ಇಂಟರ್‌ನ್ಯಾಷನಲ್ ಶೆಫ್ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ?

Public TV
1 Min Read

ಟಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ `ಬಾಹುಬಲಿ’ ಸೂಪರ್ ಸಕ್ಸಸ್ ನಂತರ ಕಡೆಯದಾಗಿ ಕಾಣಿಸಿಕೊಂಡ ಚಿತ್ರ `ನಿಶಬ್ದಂ’.  ಇದೀಗ ಎರಡು ವರ್ಷಗಳ ನಂತರ ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ಅನುಷ್ಕಾ ಸಜ್ಜಾಗಿದ್ದಾರೆ. ಈ ಬಾರಿ ಇಂಟರ್‌ನ್ಯಾಷನಲ್ ಶೆಫ್‌ ಪಾತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ತೆಲುಗಿನ `ಲೈಫ್ ಇಸ್ ಬ್ಯೂಟಿಫುಲ್’ ಚಿತ್ರದ ಮೂಲಕ ಸಿನಿರಂಗಕ್ಕೆ ಪರಿಚಿತರರಾದ ನಟ ನವೀನ್ ಪೋಲಿಶೆಟ್ಟಿ ಜತೆ ಸೂಪರ್ ಸ್ಟಾರ್ ಅನುಷ್ಕಾ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಸಾಯಿ ಶ್ರೀನಿವಾಸ್ ಅಥ್ರೇಯ ನಿರ್ದೇಶನದ ಹೆಸರಿಡದ ಹೊಸ ಚಿತ್ರಕ್ಕೆ ಸ್ವೀಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಯಸ್ಸಿನ ಅಂತರಯಿರೋ ವಿಭಿನ್ನ ಪ್ರೇಮಕಥೆಯನ್ನ ತೋರಿಸಲು ಹೊರಟಿದ್ದಾರೆ ನಿರ್ದೇಶಕರು.

`ಬಾಹುಬಲಿ’, `ಭಾಗಮತಿ’, `ನಿಶಬ್ಧಂ’ ಚಿತ್ರದ ನಂತರ ಡಿಫರೆಂಟ್ ಕಥೆಯನ್ನೇ ಅನುಷ್ಕಾ ಆಯ್ಕೆ ಮಾಡಿಕೊಂಡಿದ್ದಾರೆ. ನಾಯಕಿಗೆ 40 ವರ್ಷ ವಯಸ್ಸು, ಹೀರೋ 20 ವರ್ಷ ಇವರಿಬ್ಬರ ನಡುವೆ ಲವ್ ಹೇಗೆ ಆಗುತ್ತೆ ಮುಂದೆ ಎನೆಲ್ಲಾ ಟ್ವಿಸ್ಟ್ ಇದೇ ಅನ್ನೋ ಕಥೆಯ ತಿರುಳು. ಚಿತ್ರದಲ್ಲಿ ಸ್ವೀಟಿ ಇಂಟರ್‌ನ್ಯಾಷನಲ್ ಶೆಫ್ ಪಾತ್ರಕ್ಕೆ ಜೀವತುಂಬ್ತಿದ್ದಾರೆ. ಡಿಫರೆಂಟ್ ಲೆಯರ್‌ನಲ್ಲಿ ಪಾತ್ರ ಮೋಡಿ ಮಾಡಲಿದೆಯಂತೆ. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಅಡ್ಡಿ : ಕರವೇಯಿಂದ ಪ್ರತಿಭಟನೆ

ಮೊದಲ ಬಾರಿಗೆ ಅನುಷ್ಕಾ ಮತ್ತು ನವೀನ್ ತೆರೆಯ ಮೇಲೆ ಒಂದಾಗ್ತಿದ್ದಾರೆ. ಯುವಿ ಕ್ರಿಯೇಷನ್ಸ್ ಅಡಿಯಲ್ಲಿ ಸಿನಿಮಾ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನೆಚ್ಚಿನ ನಟಿ ಅನುಷ್ಕಾ ಇಂಟರ್‌ನ್ಯಾಷನಲ್ ಶೇಫ್ ಪಾತ್ರದಲ್ಲಿ ಕಾಣಿಸಿಕೊಳ್ತಿರೋದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *