರುತ್ತದೆ.ಈಗಾಗಲೇ ಅಶ್ವಥ್ ನಾರಾಯಣ್ ವಿರುದ್ಧ ಸಮರ ಸಾರಿದ ಕಾಂಗ್ರೆಸ್ ಇನ್ನೂ ಇಬ್ಬರ ಮೇಲೆ ಕಣ್ಣು ಇಟ್ಟಿದೆ. ಶೀಘ್ರದಲ್ಲೇ ತನ್ನ ಬತ್ತಳಿಕೆಯಿಂದ ಅಸ್ತ್ರಗಳನ್ನು ಪ್ರಯೋಗಿಸಲಿದೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *