24 ಗಂಟೆಯಲ್ಲಿ ಪಾಕ್ ನೂತನ ಪ್ರಧಾನಿಗೆ 2 ಬಾರಿ ಅಪಮಾನ- 17 ಕೆಲಸಗಾರರ ವಜಾ

Public TV
2 Min Read

ದುಬೈ: ಇತ್ತೀಚೆಗಷ್ಟೇ ಪೀಠ ಅಲಂಕರಿಸಿದ ಪಾಕಿಸ್ತಾನದ ನೂತನ ಪ್ರಧಾನಿ ಶಹಾಬಾಜ್ ಷರೀಫ್‌ಗೆ ಸೌದಿ ಅರೇಬಿಯಾದಲ್ಲಿ ಅಪಮಾನವಾಗಿದ್ದು, ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಈ ಘಟನೆ ನಡೆದಿದೆ. ಘಟನೆ ವೇಳೆ ಪ್ರಧಾನಿಗೆ ಸೂಕ್ತ ರಕ್ಷಣೆ ನೀಡದ ಹಿನ್ನೆಲೆಯಲ್ಲಿ 17 ರಕ್ಷಣಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

Shehbaz Sharif

ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಇತ್ತೀಚೆಗೆ ತಮ್ಮ ತಂಡದೊಂದಿಗೆ ಸೌದಿ ಅರೇಬಿಯಾದ ಮೆದಿಯಾನಾದಲ್ಲಿರುವ ಮಸ್ಜಿದ್-ಇ-ನಬಾವಿಗೆ ತೆರಳಿದಾಗ ಅಲ್ಲಿನ ಪಾಕ್ ಮೂಲದ ಜನರು ಅವರಿಗೆ ಅವಮಾನ ಮಾಡಿದ್ದು, ಈ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಪಾಕ್ ಪ್ರಧಾನಿಗೆ ಅಪಮಾನ ಆಗಿದೆ. ಇದನ್ನೂ ಓದಿ; ಚೀನಾದ 6 ಅಂತಸ್ತಿನ ಕಟ್ಟಡ ಕುಸಿತ – 39 ಜನ ನಾಪತ್ತೆ

ಶಹಾಬಾಜ್ ನಡೆದು ಬರುತ್ತಿದ್ದ ವೇಳೆ, ಜನರು ಅವರಿಗೆ `ಕಳ್ಳ- ಕಳ್ಳ’, ಪಾಕಿಸ್ತಾನಿ ವಿರೋಧಿ, ಶೆಹಾಬಾಜ್ ವಿದೇಶಿಗರ ಮಾತಿನಂತೆ ಸರ್ಕಾರ ನಡೆಸುತ್ತಿರುವ ದೇಶ ದ್ರೋಹಿ ಎಂದು ಅಲ್ಲಗಳೆದಿದ್ದಾರೆ. ಈ ವಿಚಾರವಾಗಿ ಪಾಕ್‌ನ ಈಗಿನ ಮಾಹಿತಿ ಸಚಿವಾಲಯದ ಸಚಿವರಾಗಿರುವ ಮರಿಯುಮ್ ಔರಂಗಜೇಬ್ ಮಾತನಾಡಿದ್ದು, ಹಳೆದ ಸರ್ಕಾರ ಪೂರ್ತಿ ಪಾಕಿಸ್ತಾನವನ್ನು ಹಾಳು ಮಾಡಿದೆ. ಆದರೆ ನಾವು ನಮ್ಮ ದೇಶವನ್ನು ಸರಿ ದಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲಿ ಅಶ್ಲೀಲ ವೀಡಿಯೋ ವೀಕ್ಷಣೆ – ಬ್ರಿಟನ್ ಶಾಸಕ ರಾಜೀನಾಮೆ

2ನೇ ಬಾರಿಗೆ ಶಹಾಬಾಜ್ ಷರೀಫ್ ಭಾರೀ ಭದ್ರತೆಯಲ್ಲಿ ಪ್ರವೇಶಿದ್ದು, ಈ ವೇಳೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿತ್ತು. ಆದರೂ ಜನರು ತಾವಿದ್ದಲ್ಲಿಂದಲೇ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ನನ್ನು ಕೆಳಗಿಳಿಸಿ ಶಹಾಬಾಜ್ ಹೇಗೆ ಪ್ರಧಾನಿಯಾದರು ಎಂಬುದರ ಬಗ್ಗೆ ಬ್ಲಾಗ್‌ವೊಂದರಲ್ಲಿ ಬರೆದು ಅಪಮಾನ ಮಾಡಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್

IMRANKHAN

ಇದಕ್ಕೂ ಮುನ್ನ, ಷರೀಫ್ ನೇತೃತ್ವದ ನಿಯೋಗವು ಮದೀನಾದ ಮಸೀದಿ-ಎ-ನಬವಿಯನ್ನು ಪ್ರವೇಶಿಸಿದಾಗಲೂ `ಚೋರ್ ಚೋರ್’ ಎಂಬ ಘೋಷಣೆ ಕೇಳಿಬಂದಿತ್ತು. ಅದೇ ರೀತಿ ಸೌದಿ ಅರೇಬಿಯಾದಲ್ಲಿ ಅಧಿಕಾರಿಗಳು ನಿಯೋಗದ ವಿರುದ್ಧ ಘೋಷಣೆ ಕೂಗುತ್ತಿದ್ದ ಕೆಲವು ಪಾಕಿಸ್ತಾನಿ ಯಾತ್ರಿಕರನ್ನು ಮಸೀದಿಯ ಪಾವಿತ್ರ‍್ಯಕ್ಕೆ ಅಗೌರವ ತೋರಿದ ಕಾರಣ ನೀಡಿ ಬಂಧಿಸಲಾಗಿದೆ ಎಂದು ಸೌದಿ ರಾಯಭಾರಿ ಕಚೇರಿಯ ಮಾಧ್ಯಮ ನಿರ್ದೇಶಕರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *